ಫೆ.16: ಜಿಎಂಯು-ಸೆಂಟ್ರಲ್ ಫ್ಲಾರಿಡಾ ವಿವಿಯಿಂದ ಸ್ನಾತಕೋತ್ತರ ವಿಚಾರ ಸಂಕಿರಣ

Update: 2019-02-14 16:43 GMT

ಅಜ್ಮಾನ್,ಫೆ.14: ಜಿಎಂಯು ಹೊಸದಾಗಿ ಆರಂಭಿಸಿರುವ ಕಾಲೇಜ್ ಆಫ್ ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್ ಆ್ಯಂಡ್ ಇಕನಾಮಿಕ್ಸ್, ಫ್ಲೊರಿಡಾದ ಸೆಂಟ್ರಲ್ ಫ್ಲೊರಿಡಾ ವಿವಿಯ ಸಹಯೋಗದೊಂದಿಗೆ ಆರೋಗ್ಯಪಾಲನೆ ನಿರ್ವಹಣೆ ಕುರಿತ ಎರಡನೆ ಸ್ನಾತಕೋತ್ತರ ಸೆಮಿನಾರ್ ಜಿಎಂಯು ಕ್ಯಾಂಪಸ್‌ಲ್ಲಿ ಫೆಬ್ರವರಿ 16ರಂದು ನಡೆಯಲಿದೆ.

‘‘ಆರೋಗ್ಯ ನಿರ್ವಹಣಾ ಪ್ರತಿಭೆ ಹಾಗೂ ವೌಲ್ಯಾಧಾರಿತ ಆರೋಗ್ಯಪಾಲನೆಗಾಗಿನ ಶಿಕ್ಷಣ’ ಎಂದು ಹೆಸರಿಡಲಾದ ಈ ವಿಚಾರ ಸಂಕಿರಣದ ನೇತೃತ್ವವನ್ನು ಆರೋಗ್ಯ ನಿರ್ವಹಣೆ ಹಾಗೂ ಸೆಂಟ್ರಲ್ ಫ್ಲೊರಿಡಾ ವಿವಿಯ ಹೆಲ್ತ್‌ಮ್ಯಾನೇಜ್‌ಮೆಂಟ್ ಹಾಗೂ ಇನ್‌ಫಾರ್ಮಾಟಿಕ್ಸ್ ವಿಭಾಗದ ಗ್ಲೋಬಲ್ ಹೆಲ್ತ್ ಇನಿಶಿಯೇಟಿವ್ಸ್‌ನ ನಿರ್ದೇಶಕ ಪ್ರೊ. ಬರ್ನಾರ್ಡೊ ರಾಮಿರೆಝ್ ವಹಿಸಿದ್ದರು.

ಉಚಿತವಾಗಿ ಆಯೋಜಿಸಲಾದ ಈ ಸರಣಿ ವಿಚಾರ ಸಂಕಿರಣವು ಆರೋಗ್ಯಪಾಲನೆ ನಿರ್ವಹಣೆ, ಆಸ್ಪತ್ರೆ ನಿರ್ವಹಣೆ, ಆರೋಗ್ಯ ಅರ್ಥಶಾಸ್ತ್ರ, ವಿತ್ತ ಇತ್ಯಾದಿ ವಿಷಯಗಳ ಕುರಿತ ಅತ್ಯಾಧುನಿಕ ವ್ಯವಸ್ಥೆಗಳನ್ನು ಯುಎಇಗೆ ಪರಿಚಯಿಸುವ ನಿರೀಕ್ಷೆಯಿದೆ.

ಈ ಸರಣಿಯ ಮೊದಲ ವಿಚಾರ ಸಂಕಿರಣವನ್ನು ಫೆಬ್ರವರಿ 11ರಂದು ದುಬೈನ ಲಾ ಮೆರಿಡಿಯನ್‌ನಲ್ಲಿ ಆಯೋಜಿಸಲಾಗಿತ್ತು. ಕ್ಲಿನಿಕ್‌ತಜ್ಞರು ಹಾಗೂ ಮ್ಯಾನೇಜರ್‌ಗಳಿಗಾಗಿನ ನೂತನ ಸವಾಲುಗಳು ಎಂದು ಶೀರ್ಷಿಕೆಯ ಈ ವಿಚಾರ ಸಂಕಿರಣವನ್ನು ಮಿಲನ್ ವಿ.ಯ ಆರೋಗ್ಯ ನಿರ್ವಹಣಾ ವಿಭಾಗದ ಪ್ರೊಫೆಸರ್ ಫೆಡಿರಿಕೊ ಲೆಗಾ ನಡೆಸಿಕೊಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News