ಕೆಸಿಎಫ್ ಮಕ್ಕತುಲ್ ಮುಕರ್ರಮ ಸೆಕ್ಟರ್ ಗೆ ನೂತನ ಸಾರಥ್ಯ

Update: 2019-03-30 16:12 GMT

ಮಕ್ಕಾ,ಮಾ.30: ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಮಹ್ಲರತುಲ್ ಬದ್ರಿಯಾ ಹಾಗೂ ಮಹಾಸಭೆಯು ಸೆಕ್ಟರ್ ಅಧ್ಯಕ್ಷ ಹನೀಫ್ ಸಖಾಫಿ ಬೊಳ್ಮಾರ್ ರವರ ಅಧ್ಯಕ್ಷತೆಯಲ್ಲಿ ಅಲ್ ರೈಹಾನ್ ಆಸ್ಪಿಟಲ್ ಹಾಲ್ ಸಿತ್ತೀನ್ ನಲ್ಲಿ ಜರಗಿತು. 

ಕಾರ್ಯಕ್ರಮವನ್ನು ದಾರುಲ್ ಇರ್ಷಾದ್ ಆರ್ಗನೈಝರ್ ಉಮರ್ ಮದನಿ ಖಾಮಿಲ್ ಸಖಾಫಿ ಪರಪ್ಪು ಉಧ್ಘಾಟಿಸಿದರು. 'ಅಲೈಕುಂ ಬಿಲ್ ಜಮಾಅಃ' ಎಂಬ ಘೋಷ ವಾಕ್ಯದಡಿಯಲ್ಲಿ ಕರ್ನಾಟಕ ರಾಜ್ಯ SYS ಉಪಾಧ್ಯಕ್ಷ ಡಿ.ಕೆ ಉಮರ್ ಸಖಾಫಿ ಕಂಬಳಬೆಟ್ಟು ವಿಷಯ ಮಂಡಿಸಿದರು. 

2019 ಗಲ್ಫ್ ಇಶಾರ ಚಂದ ಅಭಿಯಾನದಲ್ಲಿ ಚಂದದಾರರಾದವರಿಗೆ ಸೆಕ್ಟರ್ ಮಟ್ಟದಲ್ಲಿ ಡ್ರಾ ನಡೆಸಿ ಪ್ರಥಮ ಬಹುಮಾನವನ್ನು ಅಬ್ದುಲ್ ರಝ್ಝಾಕ್ ತೆಕ್ಕಾರ್ ಹಾಗೂ ಸೆಕ್ಟರ್ ನ ಐದು ಯೂನಿಟ್ ಗಳಿಂದ ಅತೀ ಹೆಚ್ಚು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದಕ್ಕೆ ಕೆಸಿಎಫ್ ಸಿತ್ತೀನ್ ಯೂನಿಟ್ ಪ್ರಥಮ  ಮತ್ತು ಕೆಸಿಎಫ್ ಕುದೈ ಯೂನಿಟ್ ದ್ವಿತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿತು. ಇದೇ ವೇಳೆ ಕರ್ನಾಟಕ ರಾಜ್ಯ SYS ಉಪಾಧ್ಯಕ್ಷರು ಡಿ.ಕೆ ಉಮರ್ ಸಖಾಫಿ ಕಂಬಳಬೆಟ್ಟು ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. 

ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ ವರದಿ ಮತ್ತು ಲೆಕ್ಕ ಪತ್ರವನ್ನು ಮಂಡಿಸಿದರು. ರೀ- ಓರ್ಗನೈಸಿಂಗ್ ಆಫೀಸರಾಗಿ ಆಗಮಿಸಿದ ಝೋನಲ್ ನಾಯಕರಾದ ಜಅಫರ್ ಸಖಾಫಿ ಕರಾಯ ಮತ್ತು ಸಿದ್ದೀಖ್ ಬಾಳೆಹೊನ್ನೂರು ರವರ ನೇತೃತ್ವದಲ್ಲಿ ಹಳೆಯ ಸಮಿತಿಯನ್ನು ವಿಸರ್ಜಿಸಿ ಹೊಸ ಕಮಿಟಿಯನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ನವಾಝ್ ಇಮ್ದಾದಿ ಬಜಾಲ್, ಪ್ರಧಾನ ಕಾರ್ಯದರ್ಶಿಯಾಗಿ ಇಕ್ಬಾಲ್ ಕಕ್ಕಿಂಜೆ ಮರು ಆಯ್ಕೆ, ಕೋಶಾಧಿಕಾರಿಯಾಗಿ ಮುಹಮ್ಮದ್ ಗಂಟಲ್ಕಟ್ಟೆ ನೇಮಕಗೊಂಡರು.

