ಶಾರ್ಜಾ: ‘ಕಮಾನ್ ಕೇರಳ’ ಸಮಾವೇಶದಲ್ಲಿ ಶಬಾನಾ ಫೈಝಲ್‌ ರಿಗೆ ‘ಇಂಡೊ-ಅರಬ್ ವಿಮೆನ್ ಎಕ್ಸಲೆನ್ಸ್’ ಪ್ರಶಸ್ತಿ

Update: 2019-02-17 08:54 GMT

ಶಾರ್ಜಾ, ಫೆ.17: ಗಲ್ಫ್ ಮಾಧ್ಯಮಂ ಆಯೋಜಿಸಿದ ಕೊಲ್ಲಿ ವಲಯದ ಭಾರತದ ಬೃಹತ್ ವಾಣಿಜ್ಯ- ಸಾಂಸ್ಕೃತಿಕ ಪ್ರದರ್ಶನ ‘ಕಮಾನ್ ಕೇರಳ’ದಲ್ಲಿ ಕೆಇಎಫ್ ಹೋಲ್ಡಿಂಗ್ಸ್‌ನ ಸಹಸ್ಥಾಪಕಿ ಹಾಗೂ ಫೈಝಲ್ ಆ್ಯಂಡ್ ಶಬಾನಾ ಫೌಂಡೇಶನ್‌ನ ಉಪಾಧ್ಯಕ್ಷೆ ಶಬಾನಾ ಫೈಝಲ್ ಅವರು ‘ಇಂಡೊ-ಅರಬ್ ವಿಮೆನ್ ಎಕ್ಸಲೆನ್ಸ್’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ದುಬೈ ಲ್ಯಾಂಡ್ ಡಿಪಾರ್ಟ್‌ಮೆಂಟ್‌ನ ಅಸಿಸ್ಟೆಂಟ್ ಡೈರಕ್ಟರ್ ಜನರಲ್ ಮಾಜಿದಾ ಅಲಿ ರಶೀದ್, ಯುಎಇಯ ಪ್ರಥಮ ಮಹಿಳಾ ನಿರ್ದೇಶಕಿ ನೈಲಾಅಲ್ ಖಾಜ, ದುಬೈ ಟೂರಿಸಂ ಡೈರಕ್ಟರ್ ಶೈಖ್ ಅಲ್‌ಮುತ್ತವ ಕೂಡಾ ಈ ಪ್ರಶಸ್ತಿಗೆ ಪಾತ್ರರಾಗಿದ್ದು, ಶಬಾನಾರೊಂದಿಗೆ ಅವರು ಇದೇ ಸಂದರ್ಭ ಪ್ರಶಸ್ತಿ ಸ್ವೀಕರಿಸಿದರು.

ಶಾರ್ಜಾ ಇನ್ವೆಸ್ಟ್‌ಮೆಂಟ್ ಆ್ಯಂಡ್ ಡೆವಲಪ್‌ಮೆಂಟ್ ಅಥಾರಿಟಿ(ಶಾರುಖ್) ಎಕ್ಸಿಕ್ಯೂಟಿವ್ ಚೇರ್‌ಮೆನ್ ಮರ್ವಾನ್ ಅಲ್ ಸರಕಾಲ್, ಈಸ್ಟರ್ನ್ ಗ್ರೂಪ್ ಎಂ.ಡಿ. ಫಿರೋಝ್ ಮೀರಾನ್, ಜಲೀಲ್ ಟ್ರೇಡಿಂಗ್ ಎಂ.ಡಿ. ಶಮೀರ್ ಕೆ.ಮುಹಮ್ಮದ್, ಮಾಧ್ಯಮಂ-ಮೀಡಿಯ ವನ್ ಗ್ರೂಪ್‌ನ ಸಂಪಾದಕ ಒ.ಅಬ್ದುರ್ರಹ್ಮಾನ್, ಗಲ್ಫ್ ಮಾಧ್ಯಮಂನ ಪ್ರಧಾನ ಸಂಪಾದಕ ವಿ.ಕೆ.ಹಂಝ ಅಬ್ಬಾಸ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದರು.

