ಗಲ್ಫ್ ಮೆಡಿಕಲ್ ವಿವಿಗೆ ಫೋರ್ಬ್ಸ್ ನಿಂದ ‘ಬೆಸ್ಟ್ ಮೆಡಿಕಲ್ ಎಜುಕೇಶನ್ ಯುನಿವರ್ಸಿಟಿ’ ಗೌರವ

Update: 2019-04-25 17:29 GMT

ಅಜ್ಮಾನ್, ಎ. 25: ಮಧ್ಯಪ್ರಾಚ್ಯ ವಲಯದಲ್ಲಿರುವ ಪ್ರಮುಖ ವೈದ್ಯಕೀಯ ವಿಶ್ವವಿದ್ಯಾನಿಲಯವಾಗಿರುವ ಅಜ್ಮಾನ್‌ನಲ್ಲಿರುವ ಗಲ್ಫ್ ಮೆಡಿಕಲ್ ಕಾಲೇಜಿಗೆ ‘ಬೆಸ್ಟ್ ಮೆಡಿಕಲ್ ಎಜುಕೇಶನ್ ಯುನಿವರ್ಸಿಟಿ’ ಎಂಬ ಗೌರವ ಪ್ರಾಪ್ತವಾಗಿದೆ.

ತಾಜ್ ದುಬೈಯಲ್ಲಿ ಎ. 24ರಂದು ನಡೆದ ಪ್ರತಿಷ್ಠಿತ ‘ಫೋರ್ಬ್ಸ್ ಮಿಡ್ಲ್ ಈಸ್ಟ್ ಹೈಯರ್ ಎಜುಕೇಶನ್ ಅವಾರ್ಡ್ಸ್ 2019’ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಲಯದ ಅತ್ಯುತ್ತಮ ವಿವಿಗಳನ್ನು ಗೌರವಿಸಲು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಗಲ್ಫ್ ಮೆಡಿಕಲ್ ಕಾಲೇಜಿನ ಕುಲಪತಿ ಪ್ರೊ. ಹೊಸ್ಸಾಂ ಹಮ್ದಿ ಪ್ರಶಸ್ತಿ ಸ್ವೀಕರಿಸಿದರು.

ಗಲ್ಫ್ ಮೆಡಿಕಲ್ ವಿವಿಯನ್ನು ಭವಿಷ್ಯದ ಮೆಡಿಕಲ್ ವಿವಿ ಎಂದು ಕರೆಯುವುದೇಕೆ ಎಂಬುದಕ್ಕೆ ಈ ರೀತಿಯ ಪುರಸ್ಕಾರಗಳು ವಿವರಣೆ ನೀಡುತ್ತವೆ. ವೈದ್ಯಕೀಯ ಶಿಕ್ಷಣದ ಪೂರ್ಣ ವಿಸ್ತೃತ ಶ್ರೇಣಿಯಲ್ಲಿ ಜಿಎಂಯು ವಿಭಿನ್ನವಾಗಿದೆ. 6 ಕಾಲೇಜುಗಳು, 26 ಮಾನ್ಯತೆ ಪಡೆದ ಅಧ್ಯಯನ ವಿಷಯಗಳ ಸಹಿತ ಜಿಎಂಯು ಮಧ್ಯಪ್ರಾಚ್ಯ ವಲಯದ ವೈದ್ಯಕೀಯ ವಿವಿಗಳಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ಭವಿಷ್ಯದ ಪಠ್ಯಕ್ರಮ, ತರಬೇತಿ ಕ್ರಮ ವಿಧಾನ, ಪ್ರಮುಖ ಅಂತರ್ ರಾಷ್ಟ್ರೀಯ ವಿವಿಗಳೊಂದಿಗೆ ಸಹಯೋಗ, ವಿಶ್ವ ದರ್ಜೆಯ ಸೌಲಭ್ಯ ಹೊಂದಿರುವ ಜಿಎಂಯುಗೆ ಫೋರ್ಬ್ಸ್ ಪ್ರಶಸ್ತಿಯ ಗೌರವ ಸಂದಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News