ಯೆಮನ್: ಕೆಎಸ್‌ರಿಲೀಫ್‌ ನಿಂದ ಮಹಿಳೆಯರಿಗಾಗಿ ಉದ್ಯೋಗ ತರಬೇತಿ

Update: 2019-03-07 16:27 GMT

ರಿಯಾದ್, ಮಾ. 7: ದೊರೆ ಸಲ್ಮಾನ್ ಮಾನವೀಯ ನೆರವು ಮತ್ತು ಪರಿಹಾರ ಕೇಂದ್ರ (ಕೆಸ್‌ರಿಲೀಫ್)ವು ಯೆಮನ್‌ನ ಏಡನ್ ಮತ್ತು ಲಹಿಜ್ ರಾಜ್ಯಗಳ ಜೀವನೋಪಾಯ ಸಂಪಾದಿಸುವ ಮಹಿಳೆಯರಿಗಾಗಿ ವೃತ್ತಿ ತರಬೇತಿ ಕಾರ್ಯಕ್ರಮಗಳನ್ನು ಆರಂಭಿಸಿದೆ.

ಯೆಮನ್‌ನಲ್ಲಿ ಜೀವನೋಪಾಯವನ್ನು ಸುಧಾರಿಸುವ ತನ್ನ ನಿರಂತರ ಪ್ರಯತ್ನಗಳ ಭಾಗವಾಗಿ ಕೆಎಸ್‌ರಿಲೀಫ್ ಈ ಕಾರ್ಯಕ್ರಮಗಳಿಗೆ ಚಾಲನೆ ನೀಡಿದೆ.

‘‘ಯೆಮನ್‌ನಲ್ಲಿ ಜೀವನೋಪಾಯವನ್ನು ಸುಧಾರಿಸುವ ಹಾಗೂ ವೃತ್ತಿ ಪುನರ್ವಸತಿ ಮತ್ತು ತರಬೇತಿ ನೀಡುವ ತನ್ನ ಯೋಜನೆಯ ಭಾಗವಾಗಿ ಕೆಎಸ್‌ರಿಲೀಫ್ ಏಡನ್ ವಲಯದ ಕಟುಂಬಗಳ ಮಹಿಳಾ ಮುಖ್ಯಸ್ಥರಿಗಾಗಿ ಹಲವಾರು ಪ್ರಾಯೋಗಿಕ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳನ್ನು ಆರಂಭಿಸಿದೆ’’ ಎಂದು ಕೆಎಸ್‌ರಿಲೀಫ್‌ನ ವಕ್ತಾರರೊಬ್ಬರು ಮಂಗಳವಾರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News