ಯೆಮನ್: ಫೆಬ್ರವರಿಯಲ್ಲಿ 1,371 ನೆಲಬಾಂಬ್‌ಗಳ ತೆರವು

Update: 2019-02-26 16:20 GMT

ಜಿದ್ದಾ (ಸೌದಿ ಅರೇಬಿಯ), ಫೆ. 26: ಯೆಮನ್‌ನಲ್ಲಿ ಸೌದಿ ಅರೇಬಿಯ ಕೈಗೊಂಡ ಸೌದಿ ನೆಲಬಾಂಬ್ ತೆರವು ಯೋಜನೆ (ಎಂಎಎಸ್‌ಎಎಂ)ಯ ಮೂಲಕ ಫೆಬ್ರವರಿಯ ಮೂರು ವಾರಗಳ ಅವಧಿಯಲ್ಲಿ ಒಟ್ಟು 1,371 ನೆಲಬಾಂಬ್‌ಗಳನ್ನು ತೆರವುಗೊಳಿಸಲಾಗಿದೆ.

ಈ ಪೈಕಿ 14 ಸೈನಿಕ ನಿಗ್ರಹ ನೆಲಬಾಂಬ್‌ಗಳು, 625 ವಾಹನ ನಿಗ್ರಹ ನೆಲಬಾಂಬ್‌ಗಳು, 67 ಸ್ಫೋಟಕ ಸಾಧನಗಳು ಮತ್ತು 665 ಸ್ಫೋಟಗೊಳ್ಳದ ಉಪಕರಣಗಳು.

ಈ ಯೋಜನೆ ಆರಂಭಗೊಂಡಂದಿನಿಂದ ಒಟ್ಟು 44,743 ನೆಲಬಾಂಬ್‌ಗಳನ್ನು ಹೊರತೆಗೆಯಲಾಗಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಹೌದಿ ಬಂಡುಕೋರರು ಯೆಮನ್‌ನಲ್ಲಿ ಸುಮಾರು 10 ಲಕ್ಷ ಬಾಂಬ್‌ಗಳನ್ನು ಹುದುಗಿಸಿಟ್ಟಿದ್ದಾರೆ ಎಂದು ನಂಬಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News