ಕೆಸಿಎಫ್ ರಹೀಲಿ ಸೆಕ್ಟರ್ ನೂತನ ಸಮಿತಿ ಅಸ್ತಿತ್ವಕ್ಕೆ

Update: 2019-03-22 17:49 GMT

ಜಿದ್ದಾ, ಮಾ.22: ಕೆಸಿಎಫ್ ಜಿದ್ದಾ ಝೋನ್ ಅಧೀನದಲ್ಲಿರುವ ರಹೀಲಿ ಸೆಕ್ಟರಿನ ಮಹಾಸಭೆ ಇತ್ತೀಚೆಗೆ ರಹೀಲಿ ಮಲ್ಜ ವಿಲ್ಲಾದಲ್ಲಿ ಸೆಕ್ಟರ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಜಿ.ಎಂ ಹಾಫಿಲ್ ಸುಲೈಮಾನ್ ಹನೀಫಿ ಉಸ್ತಾದ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಜಿ ಎಂ ಇಬ್ರಾಹಿಂ ಫುರ್ಖಾನಿ ಉಸ್ತಾದ್ ಉಪದೇಶ ನೀಡಿದರು.

ಬಳಿಕ ಕಳೆದ ವರ್ಷದ ವರದಿಯನ್ನು ಅಬ್ದುರ್ರಹ್ಮಾನ್ ವಿಧ್ಯಾನಗರ್ ಮಂಡಿಸಿದರು. ಝೋನ್ ನಿಂದ ರೀ- ಓರ್ಗನೈಸಿಂಗ್ ಆಫೀಸರಾಗಿ ಆಗಮಿಸಿದ ಅಶ್ರಫ್ ಜಯಪುರವರು ಹಳೆ ಕಮಿಟಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ರಚಿಸಿದರು.

ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ವಿಧ್ಯಾ ನಗರ, ಪ್ರ.ಕಾರ್ಯದರ್ಶಿಯಾಗಿ ಬಶೀರ್ ಬಾಳೆಪುಣಿ, ಕೋಶಾಧಿಕಾರಿಯಾಗಿ ಹಕೀಂ ಅಡ್ಡೂರು ನೇಮಕಗೊಂಡರು. 

ಸಂಘಟನೆ ಇಲಾಖೆ ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಸಖಾಫಿ, ಕಾರ್ಯದರ್ಶಿಯಾಗಿ ಫಾರುಖ್ ಕುಂತೂರು, ಶಿಕ್ಷಣ ವಿಭಾಗದ 
ಅಧ್ಯಕ್ಷರಾಗಿ ಇಲ್ಯಾಸ್ ಲತೀಫಿ ಕಟ್ಟೆಮಾರ್, ಕಾರ್ಯದರ್ಶಿಯಾಗಿ ಸಫ್ವಾನ್ ಅಡ್ಡೂರು, ಸಾಂತ್ವನ ಇಲಾಖೆಯ ಅಧ್ಯಕ್ಷರಾಗಿ ಅನ್ಸಾರ್ ಬಜ್ಪೆ, ಕಾರ್ಯದರ್ಶಿಯಾಗಿ ಸಾದಿಕ್ ಆನೆಕಲ್ಲು, ಪ್ರಕಾಶನ ಇಲಾಖೆಯ ಅಧ್ಯಕ್ಷರಾಗಿ ಬಷೀರ್ ಮಂಜನಾಡಿ, ಕಾರ್ಯದರ್ಶಿಯಾಗಿ
ಆಶಿಫ್ ಉಳ್ಳಾಲ್ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ರಹ್ಮಾನ್ ಸಖಾಫಿ, ಇಲ್ಯಾಸ್ ಲತೀಫಿ, ಸಂಶು ಕುಂತೂರು, ಬಶೀರ್ ಮಂಜನಾಡಿ, ಅಶಿಫ್ ಉಳ್ಳಾಲ್, ಹಂಝ ನಂದಾವರ, ಸಫ್ವಾನ್ ಅಡ್ಡೂರು, ಫಾರುಕ್ ಕುಂತೂರು, ಅಝೀಝ್ ಬೆಳ್ಳಾರೆ, ಸಾದಿಕ್ ಕಾರಾಜೆ, ಶಿಹಾಬ್ ಕಲ್ಕಟ್, ಖಾಲಿದ್ ಬೆಳ್ಳಾರೆ, ಫಾರುಖ್ ಪಿಂಡಿಕಾಯಿ, ಅಬ್ಬಾಸ್ ಆರಾಡಿ, ಸಾದಿಕ್ ಸೇರಜೆ , ರಶಿದ್ ಬೆಳ್ಳಾರೆ, ಅಶ್ರಫ್ ಮೊಂಟುಗೊಳಿಯನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮವನ್ನು ಕಾರ್ಯದರ್ಶಿ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News