ಇನ್ನು ವಿಮಾನ ಸಹಾಯಕರಾಗಿ ಸೌದಿ ಮಹಿಳೆಯರು

Update: 2019-03-10 16:55 GMT

 ರಿಯಾದ್ (ಸೌದಿ ಅರೇಬಿಯ), ಮಾ. 10: ಸೌದಿ ಅರೇಬಿಯದಲ್ಲಿ 2010ರಲ್ಲಿ ಸ್ಥಳೀಯ ಸೂಪರ್‌ ಮಾರ್ಕೆಟ್ ‌ಗಳಲ್ಲಿ ಮಹಿಳೆಯರು ಕ್ಯಾಶಿಯರ್‌ ಗಳಾಗಿ ಕೆಲಸ ಮಾಡಲು ಆರಂಭಿಸಿದರು. ಎರಡು ವರ್ಷಗಳ ಬಳಿಕ, ಮಾರಾಟಗಾರ್ತಿಯರಾಗಿ ಕೆಲಸ ಮಾಡಲು ಆರಂಭಿಸಿದರು ಹಾಗೂ ವ್ಯಾಕ್ಯೂಮ್ ಕ್ಲೀನರ್‌ಗಳು, ಮೊಬೈಲ್ ಫೋನ್‌ಗಳು, ಕ್ಯಾಮರಾಗಳು ಸೇರಿದಂತೆ ವಿವಿಧ ಇಲೆಕ್ಟ್ರಾನಿಕ್ಸ್ ವಸ್ತುಗಳ ನಡುವಿನ ವ್ಯತ್ಯಾಸಗಳನ್ನು ಗ್ರಾಹಕರಿಗೆ ವಿವರಿಸುವ ಕೆಲಸದಲ್ಲಿ ತೊಡಗಿದರು.

ಬಳಿಕ, 2018ರಲ್ಲಿ ವಾಹನ ಚಲಾಯಿಸಲು ಆರಂಭಿಸಿದರು.

ಇನ್ನು ಸೌದಿ ಮಹಿಳೆಯರು 30,000 ಅಡಿ ಎತ್ತರದಲ್ಲಿ ವಿಮಾನಗಳಲ್ಲಿ ಪ್ರಯಾಣಿಕರ ಸೇವೆ ಮತ್ತು ಸುರಕ್ಷತೆಯ ಕೆಲಸದಲ್ಲಿ ತೊಡಗಲಿದ್ದಾರೆ.

ಸೌದಿ ಅರೇಬಿಯದ ಎರಡು ಖಾಸಗಿ ವಿಮಾನಯಾನ ಸಂಸ್ಥೆಗಳಾದ ಫ್ಲೈನಾಸ್ ಮತ್ತು ಫ್ಲೈಡೀಲ್ ವಿಮಾನಯಾನ ಸಂಸ್ಥೆಗಳು ಈಗಾಗಲೇ ಸೌದಿ ಮಹಿಳೆಯರ ಮೊದಲ ತಂಡಕ್ಕೆ ವಿಮಾನ ಪರಿಚಾರಕ ಸೇವಾ ತರಬೇತಿಯನ್ನು ನೀಡಿದೆ ಹಾಗೂ ಅವರನ್ನು ತಮ್ಮ ವಿಮಾನಗಳಲ್ಲಿ ಸೇವೆಗೂ ನೇಮಿಸಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News