ವಾಹನ ಚಾಲನೆ ಪರವಾನಿಗೆ ನವೀಕರಿಸಿದ 97 ವರ್ಷದ ಅಜ್ಜ !

Update: 2019-02-11 15:47 GMT

ದುಬೈ, ಫೆ. 11: ಈ 97 ವರ್ಷದ ಅಜ್ಜನಿಗೆ ಹೆಚ್ಚುತ್ತಿರುವ ಪ್ರಾಯ ಒಂದು ತಡೆಯಲ್ಲ. ಅವರು ಮುಂದಿನ ನಾಲ್ಕು ವರ್ಷಗಳ ಅವಧಿಗೆ ತನ್ನ ವಾಹನ ಚಾಲನಾ ಪರವಾನಿಗೆಯನ್ನು ನವೀಕರಿಸಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ಭಾರತ ಮೂಲದ ಟೆಹೆಮ್ಟನ್ ಹೋಮಿ ದುಂಜಿಬಾಯ್ ಮೆಹ್ತಾ ಇನ್ನು ಮೂರು ವರ್ಷಗಳಲ್ಲಿ ದುಬೈಯ ರಸ್ತೆಗಳಲ್ಲಿ ವಾಹನ ಚಲಾಯಿಸುವ ಪ್ರಥಮ ಶತಕವೀರನಾಗುವ ಎಲ್ಲ ಸಾಧ್ಯತೆಗಳಿವೆ.

ಅವರ ವಾಹನ ಚಾಲನಾ ಪರವಾನಿಗೆ 2023 ಅಕ್ಟೋಬರ್‌ವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.

ಭಾರತ ಮೂಲದ ಕೆನ್ಯ ಪ್ರಜೆಯಾಗಿರುವ ಮೆಹ್ತಾ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ. ಅವರು ನಡೆಯುವುದನ್ನು ಇಷ್ಟಪಡುತ್ತಾರೆ. ಕೆಲವು ಬಾರಿ ಅವರು ಪ್ರತಿದಿನ ನಾಲ್ಕು ಗಂಟೆಗಳ ಕಾಲ ನಡೆಯುತ್ತಿದ್ದಾರೆ. ಅವರು ಮದುವೆಯಾಗಿಲ್ಲ.

ಅವರು ವಾಹನ ಚಾಲನೆ ಮಾಡುವುದು ಅಪರೂಪ. ಅವರು 2004ರಲ್ಲಿ ಕೊನೆಯದಾಗಿ ವಾಹನ ಚಲಾಯಿಸಿದ್ದರು. ಅವರು ಈಗ ಹೆಚ್ಚಾಗಿ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಾರೆ ಅಥವಾ ನಡೆಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News