ಸಂಘಟನೆ ಇಲಾಖೆ ಅಧ್ಯಕ್ಷರಾಗಿ ಫಾರೂಖ್ ಹನೀಫಿ ಬೋವು, ಕಾರ್ಯದರ್ಶಿಯಾಗಿ ಅಬ್ದುಲ್ಲಾ ಕಿನ್ಯಾ, ಶಿಕ್ಷಣ ಇಲಾಖೆ ಅಧ್ಯಕ್ಷರಾಗಿ ಉಸ್ಮಾನ್ ಸಅದಿ ನೆಲ್ಯಾಡಿ, ಕಾರ್ಯದರ್ಶಿಯಾಗಿ ಕಲಂದರ್ ಶಾಫಿ ಅಸೈಗೋಳಿ, ಸಾಂತ್ವನ ಇಲಾಖೆ ಅಧ್ಯಕ್ಷರಾಗಿ ಮೂಸಾ ಹಾಜಿ ಕಿನ್ಯಾ, ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಉಳ್ಳಾಲ, ಪ್ರಕಾಶನ ಇಲಾಖೆ ಅಧ್ಯಕ್ಷರಾಗಿ ಬಶೀರ್ ಕೆಜೆಕಾರ್, ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಇರ್ವತ್ತೂರು ಹಾಗೂ ಕಾರ್ಯಕಾರಿ ಸದಸ್ಯರಾಗಿ ಹನೀಫ್ ಸಖಾಫಿ ಬೊಳ್ಮಾರ್, ಸ್ವಾದಿಖ್ ಸಖಾಫಿ ಕಿಲ್ಲೂರು, ಇರ್ಷಾದ್ ಉಚ್ಚಿಲ್, ಅಕ್ಬರ್ ಅಲಿ ಮಾಚಾರ್, ಅಬ್ಬಾಸ್ ಸಾಲ್ಮರ, ಹನೀಫ್ ಕೋಳಿಯೂರು, ಶರೀಫ್ ಪಲ್ಲಮಜಲ್, ಅಶ್ರಫ್ ಮಂಜನಾಡಿ, ನಝೀರ್ ಸೂರಿಂಜೆ, ಅಶ್ರಫ್ ಮಂಗಿಲಪದವು ರವರನ್ನೊಳಗೊಂಡ 21 ಮಂದಿಯನ್ನು ಆಯ್ಕೆಮಾಡಲಾಯಿತು.

ಕಾರ್ಯಕ್ರಮವನ್ನು ಇಕ್ಬಾಲ್ ಕಕ್ಕಿಂಜೆ ಸ್ವಾಗತಿಸಿ, ನೂತನ ಅಧ್ಯಕ್ಷರು ನವಾಝ್ ಇಮ್ದಾದಿ ಬಜಾಲ್ ಧನ್ಯವಾದ ಗೈದರು ಈ ಸಂದರ್ಭ ಕೆಸಿಎಫ್ ಜಿದ್ದಾ ಝೋನಲ್ ಪ್ರಧಾನ ಕಾರ್ಯದರ್ಶಿ ಇಬ್ರಾಹೀಮ್ ಕಿನ್ಯಾ, ಬನ್ನೂರು ಜಿಸಿಸಿ ಸುನ್ನೀ ಸೆಂಟರ್ ಇದರ ಮುಖಂಡರಾದ ಇಬ್ರಾಹೀಮ್ ಪಾಪ್ಲಿ ಬನ್ನೂರು ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News