ಯೆಮನ್ ಸೇನೆ ದಾಳಿಯಲ್ಲಿ 20 ಹೌದಿ ಬಂಡುಕೋರರು ಹತ

Update: 2019-02-18 15:27 GMT

ದುಬೈ, ಫೆ. 18: ಯೆಮನ್ ಸೇನೆಯು, ದಕ್ಷಿಣದ ದಲೆ ರಾಜ್ಯದಲ್ಲಿ ರವಿವಾರ ನಡೆದ ಸಂಘರ್ಷದಲ್ಲಿ 20 ಹೌದಿ ಬಂಡುಕೋರರನ್ನು ಕೊಂದಿದೆ ಎಂದು ಸೌದಿ ಅರೇಬಿಯದ ಸರಕಾರಿ ಸುದ್ದಿ ಸಂಸ್ಥೆ ಎಸ್‌ಪಿಎ ವರದಿ ಮಾಡಿದೆ.

ಅಬ್ ರಾಜ್ಯದ ಅಲ್-ಮಶಾದ್ ಮಾರುಕಟ್ಟೆಯತ್ತ ಯೆಮನಿ ಪಡೆಗಳು ನುಗ್ಗಿದರೆ, ಅರಬ್ ಮಿತ್ರಕೂಟದ ಪಡೆಗಳು ಹೌದಿ ಪ್ರದೇಶಗಳ ಮೇಲೆ ದಾಳಿ ನಡೆಸಿವೆ.

ನಹಿಮ್ ಪ್ರದೇಶಕ್ಕೆ ಬರುತ್ತಿದ್ದ ಹೌದಿ ಹೆಚ್ಚುವರಿ ಪಡೆಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ.

ಈ ನಡುವೆ, ಹಜ್ಜಾಹ್‌ನ ಕೇಶರ್ ಜಿಲ್ಲೆಯಲ್ಲಿ ಯೆಮನಿ ಬುಡಕಟ್ಟು ಜನರು ದರ್ಬ್ ಅಲ್ ಮರು ಪ್ರದೇಶದಲ್ಲಿರುವ ಹೌದಿ ಬಂಡುಕೋರರ ನೆಲೆಗಳನ್ನು ಧ್ವಂಸಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News