ಕ್ಷಿಪಣಿ ಕಾರ್ಯಕ್ರಮ ಮುಂದುವರಿಕೆಗೆ ಇರಾನ್ ದೃಢ ನಿರ್ಧಾರ: ಹಸನ್ ರೂಹಾನಿ

Update: 2019-02-11 15:54 GMT

ದುಬೈ, ಫೆ. 11: ಶತ್ರು ದೇಶಗಳ ಹೆಚ್ಚುತ್ತಿರುವ ಒತ್ತಡದ ಹೊರತಾಗಿಯೂ, ತನ್ನ ಸೇನಾ ಶಕ್ತಿ ಮತ್ತು ಕ್ಷಿಪಣಿ ಕಾರ್ಯಕ್ರಮಗಳನ್ನು ವಿಸ್ತರಿಸಲು ಇರಾನ್ ದೃಢನಿರ್ಧಾರ ಮಾಡಿದೆ ಎಂದು ದೇಶದ ಅಧ್ಯಕ್ಷ ಹಸನ್ ರೂಹಾನಿ ಸೋಮವಾರ ಹೇಳಿದ್ದಾರೆ ಎಂದು ಸರಕಾರಿ ಟಿವಿ ವರದಿ ಮಾಡಿದೆ.

‘‘ವಿವಿಧ ರೀತಿಯ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲು ನಾವು ಹಿಂದೆಯೂ ಅನುಮತಿ ಕೇಳಿಲ್ಲ, ಇನ್ನೂ ಕೇಳುವುದಿಲ್ಲ. ನಾವು ನಮ್ಮ ದಾರಿಯಲ್ಲಿ ಸಾಗುತ್ತೇವೆ ಹಾಗೂ ನಮ್ಮ ಸೇನಾ ಶಕ್ತಿಯನ್ನು ವಿಸ್ತರಿಸುತ್ತೇವೆ’’ ಎಂದು ಅವರು ನುಡಿದರು.

ಇರಾನ್‌ ನ ಇಸ್ಲಾಮಿಕ್ ಕ್ರಾಂತಿಯ 40ನೇ ವಾರ್ಷಿಕ ದಿನದ ಸಂದರ್ಭದಲ್ಲಿ ಟೆಹರಾನ್‌ನ ‘ಆಝಾದಿ ಚೌಕ’ದಲ್ಲಿ ನೆರೆದ ಸಾವಿರಾರು ಜನರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಕಳೆದ ವರ್ಷ ಇರಾನ್ ಜೊತೆಗಿನ ಪರಮಾಣು ಒಪ್ಪಂದದಿಂದ ಹಿಂದೆ ಸರಿದ ಬಳಿಕ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ಹೊಸದಾಗಿ ವಿಧಿಸಿರುವ ಆರ್ಥಿಕ ದಿಗ್ಬಂಧನಗಳನ್ನು ದೇಶವು ಸೋಲಿಸಲಿದೆ ಎಂದು ಅವರು ಪ್ರತಿಜ್ಞೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News