ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ನ ಬೆಳ್ಳಿ ಹಬ್ಬ ಆಚರಣೆ

Update: 2019-02-10 15:43 GMT

ಬಹರೈನ್, ಫೆ. 9: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಸಮುದಾಯದ ಒಕ್ಕೂಟವಾದ "ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸ್ಸೋಸಿಯೇಶನ್" ತನ್ನ ಬೆಳ್ಳಿ ಹಬ್ಬದ ಆಚರಣೆಯನ್ನು ಸಲ್ಮಾನಿಯ ಪರಿಸರದಲ್ಲಿರುವ ಮರ್ಮರಿಸ್ ಸಭಾಂಗಣದಲ್ಲಿ ಆಚರಿಸಿತು.

ನಗರಾಭಿವೃದ್ಧಿ ಸಚಿವ ಹಾಗು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಯು.ಟಿ.ಖಾದರ್ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ಮಾಜಿ ಸಚಿವ ರಮಾನಾಥ ರೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಜಿ ಶಾಸಕ ಮೊಯ್ದಿನ್ ಬಾವ ಹಾಗು ಇತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಭಾಕಾರ್ಯಕ್ರಮದಲ್ಲಿ ಸಚಿವ ಖಾದರ್,  ರಮಾನಾಥ್ ರೈ,ಮೊಯ್ದಿನ್ ಬಾವ, ಡಾ. ಅಬ್ದುಲ್ ರೆಹಮಾನ್, ಬಿಸಿಸಿಐ ಸ್ಥಾಪಕ ಅಧ್ಯಕ್ಷ ರಶೀದ್ ಎಸ್ ಎಂ ಆರ್, ಅಲ್ ಹಿಲಾಲ್ ಹಾಸ್ಪಿಟಲ್ ನ ಅಬ್ದುಲ್ ಲತೀಫ್, ವಿ. ಅಬ್ದುಲ್ ಖಾದರ್ ಹಾಜಿ, ಕೆ.ಎಸ್. ಶೇಖ್ ಕರ್ನಿರೆ, ಯು.ಟಿ. ಇಫ್ತಿಕಾರ್, ಝಖೀರ್ ಅಹ್ಮದ್, ಅಮರನಾಥ್ ರೈ ಹಾಗು ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್  ಅಧ್ಯಕ್ಷ ಅಬ್ದುಲ್ ರಝಾಕ್ ಹಾಜಿ ಉಪಸ್ಥಿತರಿದ್ದರು.

ಬೆಳ್ಳಿಹಬ್ಬದ ಸಮಾರೋಪ ಸಮಾರಂಭಕ್ಕೆ ಮುನ್ನ ಸುಮಾರು ಒಂದು ತಿಂಗಳ ಕಾಲ ಕಬ್ಬಡಿ, ಕ್ರಿಕೆಟ್, ವಾಲಿಬಾಲ್ ಹಾಗು ಇನ್ನಿತರ ಆಟೋಟ ಸ್ಪರ್ಧೆಗಳು, ಆಹಾರೋತ್ಸವ ಮುಂತಾದ ಕಾರ್ಯಕಮಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಹಿಲ್ ಝಹೀರ್ ಕಾರ್ಯಕ್ರಮ ನಿರೂಪಿಸಿದರು.

ಚಿತ್ರ, ವರದಿ: ಕಮಲಾಕ್ಷ ಅಮೀನ್ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News