ಜಿಎಂಯುನಲ್ಲಿ 18ನೇ ವಾರ್ಷಿಕ ಕ್ರೀಡೋತ್ಸವ

Update: 2019-02-14 17:13 GMT

ಅಜ್ಮಾನ್,ಫೆ.14: ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (ಜಿಎಂಯು) 18ನೇ ವಾರ್ಷಿಕ ಕ್ರೀಡೋತ್ಸವಕ್ಕೆ ಫೆಬ್ರವರಿ 9ರಂದು ಜಿಎಂಯು ಕ್ಯಾಂಪಸ್‌ನಲ್ಲಿ ವರ್ಣರಂಜಿತವಾಗಿ ಉದ್ಘಾಟನೆಗೊಂಡಿತು. ಒಂದು ವಾರ ಕಾಲ ನಡೆದ ಕ್ರೀಡೋತ್ಸವವ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಎಂಯುನ ಕುಲಪತಿ ಪ್ರೊ. ಹೊಸ್ಸಾಂಹಮ್ದಿ ಉದ್ಘಾಟಿಸಿದರು.

ಕ್ರೀಡೋತ್ಸವದಲ್ಲಿ ಪಾಲ್ಗೊಂಡ ತಂಡಗಳ ವರ್ಣರಂಜಿತ ಪಥಸಂಚಲನದ ಬಳಿಕ ಕ್ರೀಡಾಜ್ಯೋತಿಯನ್ನು ಬೆಳಗಿಸಲಾಯಿತು. ಜಿಎಂಯುನ ಅಕಾಡಮಿಕ್ಸ್‌ನ ಉಪಕುಲಪತಿ ಪ್ರೊ. ಮಾಂಡ ವೆಂಕಟರಮಣ ಕ್ರೀಡಾಜ್ಯೋತಿ ಬೆಳಗಿಸಿದರು.

ಯುಎಇನ ಅತಿ ದೊಡ್ಡ ಕ್ರೀಡಾ ಉತ್ಸವವೆಂದು ಪರಿಗಣಿಸಲಾಗಿರುವ ಈ ವರ್ಷದ ಕ್ರೀಡಾಕೂಟದಲ್ಲಿ 26 ವಿವಿಧ ಕಾಲೇಜುಗಳು ಹಾಗೂ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, 6 ದಿನಗಳ ಕಾಲ ನಡೆದ 10 ಶ್ರೇಣಿಗಳ 226 ಕ್ರೀಡಾಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದರು. ಫುಟ್ಬಾಲ್, ಕ್ರಿಕೆಟ್, ಬಾಸ್ಕೆಟ್‌ ಬಾಲ್, ವಾಲಿಬಾಲ್, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಥ್ರೋಬಾಲ್, ಸ್ಕ್ವಾಶ್ ಹಾಗೂ ಈಜು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪೆಬ್ರವರಿ 14ರಂದು ನಡೆದಸ ಸಮಾರೋಪ ಸಮಾರಂಭದಲ್ಲಿ ವಿಜೇತರಿಗ ಪದಕಗಳು ಹಾಗೂ ಟ್ರೋಫಿಗಳನ್ನು ನೀಡಲಾಯಿತು. ಸ್ಪರ್ಧೆಗಳಲ್ಲಿ ಪಾಲ್ಗೊಂಡ ಎಲ್ಲರಿಗೂ ಪ್ರಶಂಸಾ ಪತ್ರಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News