ಅಬುಧಾಬಿ: ಬ್ಯಾರೀಸ್ ವೆಲ್ಫೇರ್ ಫೋರಂನ 7ನೇ ಸಾಲಿನ ಸಾಮಾನ್ಯ ಸಭೆ

Update: 2019-04-16 05:19 GMT

ಅಬುಧಾಬಿ: ಸಾಮಾಜಿಕ ಸಂಘಟನೆಯಾದ ಬ್ಯಾರೀಸ್ ವೆಲ್ಫೇರ್ ಫೋರಂ (ಬಿಡಬ್ಲ್ಯೂಎಫ್) ಅಬುಧಾಬಿ ಇದರ 7ನೇ ಸಾಲಿನ ಸಾಮಾನ್ಯ ಸಭೆಯು ಇಂಡಿಯನ್ ಸೋಶಿಯಲ್ ಸೆಂಟರ್ ನಲ್ಲಿ ರವಿವಾರ  ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಬಿಡಬ್ಲ್ಯೂಎಫ್ ಅಧ್ಯಕ್ಷ  ಮುಹಮ್ಮದ್ ಅಲಿ ಉಚ್ಚಿಲ್, ಸಾಮೂಹಿಕ ವಿವಾಹ, ಶೌಚಾಲಯ ನಿರ್ಮಾಣ ದಂತಹ ಸಮಾಜ ಸೇವೆಗೆ ಸಹಕರಿಸಿದ ಎಲ್ಲ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಬಿಡಬ್ಲ್ಯೂಎಫ್ ನ ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗೆ ಕಮಿಟಿ ಸದಸ್ಯರ ಸಹಕಾರ, ಒಗ್ಗಟ್ಟು ಹಾಗೂ ಅವರ ಸಮರ್ಪಣಾ ಮನೋಭಾವವೇ ಕಾರಣ ಎಂದು ಪಧಾಧಿಕಾರಿಗಳನ್ನು ಅಭಿನಂದಿಸಿದರು.

ಮುಖ್ಯ ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆ ಸದಸ್ಯರನ್ನು ಸ್ವಾಗತಿಸಿ  ಮಾತನಾಡುತ್ತಾ, 2004 ರಲ್ಲಿ ಪ್ರಾರಂಭವಾಗಿ 15 ವರ್ಷಗಳನ್ನು ಪೂರೈಸಿದ ಬಿಡಬ್ಲ್ಯೂಎಫ್ ಇಷ್ಟು ಉತ್ತುಂಗಕ್ಕೇರಲು ಕಮಿಟಿಯ ಹಿಂದಿನ ಹಾಗೂ ಇಂದಿನ ಎಲ್ಲಾ ಸದಸ್ಯರ ನಿಸ್ವಾರ್ಥ ಕೊಡುಗೆಯೇ ಕಾರಣ ಎಂದರು.

ಅಬ್ದುಲ್ ಹಮೀದ್ ಗುರುಪುರ ವರದಿ ಮಂಡಿಸಿದರೆ, ಖಜಾಂಜಿ ಮಹಮ್ಮದ್ ಸಿದ್ದಿಕ್ ಲೆಕ್ಕಪತ್ರ ಮಂಡಿಸಿದರು, ಆಡಿಟರ್ ಅಬ್ದುಲ್ ಮಜೀದ್ ಅನುಮೋದಿಸಿದರು. ಇದೇ ಸಂದರ್ಭ ಹಳೆಯ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಅವಧಿಗಾಗಿ ಅಧ್ಯಕ್ಷರಾಗಿ  ಮುಹಮ್ಮದ್ ಅಲಿ ಉಚ್ಚಿಲರವರ ಸಾರಥ್ಯದಲ್ಲಿ 25 ಸದಸ್ಯರ ನೂತನ ಕಾರ್ಯನಿರ್ವಾಹಕ ಸಮಿತಿಯನ್ನು ರಚಿಸಲಾಯಿತು.

ನೂತನ ಸಮಿತಿಯ ಪದಾಧಿಕಾರಿಗಳ ವಿವರ

ಅಧ್ಯಕ್ಷರಾಗಿ ಮುಹಮ್ಮದ್ ಅಲಿ ಉಚ್ಚಿಲ

ಮುಖ್ಯ ಕಾರ್ಯದರ್ಶಿ: ಅಬ್ದುಲ್ಲಾ ಮದುಮೂಲೆ

ಖಜಾಂಚಿ: ಮುಹಮ್ಮದ್ ಸಿದ್ದಿಕ್ ಕಾಪು

ಉಪಾಧ್ಯಕ್ಷರು: ಹಂಝ ಅಬ್ದುಲ್ ಖಾದರ್ ಹಾಗೂ ಅಬ್ದುಲ್ ರೌಫ್ ಕೈಕಂಬ.

ಮುಖ್ಯ ಸಲಹೆಗಾರರಾಗಿ:  ಅಬ್ದುಲ್ ಬಶೀರ್ ಬಜ್ಪೆ ಹಾಗೂ ಅಬೂಬಕರ್ ಸಿದ್ದೀಕ್ ಉಚ್ಚಿಲ

ಸಲಹೆಗಾರರಾಗಿ: ಮುಹಮ್ಮದ್ ಕಲ್ಲಾಪು ಹಾಗೂ ಮುಹಮ್ಮದ್ ಹನೀಫ್ ಉಳ್ಳಾಲ

ಸಂಯೋಜಕರು: ಇಮ್ರಾನ್ ಅಹ್ಮದ್ ಕುದ್ರೋಳಿ.

ಆಡಿಟರ್: ಅಬ್ದುಲ್ ಮಜೀದ್ ಎ.ಜಿ.

ಕಾರ್ಯದರ್ಶಿ: ಅಬ್ದುಲ್ ಹಮೀದ್ ಗುರುಪುರ

ಜತೆ ಕಾರ್ಯದರ್ಶಿ: ಅಬ್ದುಲ್ ಜಲೀಲ್ ಜಿ.ಎಚ್

ಜಂಟಿ ಖಜಾಂಚಿ: ಅಬ್ದುಲ್ ಮಜೀದ್ ಆತೂರ್, ಮೊಯಿನುದ್ದೀನ್ ಹಂದೇಲ್

ಜಂಟಿ ಸಂಯೋಜಕರಾಗಿ: ಅಹಮದ್ ನವಾಝ್ ಉಚ್ಚಿಲ, ಅಬ್ದುಲ್ ರಶೀದ್ ವಿ.ಕೆ,  ಅಬ್ದುಲ್ ಮುಜೀಬ್ ಉಚ್ಚಿಲ

ಸದಸ್ಯರಾಗಿ: ಅಬ್ದುಲ್ ರಶೀದ್ ಬಿಜೈ,  ಇರ್ಫಾನ್ ಅಹ್ಮದ್ ಕುದ್ರೋಳಿ, ಬಶೀರ್ ಅಬ್ಬಾಸ್ ಉಚ್ಚಿಲ ಅವರನ್ನು ಆಯ್ಕೆ ಮಾಡಲಾಯಿತು.

ಹನೀಫ್ ಉಳ್ಳಾಲ್ ಕಿರಾಅತ್ ಪಠಿಸಿದರೆ, ಹಮೀದ್ ಗುರುಪುರ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News