ತುಂಬೆ ಮೆಡಿಸಿಟಿಗೆ ಎಚ್.ಇ. ಮಿರ್ಝಾ ಅಲ್ ಸಯೇಗಿ ಭೇಟಿ

Update: 2019-02-18 18:04 GMT

ಅಜ್ಮಾನ್, ಫೆ. 18: ಅಲ್ ಮಖ್ತೂಮ್ ಪ್ರತಿಷ್ಠಾನದ ಟ್ರಸ್ಟಿಗಳ ಮಂಡಳಿಯ ಸದಸ್ಯರು ಹಾಗೂ ತುಂಬೆ ಸಮೂಹದ ಮಾಲಕತ್ವ ಹಾಗೂ ನಿರ್ವಹಣೆಯ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಟ್ರಸ್ಟಿಗಳ ಮಂಡಳಿಯ ಸದಸ್ಯರೂ ಆಗಿರುವ ಮಿರ್ಝಾ ಹುಸೈನ್ ಅಲ್ ಸಯೇಗ್ ಅವರು ತುಂಬೆ ಮೆಡಿಸಿಟಿಗೆ ರವಿವಾರ ಭೇಟಿ ನೀಡಿದರು.

ಅವರನ್ನು ತುಂಬೆ ಸಮೂಹದ ಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯಿದೀನ್ ಸ್ವಾಗತಿಸಿದರು.

ತುಂಬೆ ಮೆಡಿಸಿಟಿಯ ದೂರದರ್ಶಿತ್ವ ಹಾಗೂ ಭವಿಷ್ಯದ ಯೋಜನೆಗಳನ್ನು ಎಚ್.ಇ. ಮಿರ್ಝಾ ಹುಸೈನ್ ಅಲ್ ಸಯೇಗ್ ಅವರಿಗೆ ಈ ಸಂದರ್ಭದಲ್ಲಿ ವಿವರಿಸಲಾಯಿತು. ಮಿರ್ಝಾ ಹುಸೈನ್ ಅವರು ಗಲ್ಫ್ ವೈದ್ಯಕೀಯ ವಿವಿ ಸೇರಿದಂತೆ ತುಂಬೆ ಮೆಡಿಸಿಟಿಯ ಅತ್ಯಾಧುನಿಕ ವೈದ್ಯಕೀಯ ಶಿಕ್ಷಣ, ಆರೋಗ್ಯ ಪಾಲನೆ ಹಾಗೂ ಸಂಶೋಧನಾ ಘಟಕಗಳು, ತುಂಬೆ ಡೆಂಟಲ್ ಹಾಸ್ಪಿಟಲ್ ಹಾಗೂ ಶೀಘ್ರದಲ್ಲೇ ಆರಂಭಗೊಳ್ಳಲಿರುವ ತುಂಬೆ ಯೂನಿವರ್ಸಿಟಿ ಆಸ್ಪತ್ರೆಗೆ ಭೇಟಿ ನೀಡಿದರು.

