ಯುಎಇಯ ಆಗಸದಲ್ಲಿ ವಿಸ್ಮಯ: ಬೃಹತ್ ಗಾತ್ರದ ಸುಳಿಯಾಕಾರದ ಕುಳಿ ಪತ್ತೆ!

Update: 2019-03-20 10:51 GMT

ದುಬೈ, ಮಾ.20: ಇತ್ತೀಚೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಲ್ ಐನ್ ನಗರದಲ್ಲಿ ಆಗಸದಲ್ಲಿ ಬೃಹತ್ ಗಾತ್ರದ ಸುಳಿಯಾಕಾರದ ಕುಳಿ ಕಂಡುಬಂದಿದ್ದು, ಯುಎಇ ಜನರಲ್ಲಿ ವಿಸ್ಮಯ ಹುಟ್ಟಿಸಿದೆ.

ಈ ಘಟನೆ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಗಸದಲ್ಲಿ ದೊಡ್ಡ ಗಾತ್ರದ ವೃತ್ತಾಕಾರದ ಹೊಂಡ ಕಾಣಿಸಿಕೊಂಡಿದೆ. ಇಬ್ರಾಹಿಂ ಅಲ್ ಜರ್ವಾನ್ ಎಂಬವರು ಈ ವಿಡಿಯೊವನ್ನು ಟ್ವಿಟರ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇವರು ಹವಾಮಾನ ತಜ್ಞರು ಮತ್ತು ಬಾಹ್ಯಾಕಾಶ ವಿಷಯ ತಜ್ಞರು ಎಂದು ಡೈಲಿ ಮೇಲ್ ವರದಿ ಮಾಡಿದೆ.

ಇದು ಹಲವರ ಕುತೂಹಲ ಹಾಗೂ ಪ್ರಶ್ನೆಗಳಿಗೆ ಕಾರಣವಾಗಿದೆ. ಈ ರಂದ್ರ ಯುಎಫ್‍ಒ ಅಂದರೆ ಮತ್ತೊಂದು ಜಗತ್ತಿಗೆ ದಾರಿಯೇ ಅಥವಾ ಭೂಗರ್ಭದ ವಿಸ್ಮಯವೇ ಎಂದು ಹಲವರು ಪ್ರಶ್ನಿಸಿದ್ದಾರೆ. ಆದರೆ ಈ ವಿಸ್ಮಯವನ್ನು ಹವಾಮಾನ ತಜ್ಞರು ಸುಲಭವಾಗಿ ಭೇದಿಸಿದ್ದಾರೆ ಎಂದು ಡೈಲಿ ಮೇಲ್ ಹೇಳಿದೆ. ಈ ಪ್ರಕ್ರಿಯೆಯನ್ನು ಫಾಲ್‍ ಸ್ಟ್ರೀಕ್ ಹೋಲ್ ಎಂದು ಅವರು ಕರೆದಿದ್ದು, ಮೋಡದಲ್ಲಿರುವ ನೀರಿನ ಅಂಶದ ಉಷ್ಣತೆಯು ಮಂಜುಗಡ್ಡೆ ಮಟ್ಟಕ್ಕಿಂತ ಕಡಿಮೆಯಾದಾಗ ಹೀಗಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News