ಕೆಸಿಎಫ್ ಅಲ್ ಕಸೀಮ್ ಝೋನ್ ನೂತನ ಪದಾಧಿಕಾರಿಗಳ ಆಯ್ಕೆ

Update: 2019-04-28 17:46 GMT

ದವಾದ್ಮಿ ,ಎ.28: ಕೆಸಿಎಫ್ ಅಲ್ ಕಸೀಮ್ ಝೋನ್ ಇದರ ಮಹಾಸಭೆಯು ಇತ್ತೀಚೆಗೆ ದವಾದ್ಮಿ ಅಡಿಟೋರಿಯಂನಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಅಬ್ದುಲ್ ಖಯ್ಯೂಮ್ ಜಾಲ್ಸೂರ್, ಸುಳ್ಯ ಇವರು ವಹಿಸಿದ್ದರು. ಕಾರ್ಯಕ್ರಮವನ್ನು ಅಬ್ದುಲ್ ಕರೀಂ ಇಮ್ದಾದಿ ಉದ್ಘಾಟಿಸಿದರು. 

ಸಭೆಯಲ್ಲಿ ಕಳೆದ ವಾರ್ಷಿಕ ಸಾಲಿನ ವರದಿಯನ್ನು ಝೋನ್ ಕಾರ್ಯದರ್ಶಿಯಾಗಿ ಸಾಲಿ ಬೆಳ್ಳಾರೆ ಮತ್ತು ಲೆಕ್ಕಪತ್ರವನ್ನು ಝೋನ್ ಕೋಶಾಧಿಕಾರಿ ಅಬ್ದುಲ್ ಜಬ್ಬಾರ್ ಹರೇಕಳ ವಾಚಿಸಿದರು.

ರಾಷ್ಟೀಯ ಸಮಿತಿಯ ಪ್ರತಿನಿಧಿಯಾಗಿ ಆಗಿ ಬಂದ ಸಿದ್ದೀಕ್ ಸಖಾಫಿ ಪೆರುವಾಯಿ ಉಪದೇಶ ನೀಡಿದರು. ರಾಷ್ಟ್ರೀಯ ಚುನಾವಣಾ ಅಧಿಕಾರಿಯಾಗಿ ಆಗಮಿಸಿದ ಇಸ್ಮಾಯಿಲ್ ಕಣ್ಣಂಗಾರ್ ಹಳೆಯ ಕಮಿಟಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ರಚಿಸಿದರು.

ನೂತನ ಸಮಿತಿ ಅಧ್ಯಕ್ಷರಾಗಿ ಅಬ್ದುಲ್ ಖಯ್ಯೂಮ್ ಜಾಲ್ಸೂರ್, ಸುಳ್ಯ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಕಣ್ಣಂಗಾರ್, ಕೋಶಾಧಿಕಾರಿಯಾಗಿ ಹಬೀಬ್ ರಹ್ಮಾನ್ ಅಡ್ಡೂರ್, ಸಂಘಟನಾ ಇಲಾಖೆ ಅಧ್ಯಕ್ಷರಾಗಿ ಅಬ್ದುಲ್ ಜಬ್ಬಾರ್ ಹರೇಕಳ, ಕಾರ್ಯದರ್ಶಿಯಾಗಿ ಶಾಹುಲ್ ಹಮೀದ್ ಮಣ್ಣಾಪು, ಪುತ್ತೂರು, ಶಿಕ್ಷಣ ಇಲಾಖೆ ಅಧ್ಯಕ್ಷರಾಗಿ ಹಸನ್ ಮದನಿ ಮಂಡೆಕೋಲು, ಸುಳ್ಯ, ಕಾರ್ಯದರ್ಶಿಯಾಗಿ ಹೈದರ್ ಇರ್ಫಾನಿ, ಸಾಂತ್ವನ ಇಲಾಖೆ ಅಧ್ಯಕ್ಷರಾಗಿ ಫೈಝಲ್ ಮಠ, ಉಪ್ಪಿನಂಗಡಿ, ಕಾರ್ಯದರ್ಶಿಯಾಗಿ ಅಬ್ದುಲ್ ರಜಾಕ್ ನೆಕ್ಕಿಲ್, ಪುತ್ತೂರು , ಪ್ರಕಾಶನ ಇಲಾಖೆ ಅಧ್ಯಕ್ಷರಾಗಿ ಇರ್ಷಾದ್ ಸಚ್ಚರಿಪೇಟೆ, ಕಾರ್ಯದರ್ಶಿಯಾಗಿ ಕಮಾಲ್ ಕೆ. ಸಿ.ರೋಡ್, ಆಡಳಿತ ಇಲಾಖೆ ಅಧ್ಯಕ್ಷರಾಗಿ ಮುಸ್ತಫ ಸುಳ್ಯ, ಕಾರ್ಯದರ್ಶಿಯಾಗಿ  ಇಮ್ತಿಯಾಝ್ ದೇರಳಕಟ್ಟೆ, ಇಹ್ಸಾನ್ ಇಲಾಖೆ ಅಧ್ಯಕ್ಷರಾಗಿ ಮುಸ್ತಾಫ ಹಾಸನ್, ಕಾರ್ಯದರ್ಶಿಯಾಗಿ ಮುಹ್ಯುದ್ದೀನ್ ಸಹದಿ, ಅಮ್ಮುಂಜೆ ನೇಮಕಗೊಂಡರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಯಾಕೂಬ್ ಸಖಾಫಿ, ಮಹಮ್ಮದ್ ಸಅದಿ, ಉಜಿರೆ, ಸಾಲಿ ಬೆಳ್ಳಾರೆ, ಹಿದಾಯತ್ ತೀರ್ಥಹಳ್ಳಿ, ಸುಲೈಮಾನ್ ಅತ್ರಾಡಿ, ಇಕ್ಬಾಲ್ ಪಾನೆಲ, ಯೂಸುಫ್ ಮದನಿ, ಅಬ್ಬಾಸ್ ಕೂರ್ನಡ್ಕ, ಅಬ್ದುಲ್ ಸಲಾಂ ಸಿದ್ದಾಪುರ,ರಶೀದ್ ಬೆಳ್ಳಾರೆ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News