ಸಭಾ ಕಾರ್ಯಕ್ರಮದ ಬಳಿಕ ಪ್ರಸಿದ್ಧ ಗಾಯಕಿ ಕೆ.ಎಸ್.ಚಿತ್ರಾರಿಂದ ರಸಮಂಜರಿ ನಡೆಯಿತು. ಇದು ‘ಕಮಾನ್ ಕೇರಳ’ದ ಎರಡನೇ ಆವೃತ್ತಿಯಾಗಿದೆ. ಈ ವಸ್ತು ಪ್ರದಶನಕ್ಕೆ ಅಪಾರ ಸಂದರ್ಶಕರು ಭೇಟಿ ನೀಡಿದ್ದಾರೆ. ಗಲ್ಫ್ ಕ್ಷೇತ್ರದ ವಾಣಿಜ್ಯ-ಸಾಂಸ್ಕೃತಿಕ ಪ್ರದರ್ಶನವಾಗಿ ‘ಕಮಾನ್ ಕೇರಳ’ ಗಮನಸೆಳೆದಿದ್ದು, ಇಲ್ಲಿ ವಾಪಾರ ಒಪ್ಪಂದಗಳು ವಾಣಿಜ್ಯ ವ್ಯವಹಾರಗಳಿಗೆ ಪೂರಕವಾದ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮೂರು ದಿನಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಮಂದಿ ಕಮಾನ್ ಕೇರಳ ಮೇಳ ನಗರಿಗೆ ಭೇಟಿ ನೀಡಿದ್ದರು. ಕಮಾನ್ ಕೇರಳದ ಮೂರನೇ ಪ್ರದರ್ಶನ 2020ರಲ್ಲಿ ನಡೆಯಲಿದೆ.

ಶಬಾನಾ ಫೈಝಲ್

ಕೆಇಎಫ್ ಹೋಲ್ಡಿಂಗ್ಸ್ ಯುಇಎ ಮೂಲದ ಬಹುರಾಷ್ಟ್ರೀಯ ವೈವಿಧ್ಯತೆಯ ಸಮೂಹವಾಗಿದ್ದು, ಇದು ನಾವೀನ್ಯತೆಯ ಆಫ್ಸೈಟ್ ನಿರ್ಮಾಣ ತಂತ್ರಜ್ಞಾನದಲ್ಲಿ ಪರಿಣಿತಿ ಹೊಂದಿದೆ. ಶಬಾನಾ ಫೈಝಲ್ ಮಂಗಳೂರಿನ ಖ್ಯಾತ ಉದ್ಯಮಿ, ಸಾಮಾಜಿಕ, ಧಾರ್ಮಿಕ ಧುರೀಣ ಬಿ.ಎ. ಸಮೂಹದ ಅಧ್ಯಕ್ಷ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಅವರ ಪುತ್ರಿ. ಕೆಇಎಫ್ ಹೋಲ್ಡಿಂಗ್ಸ್ ಹಾಗೂ ಫೈಝಲ್ ಆ್ಯಂಡ್ ಶಬಾನಾ ಫೌಂಡೇಶನ್‌ನ ಅಧ್ಯಕ್ಷ ಫೈಝಲ್ ಇ. ಕೊಟ್ಟಿಕೋಲನ್‌ರೊಂದಿಗೆ ವಿವಾಹವಾದ ಶಬಾನಾ ಬಳಿಕ 1995ರಲ್ಲಿ ಕಲ್ಲಿಕೋಟೆಯಲ್ಲಿ ಸೋಫಿಯಾಸ್ ವರ್ಲ್ಡ್-ಲಕ್ಷುರಿ ಹಾಗೂ ವಿಶೇಷ ವಸ್ತುಗಳ ಸ್ಟುಡಿಯೋವನ್ನು ಸ್ಥಾಪಿಸುವ ಮೂಲಕ ಉದ್ಯಮವನ್ನು ಪ್ರಾರಂಭಿಸಿದರು.

ಶಬಾನಾ ಅವರು ಕೆಇಎಫ್ ಹೋಲ್ಡಿಂಗ್ಸ್‌ನಲ್ಲಿ ಎಚ್‌ಆರ್ ಹಾಗೂ ಆಡಳಿತ, ಸಾಂಸ್ಥಿಕ ಸಂವಹನ, ಐಟಿ ಹಾಗೂ ಕಾನೂನು ಕಾರ್ಯಾಚರಣೆಗಳು ಸೇರಿದಂತೆ ಕೆಇಎಫ್ ಹೋಲ್ಡಿಂಗ್ಸ್‌ನ ಕಾರ್ಪೊರೇಟ್ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಾರೆ. ಸಂಸ್ಥೆಯ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕಾ (ಸಿಎಸ್‌ಆರ್)ಅಂಗವಾದ -ದ ಶಬಾನಾ ಫೈಝಲ್ ಫೌಂಡೇಶ್‌ನ ಸಹಸಂಸ್ಥಾಪಕರು ಹಾಗೂ ಉಪಾಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದಾರೆ.

ಶಬಾನಾ ಫೈಝಲ್ ಅವರು ಮಂಗಳೂರಿನ ಸೈಂಟ್ ಆ್ಯಗ್ನೆಸ್ ಕಾಲೇಜಿನಿಂದ ಮನಃಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News