ಗಲ್ಫ್ ಮೆಡಿಕಲ್ ವಿವಿ: ಆರೋಗ್ಯ ನಿರ್ವಹಣೆ, ಅರ್ಥಶಾಸ್ತ್ರ ಪದವಿ ತರಗತಿಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭ

Update: 2019-04-17 17:19 GMT

ಅಜ್ಮಾನ್, ಎ.17: ಅಜ್ಮಾನ್‌ನ ಗಲ್ಫ್ ಮೆಡಿಕಲ್ ವಿವಿ (ಜಿಎಂಯು) ಆರಂಭಿಸಿರುವ ಆರೋಗ್ಯ ನಿರ್ವಹಣೆ ಮತ್ತು ಅರ್ಥಶಾಸ್ತ್ರ ಕಾಲೇಜಿನಲ್ಲಿ ಪದವಿ ಮತ್ತು ಕಾರ್ಯನಿರ್ವಾಹಕ ಸ್ನಾತಕೋತ್ತರ ಪದವಿ ವಿಷಯಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿ ಆರಂಭವಾಗಿದೆ ಎಂದು ಆಡಳಿತ ವರ್ಗ ತಿಳಿಸಿದೆ.

ಆರೋಗ್ಯ ನಿರ್ವಹಣೆ , ಆರೋಗ್ಯ ಅರ್ಥಶಾಸ್ತ್ರ, ಕಾರ್ಯನೀತಿ ತಯಾರಿ ಮತ್ತು ನಿರ್ವಹಣೆ ಕ್ಷೇತ್ರದಲ್ಲಿ ಸಮಗ್ರ ಕೌಶಲ್ಯ ಮತ್ತು ಜ್ಞಾನ ಬೆಳೆಸಿಕೊಂಡು ವೃತ್ತಿ ಜೀವನ ಆರಂಭಿಸಲು ಇದೊಂದು ಸದವಕಾಶವಾಗಿದೆ. ಈ ಹೊಸ ಕಾಲೇಜಿನ ಆರಂಭದೊಂದಿಗೆ ಒಟ್ಟು 6 ಕಾಲೇಜು, 26 ಮಾನ್ಯತೆ ಪಡೆದ ಶಿಕ್ಷಣ ಕ್ರಮದ ಮೂಲಕ ಈ ಪ್ರದೇಶದಲ್ಲಿರುವ ಅತ್ಯಂತ ಬೃಹತ್ ಖಾಸಗಿ ಮೆಡಿಕಲ್ ಕಾಲೇಜು ಎಂಬ ಹೆಗ್ಗಳಿಕೆಗೆ ಜಿಎಂಯು ಪಾತ್ರವಾಗಿದೆ. ಪ್ರತೀ ವರ್ಷ ಜಿಎಂಯುವಿನ ಅತ್ಯಧಿಕ ಬೇಡಿಕೆಯಿರುವ ಶಿಕ್ಷಣ ಕ್ರಮಗಳ ಕುರಿತು ವಿಶ್ವದ ವಿವಿಧೆಡೆಯಿಂದ 6 ಸಾವಿರಕ್ಕೂ ಹೆಚ್ಚಿನ ವಿಚಾರಣೆಯನ್ನು ಕಾಲೇಜಿನ ಪ್ರವೇಶ ವಿಭಾಗವು ಸ್ವೀಕರಿಸುತ್ತದೆ.

