'ಬಿಸ್ಮಿ' ರಿಯಾದ್: ವಾರ್ಷಿಕ ಮಹಾ ಸಭೆ, ನೂತನ ಸಮಿತಿ ರಚನೆ

Update: 2019-04-21 12:28 GMT

ರಿಯಾದ್: ಬಜ್ಪೆ ಸರೌಂಡಿಂಗ್ ಮೈನೊರಿಟೀಸ್ ಇತಿಹಾದ್ (ಬಿಸ್ಮಿ) ರಿಯಾದ್ ಇದರ ವಾರ್ಷಿಕ ಮಹಾ ಸಭೆ ಹಾಗೂ ನೂತನ ಸಮಿತಿ ರಚನೆಯು ರಿಯಾದ್ ಪ್ಯಾರಡೈಸ್ ಆಡಿಟೋರಿಯಂ ನಲ್ಲಿ ಶುಕ್ರವಾರ ಮಧ್ಯಾಹ್ನ ನಡೆಯಿತು.

ಶಫೀಕ್ ಹನೀಫ್ ಕಿರಾಅತ್ ಪಠಿಸಿದರು. ಸಮಿತಿ ಅಧ್ಯಕ್ಷ ಅಝೀಝ್ ಬಂಕಲ್ ಬಜ್ಪೆ ನೇತೃತ್ವದಲ್ಲಿ ಸಭೆ ನಡೆಯಿತು.

ಪ್ರಧಾನ ಕಾರ್ಯದರ್ಶಿ ಸಾಬಿತ್ ಹಸನ್ ವಾರ್ಷಿಕ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು. ಕೋಶಾಧಿಕಾರಿ ಇರ್ಷಾದ್ ಮೊಯ್ದಿನ್ ವಾರ್ಷಿಕ ವರದಿ ವಾಚಿಸಿದರು. ಬಜ್ಪೆ ಸುತ್ತಮುತ್ತಲಿನ ಜಮಾತಿಗೊಳಪಟ್ಟ ಪ್ರದೇಶದ ಅಭಿವೃದ್ಧಿಗೆ ಹಲವಾರು ಯೋಜನೆಗೆಳ ಮಾಹಿತಿಯನ್ನು ಸಭೆಯಲ್ಲಿ ಚರ್ಚಿಸಲಾಯಿತು. ಸಂಘಟನೆ ಸ್ಥಾಪನೆಯ ಉದ್ದೇಶ ಮತ್ತು ಇದರ ಮುಂದಿನ ಯೋಜನೆಗಳ ಬಗ್ಗೆ ಸಭೆಯಲ್ಲಿ ವಿವರಿಸಿ, ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

ನೂತನ ಪದಾಧಿಕಾರಿಗಳ ಆಯ್ಕೆ

ಬಿಸ್ಮಿ ರಿಯಾದಿನ ನೂತನ ಅಧ್ಯಕ್ಷರಾಗಿ ನಿಸಾರ್ ಅಹ್ಮದ್, ಉಪಾಧ್ಯಕ್ಷರುಗಳಾಗಿ ಇಬ್ರಾಹಿಂ ಬಜ್ಪೆ ಮತ್ತು ಮೊಯ್ದಿನ್ ಕೊಂಚಾರ್, ಪ್ರಧಾನ ಕಾರ್ಯದರ್ಶಿಯಾಗಿ ಇರ್ಷಾದ್ ಮೊಯ್ದಿನ್, ಜೊತೆ ಕಾರ್ಯದರ್ಶಿಯಾಗಿ ಶಫೀಕ್ ಹನೀಫ್, ಕೋಶಾಧಿಕಾರಿಯಾಗಿ ಖಾಲಿದ್ ಕಂಚಿ, ಸಂಚಾಲಕರಾಗಿ ತೌಸೀಫ್ ಮೊಯ್ದಿನ್ ಮತ್ತು ಸಮಿತಿ ಸಲಹೆಗಾರರಾಗಿ ಅಝೀಝ್ ಬಂಕಲ್ ಮತ್ತು ಸೈಯದ್ ಬಾವ ಮತ್ತು ಸಮಿತಿ ಸದಸ್ಯರಾಗಿ ಹರ್ಷದ್ ಅಬ್ದುಲ್ಲಾ, ಸಾಮಿತ್ ಅಬ್ದುಲ್ಲಾ, ಸಲಾವುದ್ದೀನ್, ಇಮ್ರಾನ್ ಭಟ್ರಕೆರೆ, ನಿಝಾಮ್ ಸುಂಕದಕಟ್ಟೆ, ರಾಝಿಕ್, ಸಲಾಂ, ಮುಹಮ್ಮದ್ ಅಝೀಝ್ ಮತ್ತು ಯಾಸಿರ್ ಪ್ಯಾರ ಇವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News