ವರ್ಷದ ಕೊರ್ಪೊರೇಟ್ ಕಾರ್ಯಕ್ರಮ: ತುಂಬೆ ಸಮೂಹ ಮಡಿಲಿಗೆ ಪ್ರಶಸ್ತಿ

Update: 2019-02-28 18:15 GMT

ದುಬೈ, ಫೆ.28: ದುಬೈ ಮೂಲದ ಜಾಗತಿಕ ಉದ್ಯಮ ಸಮೂಹ ತುಂಬೆ ಗ್ರೂಪ್ ಬುಧವಾರ ನಡೆದ ಎಂಎಎಲ್‌ಟಿ (ಮಾಲ್ಟ್) ಎಕ್ಸಲೆನ್ಸ್ ಪ್ರಶಸ್ತಿ ಸಮಾರಂಭದಲ್ಲಿ ವರ್ಷದ ಕೊರ್ಪೊರೇಟ್ ಕಾರ್ಯಕ್ರಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ತುಂಬೆ ಗ್ರೂಪ್‌ನ ನಿರ್ಮಾಣ ಮತ್ತು ಪುನರುತ್ಥಾನ ಕಾರ್ಯಾಚರಣೆಗಳ ನಿರ್ದೇಶಕ, ತುಂಬೆ ಟೆಕ್ನಾಲಜೀಸ್ ನಿರ್ದೇಶಕ ಮತ್ತು ತುಂಬೆ ಸಮೂಹ ಮಂಡಳಿಯ ಸದಸ್ಯ ಹಾಗೂ ತುಂಬೆ ಸಮೂಹದ ಸಿಎಸ್‌ಆರ್ ಸಮಿತಿ ಅಧ್ಯಕ್ಷ ಅಕ್ರಮ್ ಮೊಯಿದಿನ್ ತುಂಬೆ ಅವರು ದುಬೈಯ ರಿಕ್ಸೊಸ್ ಪ್ರೀಮಿಯಂ ಹೊಟೇಲ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಕಳೆದ ವರ್ಷ ತುಂಬೆ ಸಮೂಹ ಆಯೋಜಿಸಿದ್ದ ಜಾಯ್ ಆಫ್ ಗಿವಿಂಗ್ ಕಾರ್ಯಕ್ರಮಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ತುಂಬೆ ಪ್ರತಿಷ್ಠಾನದ ಚಾರಿಟೇಬಲ್ ವಿಭಾಗ ಆಯೋಜಿಸಿದ್ದ ಒಂದು ತಿಂಗಳ ಅವಧಿಯ ಈ ಕಾರ್ಯಕ್ರಮದಲ್ಲಿ ಸೌಲಭ್ಯವಂಚಿತ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ನೀಡಿ ಅವರ ಮುಖದಲ್ಲಿ ನಗು ಮೂಡುವಂತೆ ಮಾಡಲು ಪ್ರಯತ್ನಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜನರು ಸೌಲಭ್ಯವಂಚಿತ ಮಕ್ಕಳು ಮತ್ತು ಅನಾಥರಿಗೆ ಪುಸ್ತಕಗಳು, ಬಟ್ಟೆ, ಆಟದ ವಸ್ತುಗಳು, ಶಾಲಾ ಪರಿಕರಗಳು ಮತ್ತು ಚಿತ್ರಕಲೆ ವಸ್ತುಗಳನ್ನು ನೀಡಲು ಪ್ರೋತ್ಸಾಹಿಸಲಾಗಿತ್ತು.

ಕಾರ್ಯಕ್ರಮದ ಅಂತಿಮ ದಿನದಂದು ನಡೆದ ವೈಭವದ ಸಮಾರೋಪ ಸಮಾರಂಭದಲ್ಲಿ ದಾನಿಗಳು ನೀಡಿದ್ದ ವಸ್ತುಗಳನ್ನು ಯುಎಇಯಾದ್ಯಂತದ ಅನಾಥ ಮತ್ತು ಸೌಲಭ್ಯ ವಂಚಿತ ಮಕ್ಕಳಿಗೆ ಈದ್ ಅಲ್ ಅದಾದ ಉಡುಗೊರೆಯಾಗಿ ಹಂಚಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News