ಇ-ಕಾಮರ್ಸ್ ವೇದಿಕೆಯೊಂದಿಗೆ ತುಂಬೆ ಸಮೂಹ ಸಂಸ್ಥೆ ಸಹಭಾಗಿತ್ವ

Update: 2019-03-02 17:44 GMT

ದುಬೈ, ಮಾ. 2: ಯುಎಇ, ಸೌದಿ ಅರೇಬಿಯಾ, ಈಜಿಪ್ಟ್ ಹಾಗೂ ಇತರ ಗಲ್ಫ್ ಸಹಕಾರ ಸಮಿತಿ(ಜಿಸಿಸಿ) ರಾಷ್ಟ್ರಗಳ ಜೊತೆಗೆ ಇ-ಕಾಮರ್ಸ್ ವ್ಯವಹಾರ ಬಲಪಡಿಸುವ ಉದ್ದೇಶದಿಂದ ತುಂಬೆ ಸಮೂಹ ಸಂಸ್ಥೆಯು ‘ನೂನ್’ ಎಂಬ ಇ-ಕಾಮರ್ಸ್ ವೇದಿಕೆಯ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.

ತುಂಬೆ ಫಾರ್ಮಸಿ, ನ್ಯೂಟ್ರಿಪ್ಲಸ್ ವಿಟಾ ಸ್ಟೋರ್, ರೊ ಆ್ಯಂಡ್ ಮೊ ಆಪ್ಟಿಕಲ್ಸ್ ಮತ್ತು ಹೂವಿನ ಅಂಗಡಿ ಮುಂತಾದ ರಖಂ ವ್ಯಾಪಾರ ವಿಭಾಗದ ಉತ್ಪನ್ನಗಳು (ಶ್ರೇಷ್ಟ ಚರ್ಮ ರಕ್ಷಣೆ ಉತ್ಪನ್ನಗಳು, ಬೇಬಿ ಕ್ಯಾರ್ ಉತ್ಪನ್ನಗಳು, ವೈದ್ಯಕೀಯ ಸಾಧನಗಳು, ಪೌಷ್ಟಿಕ ಉತ್ಪನ್ನಗಳು) ಇ-ವಾಣಿಜ್ಯ ವ್ಯವಹಾರ ವೇದಿಕೆಯಾದ ‘ನೂನ್ ಮಾರ್ಕೆಟ್ ಪ್ಲೇಸ್’ನ ಮೂಲಕ ಆನ್‌ಲೈನ್‌ನಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

‘ನೂನ್’ನೊಂದಿಗೆ ವ್ಯಾಪಾರ ಸಹಭಾಗಿತ್ವ ಹೊಂದಿರುವುದರಿಂದ ಖುಷಿಯಾಗಿದೆ. ಇ-ಕಾಮರ್ಸ್ ವೇದಿಕೆಯ ಗ್ರಾಹಕರನ್ನು ತಲುಪಲು ನಮಗೆ ಇದರಿಂದ ಅನುಕೂಲವಾಗುತ್ತದೆ. ನಮ್ಮ ಯಾವುದೇ ಉತ್ಪನ್ನಗಳು ಅತ್ಯುತ್ತಮ ಬ್ರಾಂಡೆಡ್ ಉತ್ಪನ್ನವಾಗಿದ್ದು ಈ ಪರಂಪರೆಯನ್ನು ಮುಂದುವರಿಸಿ, ‘ನೂನ್’ನ ಮೂಲಕ ಇ-ಕಾಮರ್ಸ್ ಗ್ರಾಹಕರಿಗೆ ನಮ್ಮ ಸಂಪೂರ್ಣ ಬ್ರಾಂಡೆಡ್ ಉತ್ಪನ್ನಗಳನ್ನು ಲಭ್ಯವಾಗಿಸುವ ಉದ್ದೇಶವಿದೆ ಎಂದು ತುಂಬೆ ಸಮೂಹ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ, ಹೆಲ್ತ್‌ಕೇರ್ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಹಿದೀನ್ ತುಂಬೆ ಹೇಳಿದ್ದಾರೆ.

ಈ ವಲಯದಲ್ಲಿ ಆನ್‌ಲೈನ್ ಶಾಪಿಂಗ್ ವ್ಯವಹಾರದ ಬೆಳವಣಿಗೆಯ ನಿಟ್ಟಿನಲ್ಲಿ ಮಾರ್ಕೆಟಿಂಗ್, ತಂತ್ರಜ್ಞಾನ ಹಾಗೂ ಕೌಶಲ್ಯ ವಿನಿಮಯದ ಮೂಲಕ ತುಂಬೆ ಸಮೂಹ ಸಂಸ್ಥೆ ಹಾಗೂ ‘ನೂನ್’ ಸಂಸ್ಥೆ ಜಂಟಿಯಾಗಿ ಕಾರ್ಯ ನಿರ್ವಹಿಸಲಿವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News