ಕೆಸಿಎಫ್ ಸೊಹಾರ್ ಝೋನ್ ವತಿಯಿಂದ 'ಹೆಲ್ತ್ ಕ್ಯಾಂಪೈನ್-2019'

Update: 2019-03-08 18:27 GMT

ಒಮಾನ್,ಮಾ.8: ಕೆಸಿಎಫ್ ಸೊಹಾರ್ ಝೋನ್ ವತಿಯಿಂದ ಸೊಹಾರ್ ಬದ್ರ್ ಅಲ್ ಸಮಾ ಆಸ್ಪತ್ರೆಯ ಸಹಯೋಗದೊಂದಿಗೆ ಕೆಸಿಎಫ್ ಹೆಲ್ತ್ ಕ್ಯಾಂಪೈನ್- 2019 (ರಕ್ತದಾನ ಮತ್ತು ಆರೋಗ್ಯ) ಶಿಬಿರವು ಬದ್ರ್ ಅಲ್ ಸಮಾ ಆಸ್ಪತ್ರೆಯಲ್ಲಿ ನಡೆಯಿತು.

ಸಿದ್ದೀಕ್ ಮಾಂಬ್ಲಿ ಸುಳ್ಯ ಅಧ್ಯಕ್ಷತೆ ವಹಿಸಿದ್ದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಸಯ್ಯದ್ ಆಬಿದ್ ಅಲ್ ಹೈದ್ರೋಸಿ ಎಮ್ಮೆಮ್ಮಾಡ್ ನೆರವೇರಿಸಿದರು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಕೆಸಿಎಫ್ INC ಸಂಘಟನಾ ಕಾರ್ಯದರ್ಶಿ ಇಕ್ಬಾಲ್ ಬೊಲ್ಮಾರ್ ಬರ್ಕ, ಬದ್ರ್ ಅಲ್ ಸಮಾ ಆಸ್ಪತ್ರೆ ಮ್ಯಾನೇಜರ್ ಶ್ರೀ ಮನೋಜ್ ಕುಮಾರ್, ಐಸಿಎಫ್ ಸೊಹಾರ್ ಪಿಆರ್ ಅಡ್ಮಿನ್ ಫಿರೋಸ್ ಅಬೂಬಕ್ಕರ್, ಇಕ್ಬಾಲ್ ಎರ್ಮಾಳ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಇಕ್ಬಾಲ್ ಬೊಲ್ಮಾರ್ ಮತ್ತು ಮನೊಜ್ ಕುಮಾರ್ ರವರನ್ನು ಸನ್ಮಾನಿಸಲಾಯಿತು ಹಾಗೂ ತಮ್ಮ ರಕ್ತದಾನ ಮಾಡಿದವರಿಗೆ ಸರ್ಟಿಫಿಕೇಟ್ ವಿತರಿಸಲಾಯಿತು. ಸಭೆಯಲ್ಲಿ ಸಾದಿಕ್ ಸುಳ್ಯ, ಶಫೀಕ್ ಮಾರ್ನಬೈಲು, ಫಾರೂಕ್ ಕುಕ್ಕಾಜೆ ಉಪಸ್ಥಿತರಿದ್ದರು. ಅಶ್ರಫ್ ಕುತ್ತಾರ್ ಸ್ವಾಗತಿಸಿ ಸಾದಿಕ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News