ಫ್ಲಾರಿಡಾ ವಿವಿ ಜೊತೆ ಜಿಎಂಯು ಒಪ್ಪಂದ

Update: 2019-02-14 17:27 GMT

ಅಜ್ಮಾನ್,ಫೆ.14: ಮಧ್ಯ ಏಶ್ಯ ಪ್ರಾಂತದ ಪ್ರಮುಖ ವೈದ್ಯಕೀಯ ವಿಶ್ವವಿದ್ಯಾನಿಲಯವಾದ ಅಜ್ಮಾನ್‌ನ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (ಜಿಎಂಯು), ಅಮೆರಿಕದ ಮುಂಚೂಣಿಯ ವಿವಿಗಳಲ್ಲೊಂದಾದ ಫ್ಲಾರಿಡಾದ ಸೆಂಟ್ರಲ್ ಪ್ಲಾರಿಡಾ ಯೂನಿವರ್ಸಿಟಿ ಜೊತೆ ಒಪ್ಪಂದವೊಂದನ್ನು ಏರ್ಪಡಿಸಿಕೊಂಡಿದೆ. 

ಗಲ್ಫ್ ಮೆಡಿಕಲ್ ಯೂನಿರ್ಸಿಟಿಯ ಕಾಲೇಜ್ ಆಫ್ ಹೆಲ್ತ್‌ಕೇರ್ ಮೆನೇಜ್‌ಮಂಟ್ ಆ್ಯಂಡ್ ಇಕನಾಮಿಕ್ಸ್ ಆರಂಭಿಸಿರುವ ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್ ಆ್ಯಂಡ್ ಇಕನಾಮಿಕ್ಸ್ (ಇಎಂಎಚ್‌ಎಂಇ)ನಲ್ಲಿ ವಿಶೇಷ ಸ್ನಾತಕೋತ್ತರ ಪದವಿಕೋರ್ಸನ್ನು, ಫ್ಲಾರಿಡಾ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ನಡೆಸಲಾಗುವುದು. ಈ ಬಗ್ಗೆ ಉಭಯ ವಿಶ್ವವಿದ್ಯಾನಿಲಯಗಳು 2018ರ ಫೆಬ್ರವರಿ 6ರಂದು ಯುಸಿಎಫ್ ಕ್ಯಾಂಪಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಒಪ್ಪಂದವೊಂದಕ್ಕೆ ಸಹಿ ಹಾಕಿದವು.

ಜಿಎಂಯುನ ಕುಲಪತಿ ಪ್ರೊ.ಹೊಸ್ಸಾಮ್‌ ಹಮ್ದಿ ಹಾಗೂ ಯುಸಿಎಫ್‌ನ ಟ್ರಸ್ಟಿಗಳ ಮಂಡಳಿಯ ವೈಸ್ ಪ್ರೊವೊಸ್ಟ್ ಪ್ರೊ. ಜೆ.ಜೆಫ್ರಿ ಜಾನ್ಸ್ ಪ್ರತಿನಿಧಿಗಳಾಗಿ ಪಾಲ್ಗೊಂಡಿದ್ದರು. ಉಭಯ ವಿಶ್ವವಿದ್ಯಾನಿಲಯಗಳ ಬಗ್ಗೆ ಏರ್ಪಟ್ಟ ಒಪ್ಪಂದವು ವಿದ್ಯಾರ್ಥಿ ಹಾಗೂ ಬೋಧಕವರ್ಗದ ವಿನಿಮಯಕ್ಕೆ ಅವಕಾಶ ನೀಡುವ ಜೊತೆಗೆ ಬೋಧನೆ, ಸಂಶೋಧನೆ ಹಾಗೂ ಸಾಮುದಾಯಿಕ ತಲುಪುವಿಕೆಗೆ ಜಂಟಿ ಉಪಕ್ರಮಗಳನ್ನು ಕೈಗೊಳ್ಳುವುದಕ್ಕೆ ಉತ್ತೇಜನ ನೀಡಲಿದೆ.

ಈ ಎರಡೂ ವಿಶ್ವವಿದ್ಯಾನಿಲಯಗಳು ಜಂಟಿ ಸಂಶೋಧನೆ ಹಾಗೂ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲಿವೆ ಹಾಗೂ ಜಂಟಿಯಾಗಿ ಶೈಕ್ಷಣಿಕ ಕೋರ್ಸ್‌ಗಳು, ಸಮಾವೇಶಗಳು, ವಿಚಾರ ಸಂಕಿರಣ ಹಾಗೂ ಜಂಟಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಕೂಡಾ ಆಯೋಜಿಸಲಿವೆ.

ಸ್ನಾತಕೋತ್ತರ ಕೋರ್ಸ್‌ನ ಜೊತೆಗೆ ಜಿಎಂಯುನ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಇಕನಾಮಿಕ್ಸ್ (ಬಿಎಸ್‌ಸಿ, ಎಚ್‌ಎಂಇ),ನಾಲ್ಕು ವರ್ಷಗಳ ಅವಧಿಯ ಸಯನ್ಸ್ ಇನ್ ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್ ಆ್ಯಂಡ್ ಇಕನಾಮಿಕ್ಸ್ (ಬಿಎಸ್‌ಸಿ, ಎಚ್‌ಎಂಇ) ಕೋರ್ಸನ್ನು ಕೂಡಾ 2019ರ ಸೆಪ್ಟೆಂಬರ್‌ನಲ್ಲಿ ಆರಂಭಿಸಲಿದೆ.

ಕಾಲೇಜ್ ಆಫ್ ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್ ಆ್ಯಂಡ್ ಇಕನಾಮಿಕ್ಸ್‌ನ ಕೋರ್ಸ್‌ಗಳಿಗೆ, ಯುಎಇನ ಶಿಕ್ಷಣ ಸಚಿವಾಲಯದ ಶೈಕ್ಷಣಿಕ ಮಾನ್ಯತೆಗಾಗಿನ ಆಯೋಗದಿಂದ ಮಾನ್ಯತೆಯನ್ನು ಪಡೆದಿದೆ. ಮಿಲನ್ ವಿಶ್ವವಿದ್ಯಾನಿಲಯ, ಅರಿರೊನಾ ವಿಶ್ವವಿದ್ಯಾನಿಲಯ, ಕೈರೋದ ಅಮೆರಿಕನ್ ವಿಶ್ವವಿದ್ಯಾನಿಲಯಗಳು, ಎಎಂಯು ಸಹಯೋಗದೊಂದಿಗೆ ಕೋರ್ಸ್‌ಗಳನ್ನು ನಡೆಸುತ್ತಿರುವ ಇತರ ಪ್ರಮುಖ ಅಂತಾರಾಷ್ಟ್ರೀಯ ವಿವಿಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News