ಕೆಸಿಎಫ್ ಖಮೀಸ್ ಮುಶೈತ್ ಸೆಕ್ಟರ್ ನೂತನ ಸಮಿತಿ ಅಸ್ತಿತ್ವಕ್ಕೆ

Update: 2019-04-01 15:53 GMT

ಜಿದ್ದಾ,ಎ.1: ಕೆಸಿಎಫ್ ಜಿದ್ದಾ ಝೋನ್ ಅಧೀನದಲ್ಲಿರುವ ಖಮೀಸ್ ಮುಶೈತ್ ಸೆಕ್ಟರ್ ನ ಸ್ವಲಾತ್ ಮಜ್ಲಿಸ್ ಹಾಗೂ ಮಹಾಸಭೆಯು ಸೆಕ್ಟರ್ ಅಧ್ಯಕ್ಷ ಶರೀಫ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ರಶೀದ್ ತೋಟಲ್ ನಿವಾಸದಲ್ಲಿ ಜರುಗಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮುಹಿಮ್ಮಾತ್ ಸಂಸ್ಥೆಯ ಪ್ರಧಾನ ಮುದರ್ರಿಸ್ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಳ ಸ್ವಲಾತ್ ಗೆ ನೇತೃತ್ವ ಮತ್ತು ಸಂಘಟನೆಯ ಅವಶ್ಯಕತೆಯ ಬಗ್ಗೆ ವಿವರಣೆಯನ್ನು ನೀಡಿದರು. ಈ ವೇಳೆ ಮುಹಿಮ್ಮಾತ್ ಸಂಸ್ಥೆಯ ಮುದರ್ರಿಸ್ ಅಬ್ದುಲ್ ಅಝೀಝ್ ಮಿಸ್ಬಾಹಿ ಹಾಗೂ ಭೇಷ್ ಸೆಕ್ಟರ್ ಅಧ್ಯಕ್ಷ CH ಅಬ್ದುಲ್ಲಾ ಸಖಾಫಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಲಾಯಿತು.  

ಸೆಕ್ಟರ್ ಅಧ್ಯಕ್ಷ ಶರೀಫ್ ಉಸ್ತಾದ್ ವರದಿ ಹಾಗೂ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ರಝಾಕ್ ವಿಟ್ಲ ಲೆಕ್ಕ ಪತ್ರವನ್ನು ಮಂಡಿಸಿದರು. ರೀ-ಓರ್ಗನೈಸಿಂಗ್ ಆಫೀಸರಾಗಿ ಆಗಮಿಸಿದ ಝೋನಲ್ ನಾಯಕರಾದ CH ಅಬ್ದುಲ್ಲಾ  ಸಖಾಫಿ ಕಳಂಜಿಬೈಲ್ ರವರು ಹಳೆಯ ಸಮಿತಿಯನ್ನು ವಿಸರ್ಜಿಸಿ ಹೊಸ ಸಮಿತಿಯನ್ನು ಆಯ್ಕೆ ಮಾಡಿದರು.

ಅಧ್ಯಕ್ಷರಾಗಿ ಅಬ್ದುಲ್ ರಝಾಖ್ ಬನ್ನೂರ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ವಿಟ್ಲ, ಕೋಶಾಧಿಕಾರಿಯಾಗಿ ಆದಿಲ್ ಅನ್ಸಾರ್ ಮೂಡಬಿದ್ರೆ ನೆಮಕಗೊಂಡರು. ಸಂಘಟನಾ ಇಲಾಖೆ ಅಧ್ಯಕ್ಷರಾಗಿ ಇಬ್ರಾಹಿಂ ದೇರಳಕಟ್ಟೆ, ಕಾರ್ಯದರ್ಶಿಯಾಗಿ ಶರೀಫ್ ಉಸ್ತಾದ್ ವಿಟ್ಲ, ಶಿಕ್ಷಣ ಇಲಾಖೆ ಅಧ್ಯಕ್ಷರಾ ಗಿಉಮರ್ ವಿಟ್ಲ, ಕಾರ್ಯದರ್ಶಿಯಾಗಿ ಅನ್ವರ್ ಕಕ್ಕೆಪದವು, ಸಾಂತ್ವನ ಇಲಾಖೆ ಅಧ್ಯಕ್ಷರಾಗಿ ರಶೀದ್ ತೋಟಲ್, ಕಾರ್ಯದರ್ಶಿಯಾಗಿ ಅನ್ಸಾಫ್ ಉಳ್ಳಾಲ, ಪ್ರಕಾಶನ ಇಲಾಖೆ ಅಧ್ಯಕ್ಷರಾಗಿ ಖಾಲಿದ್ ಕಬಕ, ಕಾರ್ಯದರ್ಶಿಯಾಗಿ ರಿಯಾಝ್ ಮಂಜನಾಡಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶ್ರಫ್ ತಂಙಳ್, ಆಸೀಫ್ ತುರ್ಕಳಿಕೆ, ಸಿದ್ದಿಕ್  ತುರ್ಕಳಿಕೆ, ಜಮಾಲ್ ಕೆಸಿ ರೋಡ್, ಸಫ್ವಾನ್ ಉಳ್ಳಾಲ, ಮುಸ್ತಫಾ ಫರಂಗಿಪೇಟೆ, ಅಬೂಬಕರ್ ಪುರುಷರಕಟ್ಟೆ, ನಿಯಾಝ್ ವೇಣೂರ್, ಹನೀಫ್ ಹಿಮಮಿ, ನಝೀರ್ ಮಡಿಕೇರಿ ಒಳಗೊಂಡ ಇಪ್ಪತ್ತು ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕೆಸಿಎಫ್ ಭೇಶ್ ಸೆಕ್ಟರ್ ನಾಯಕರಾದ ಆಸಿಫ್ ಕ್ರಷ್ಣಾಪುರ, ಸಿರಾಜುದ್ದೀನ್ ತೆಕ್ಕಾರ್ ಮತ್ತು ಸಲೀಂ ತೆಕ್ಕಾರ್ ಸೇರಿ ಅನೇಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶರೀಫ್ ವಿಟ್ಲ ಸ್ವಾಗತಿಸಿ, ನೂತನ ಅಧ್ಯಕ್ಷ ರಝಾಕ್ ಬನ್ನೂರ್ ಧನ್ಯವಾದ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News