ಆಸ್ಪತ್ರೆ ಹಾಗೂ ವಿಶ್ವವಿದ್ಯಾನಿಲಯಕ್ಕೆ ಭೇಟ ನೀಡಿದ ಮಿರ್ಝಾ ಹುಸೈನ್ ಅವರು ಆರೋಗ್ಯಪಾಲನೆ ಹಾಗೂ ವೈದ್ಯಕೀಯ ಶಿಕ್ಷಣಗಳಿಗೆ ಅತ್ಯುತ್ಕೃಷ್ಟ ಸೌಲಭ್ಯಗಳನ್ನು ಒದಗಿಸಿರುವುದಕ್ಕಾಗಿ ತುಂಬೆ ಮೆಡಿಸಿಟಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ದೇಶದ ಪ್ರಪ್ರಥಮ ಖಾಸಗಿ ವೈದ್ಯಕೀಯ ಆಸ್ಪತ್ರೆ ಹಾಗೂ ಮಧ್ಯಏಶ್ಯ ಪ್ರಾಂತಲ್ಲಿ ಖಾಸಗಿ ವಲಯ ನಿರ್ವಹಣೆಯ ಅತಿ ದೊಡ್ಡ ಶೈಕ್ಷಣಿಕ ದಂತವೈದ್ಯಕೀಯ ಆಸ್ಪತ್ರೆ ಹಾಗೂ ತುಂಬೆ ಫಿಸಿಕಲ್ ಥೆರಪಿ ಹಾಗೂ ಪುನರ್ವಸತಿ ಆಸ್ಪತ್ರೆಯ ಕಾರ್ಯನಿರ್ವಹಣೆಯನ್ನು ಅವರು ಪರಿಶೀಲಿಸಿದರು. ಪ್ರಾಂತದ ಆರೋಗ್ಯಪಾಲನೆ ಹಾಗೂ ವೈದ್ಯಕೀಯ ಶಿಕ್ಷಣರಂಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸಂಶೋಧನಾಶೀಲತೆಯನ್ನು ತರುವ ನಿಟ್ಟಿನಲ್ಲಿ ತುಂಬೆ ಸಮೂಹದ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.

ಸುಮಾರು 20ಸಾವಿರ ಮಂದಿಯ ಸೇವೆಗಾಗಿ ಆರೋಗ್ಯ ಪಾಲನೆ ಹಾಗೂ ಆರೋಗ್ಯ ಶಿಕ್ಷಣ ಕೇಂದ್ರವಾಗಿ ರೂಪಿಸುವ ಉದ್ದೇಶ ಹೊಂದಿರುವ ಮೆಡಿಸಿಟಿಯ ನಿರ್ಮಾಣವು ಪೂರ್ಣಗೊಳ್ಳುವ ಹಂತದಲ್ಲಿದೆ ಎಂದರು. ತುಂಬೆ ಮೆಡಿಸಿಟಿಯು ಯುಎಇನ ಆರೋಗ್ಯ ಪಾಲನಾ ಕ್ಷೇತ್ರಕ್ಕೆ ಹೊಸ ಸೇರ್ಪಡೆಯಾಗಿದೆ. ಅಜ್ಮಾನ್‌ನಲ್ಲಿರುವ ತುಂಬೆ ಮೆಡಿಸಿಟಿಯು ಬೋಧನೆ, ತರಬೇತಿ, ಸಂಶೋಧನೆ, ರಂಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಜಾಗತಿಕ ಪರಿಣತಿಯನ್ನು ಅಳವಡಿಸಿಕೊಂಡಿದೆ. ಬಾಡಿ ಆ್ಯಂಡ್ ಸೋಲ್ ಹೆಲ್ತ್ ಕ್ಲಬ್ ಹಾಗೂ ಸ್ಪಾ, ತುಂಬೆ ಫುಡ್‌ಕೋರ್ಟ್, ಟೆರೇಸ್ ರೆಸ್ಟಾರೆಂಟ್ ಇತ್ಯಾದಿಗಳನ್ನು ಹೊಂದಿದೆ.

ಸುಮಾರು 2500 ಮಂದಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ವಸತಿಗಾಗಿ ತುಂಬೆ ಹೌಸಿಂಗ್ ಪ್ರಾಜೆಕ್ಟ್ ಕೂಡಾ ಕಾರ್ಯನಿರ್ವಹಿಸುತ್ತಿದೆ. ಒಂದು ಶತಕೋಟಿಗೂ ಅಧಿಕ ಯುಎಇ ದಿರ್ಹಮ್‌ಗಳ ಹೂಡಿಕೆಯೊಂದಿಗೆ ನಿರ್ಮಾಣಗೊಂಡಿರುವ ತುಂಬೆ ಮೆಡಿಸಿಟಿ ಸಂಕೀರ್ಣವು ಒಟ್ಟು 1.2 ದಶಲಕ್ಷ ಚದರ ಅಡಿ ಪ್ರದೇಶವನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News