ಆರೋಗ್ಯ ನಿರ್ವಹಣೆ ಮತ್ತು ಅರ್ಥಶಾಸ್ತ್ರ ವಿಷಯದಲ್ಲಿ ಎರಡು ಶಿಕ್ಷಣ ಕ್ರಮವನ್ನು ಆರಂಭಿಸಿದೆ. ಬ್ಯಾಚುಲರ್ ಆಫ್ ಸೈಯನ್ಸ್ ಇನ್ ಹೆಲ್ತ್‌ಕೇರ್ ಮ್ಯಾನೇಜ್‌ ಮೆಂಟ್ ಆ್ಯಂಡ್ ಇಕನಾಮಿಕ್ಸ್ (ಬಿಎಸ್ಸಿ.ಎಚ್‌ಎಂಇ): ಆರೋಗ್ಯ ನಿರ್ವಹಣೆ ಉದ್ಯಮದ ಬಗ್ಗೆ ಆಳವಾದ ತಿಳುವಳಿಕೆ ಮೂಡಿಸುವ ಉದ್ದೇಶದ ನಾಲ್ಕು ವರ್ಷದ ಪದವಿ ಕಾರ್ಯಕ್ರಮ.

ದಿ ಎಕ್ಸಿಕ್ಯೂಟಿವ್ ಮಾಸ್ಟರ್ ಇನ್ ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್ ಆ್ಯಂಡ್ ಇಕನಾಮಿಕ್ಸ್(ಇಎಂಎಚ್‌ಎಂಇ): ಆರೋಗ್ಯ ನಿರ್ವಹಣೆ ಉದ್ಯಮದಲ್ಲಿ ಮಧ್ಯಮ ದಿಂದ ಹಿರಿಯ ಮಟ್ಟದ ವೃತ್ತಿಪರರಿಗೆ ಅನುಕೂಲವಾಗುವ 12 ತಿಂಗಳ ಶಿಕ್ಷಣ ಕಾರ್ಯಕ್ರಮ. ಕಾರ್ಯನಿರ್ವಹಿಸುತ್ತಿರುವ ವೃತ್ತಿಪರರಿಗೆ ತಮ್ಮ ವೃತ್ತಿ ನಿರೀಕ್ಷೆಯನ್ನು ಸುಧಾರಿಸಿಕೊಳ್ಳಲು ಮತ್ತು ವೃತ್ತಿಪರ ಜಾಲಬಂಧ(ನೆಟ್‌ವರ್ಕ್) ವಿಸ್ತರಿಸಿಕೊಳ್ಳಲು ಹೆಚ್ಚು ಪ್ರಯೋಜನಕಾರಿಯಾಗಿದೆ.

ಕಾಲೇಜು ಮತ್ತು ಶಿಕ್ಷಣ ಕ್ರಮಗಳು ಯುಎಇಯ ಶಿಕ್ಷಣ ಸಚಿವಾಲಯದಿಂದ ಮಾನ್ಯತೆ ಪಡೆದಿವೆ. ಮಿಲಾನ್ ವಿವಿ, ಅರಿರೆನಾ ವಿವಿ, ಅಮೆರಿಕನ್ ಯುನಿವರ್ಸಿಟಿ ಆಫ್ ಕೈರೊ, ಸೆಂಟ್ರಲ್ ಫ್ಲೊರಿಡಾ ವಿವಿ ಮುಂತಾದ ಪ್ರಮುಖ ಅಂತರ್ ರಾಷ್ಟ್ರೀಯ ವಿವಿಗಳ ಸಹಯೋಗದೊಂದಿಗೆ ಈ ಶಿಕ್ಷಣ ಕ್ರಮವನ್ನು ವ್ಯವಸ್ಥೆ ಮಾಡಲಾಗಿದೆ. ಕಾಲೇಜು ಯುರೋಪಿಯನ್ ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್‌ನ ಸದಸ್ಯತ್ವ ಹೊಂದಿದೆ. ಇದೀಗ 2019ರ ಸೆಪ್ಟೆಂಬರ್‌ನಲ್ಲಿ ಆರಂಭವಾಗುವ ಪದವಿ ಮತ್ತು ಕಾರ್ಯನಿರ್ವಾಹಕ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ ಎಂದು ಜಿಎಂಯು ಕುಲಪತಿ ಪ್ರೊ. ಹೊಸ್ಸಾಂ ಹಮ್ದಿ ತಿಳಿಸಿದ್ದಾರೆ.

ಪ್ರೊ. ಹೊಸ್ಸಾಂ ಹಮ್ದಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News