ಅಬುಧಾಬಿ: ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ರಕ್ತದಾನ ಶಿಬಿರ

Update: 2019-04-07 11:46 GMT

ಅಬುಧಾಬಿ, ಎ.7: ಬ್ಲಡ್ ಡೋನರ್ಸ್ ಮಂಗಳೂರು ಮತ್ತು ಬದ್ರಿಯ ಫ್ರೆಂಡ್ಸ್ ದುಬೈ ಹಾಗೂ ಅಬುಧಾಬಿ ಕಾಸ್ರೋಟ್ಟರ್ ಸಹಯೋಗದಲ್ಲಿ  ಎ.5ರಂದು ಮದೀನ ಝಾಯೇದ್ ನ ಲುಲು ಹೈಪರ್ ಮಾರ್ಕೆಟ್ ಸಂಕೀರ್ಣದಲ್ಲಿ ರಕ್ತದಾನ ಶಿಬಿರ  ನಡೆಯಿತು,

ಬ್ಲಡ್ ಡೋನರ್ಸ್ ಮಂಗಳೂರು ಯು ಎ ಇ ಘಟಕದ ಕಾರ್ಯದರ್ಶಿ ಸಂಶುದ್ದೀನ್ ಪಿಲಿಗೂಡು ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಇರ್ಫಾನ್ ಉಚ್ಚಿಲ ಬದ್ರಿಯ ಫ್ರೆಂಡ್ಸ್ ಮಾತನಾಡಿ, ರಕ್ತಕ್ಕೆ ವರ್ಷವಿಡೀ ನಿರಂತರವಾಗಿ ಬೇಡಿಕೆ ಇರುತ್ತದೆ. ಏಕೆಂದರೆ ಅಪಘಾತಗಳು, ತುರ್ತು ಚಿಕಿತ್ಸೆ ಸಂದರ್ಭಗಳು ಎದುರಾಗುತ್ತಲೇ ಇರುತ್ತವೆ. ಜೊತೆಯಲ್ಲಿ ಕ್ಯಾನ್ಸರ್ ರೋಗಿಗಳು, ಗರ್ಭಿಣಿಯರು, ಹಿಮೋಫೀಲಿಯ ಮುಂತಾದ ರೋಗಿಗಳು ರಕ್ತದಾನಿಗಳನ್ನೇ ಅವಲಂಬಿಸಿರುತ್ತಾರೆ. ಒಮ್ಮೆ ದಾನಿಗಳಿಂದ ಶೇಖರಿಸಿದ ರಕ್ತ 35 ದಿನಗಳವರೆಗೆ ಮಾತ್ರ ಬಳಕೆ ಯೋಗ್ಯವಾಗಿರುತ್ತವೆ. ಆದ್ದರಿಂದ ಜನತೆ ಆಗಾಗ ರಕ್ತದಾನ ಮಾಡಿದಲ್ಲಿ ಮಾತ್ರ ನಿರಂತರವಾಗಿ ಆವಶ್ಯಕತೆ ಇರುವವರಿಗೆ, ರಕ್ತ ನೀಡಿ ಜೀವ ಉಳಿಸಲು ಸಾಧ್ಯ ಎಂದು ರಕ್ತದ ಮಹತ್ವದ ಬಗ್ಗೆ ತಿಳಿಸಿದರು.

ಈ ರಕ್ತದಾನ ಶಿಬಿರದಲ್ಲಿ ಒಟ್ಟು 52 ವಿದೇಶಿಯರು  ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.  

ಮುಖ್ಯ ಅತಿಥಿಗಳಾಗಿ  ಇಮ್ರಾನ್ ಎನ್.ಎಂ., ನವಾಝ್ ಅಬ್ದುಲ್ ರಹ್ಮಾನ್ ಸಜೀಪ, ನೌಷಾದ್ ಸಾಲ್ಮರ, ಶಫಾಫ್ ಗಂಜಿಮಠ, ರಿಝ್ವಾನ್, ಆಶಿಕ್ ಬಂದರ್ ಉಪಸ್ಥಿತರಿದ್ದರು.

 ಬ್ಲಡ್ ಡೋನರ್ಸ್ ಮಂಗಳೂರು ಇದರ ಕಾರ್ಯನಿರ್ವಾಹಕರಾದ ರಾಝಿಕ್ ಡಿ ವಿಟ್ಲ ವಂದಿಸಿದರು. ನಝೀರ್ ಬಿಕರ್ನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News