ಒಮಾನ್ ಬಿಲ್ಲವಾಸ್ ಕುಟುಂಬ ಸಮಾಗಮ

Update: 2019-02-26 17:15 GMT

ಒಮಾನ್, ಫೆ.26: ಒಮಾನ್ ಬಿಲ್ಲವಾಸ್ ವತಿಯಿಂದ ಒಮಾನ್‌ನ ಅಲ್ ಬರ್ಕಾದ ಎಸ್ರಿ ಫಾರ್ಮ್ ಹೌಸ್‌ನಲ್ಲಿ ಒಮಾನ್ ಬಿಲ್ಲವಾಸ್ ಕುಟುಂಬ ಸಮಾಗಮವು ಇತ್ತೀಚೆಗೆ ಜರುಗಿತು. ಈ ಸಂದರ್ಭ ಕ್ರೀಡಾ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಯುವ ಬಿಲ್ಲವ ಸಾಧಕರಾದ ನೀವ್ ಜಯಪ್ರಕಾಶ್, ನಿಹಾಲ್ ಜಯಪ್ರಕಾಶ್ (ಅಂಡರ್ 19 ಕ್ರಿಕೆಟ್ ತಂಡದ ಆಟಗಾರು) ಕೃತಿಕಾ ವಿಠಲ ಪೂಜಾರಿ (ಒಮಾನ್ ಮಹಿಳಾ ವಾಲಿಬಾಲ್ ತಂಡದ ಸದಸ್ಯೆ), ಕಿರಣ್ ಅಂಚನ್ (ಮೊದಲ ಪ್ರಯತ್ನದಲ್ಲಿ ಎಸಿಸಿಎ ಪರೀಕ್ಷೆ ತೇರ್ಗಡೆ) ಕ್ರೀಡಾ ಸ್ಪರ್ಧೆಯನ್ನು ಉದ್ಘಾಟಿಸಿದರು.

ಈ ಸಂದರ್ಭ ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರಿಗೆ ಸಂತಾಪ ಸೂಚಿಸಲಾಯಿತು.

ಬಾಲಕರಿಗಾಗಿ ರನ್ನಿಂಗ್ ರೇಸ್, ಚಾಕೊಲೇಟ್ ಎಣಿಕೆ, ಚೆಂಡನ್ನು ಎಸೆಯುವುದು, ಕಾಲುಗಳ ಮೇಲೆ ಬಾಲ್, ಫ್ರಾಗ್ ರೇಸ್, ಮಾರ್ಬಲ್ಸ್ ಮತ್ತು ಹುಲ್ಲು, ನಿಂಬೆ ಮತ್ತು ಚಮಚ ಓಟ, ಮಹಿಳೆಯರಿಗಾಗಿ ಒಂದು ಕಾಲಿನ ರೇಸ್, ಸೂಜಿ ಮತ್ತು ಥ್ರೆಡ್, ನಿಂಬೆ ಮತ್ತು ಚಮಚ, ಡೊಂಕಾ, ಟ್ಯಾಲೆಂಟ್ ಹಂಟ್, ಟಗ್ ಆಫ್ ವಾರ್ ಹಾಗೂ ಪುರುಷರಿಗಾಗಿ ಲಗೋರಿ, ಟಗ್ ಆಫ್ ವಾರ್ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಕ್ರೀಡಾ ಸಮಿತಿಯ ಉಮೇಶ್ ಜೆಪ್ಪು, ರಿಕೇಶ್ ಅಮೀನ್, ಅಕ್ಷತಾ ರಿಕೇಶ್ ಅಮೀನ್, ಗಂಗಾಧರ್ ಪೂಜಾರಿ, ಅಮೃತ್ ಪೂಜಾರಿ ಮತ್ತು ಶ್ರೀನಿವಾಸ್ ಪೂಜಾರಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಭಾಸ್ಕರ್ ಮತ್ತವರ ತಂಡ ಮಂಗಳೂರಿನ ಗೋಳಿಬಜೆ, ಕೋರಿ ಸುಕ್ಕಾ ಸಹಿತ ಕರಾವಳಿಯ ಖಾದ್ಯಗಳ ಉಟೋಪಚಾರ ವ್ಯವಸ್ಥೆ ಮಾಡಿದರು. ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಹುಲಿ ವೇಷ ಕುಣಿತ ನಡೆಸಲಾಯಿತು.

ಮನೋಹರ್ ಸಾಲ್ಯಾನ್, ಸುಚೇತನಾ, ಶಂಕರ್ ಉಪ್ಪೂರು, ವಿಜಯ್ (ರಹಾ), ಹರೀಶ್ ಪೂಜಾರಿ, ಕೆ.ಎನ್. ಅಂಚನ್, ಗಂಗಾಧರ ಪೂಜಾರಿ, ಉತ್ತಮ್ ಕೊಟಿಯನ್, ಸಂದೀಪ್ (ಡಿಜೆ), ಪ್ರಕಾಶ್ (ಎಂ.ಸಿ.ಟಿ.ಫಾರ್ಮಸಿ), ಪ್ರಪುಲ್ಲಾ ಪ್ರವೀಣ್, ಸಪ್ನಾ ವಿತ್ತಾಲ್, ರೋಹಿದಾಸ್ ಮಂಜೇಶ್ವರ್, ಸುಧಕರ್ ಪೂಜಾರಿ ಮತ್ತಿತರರು ಪಾಲ್ಗೊಂಡಿದ್ದರು. ಬಿಲ್ಲವಾಸ್ ಉಪಾಧ್ಯಕ್ಷ ಸುಹಾನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News