ಕೆಸಿಎಫ್ ಒಮಾನ್, ಸೊಹಾರ್ ಝೋನ್ ಮಹಾಸಭೆ

Update: 2019-04-28 17:56 GMT

ಒಮಾನ್,ಎ.28: ಕೆಸಿಎಫ್ ಒಮಾನ್ ಸೊಹಾರ್ ಝೋನ್ ಇದರ ಮಹಾಸಭೆಯು ಇತ್ತೀಚೆಗೆ ಝೋನ್ ಅಧ್ಯಕ್ಷ ಆರಿಫ್ ಮದಕ ಇವರ ಅಧ್ಯಕ್ಷತೆಯಲ್ಲಿ ICF ಮದ್ರಸ ಸೊಹಾರ್ ನಲ್ಲಿ ಜರುಗಿತು.

ಸಭೆಯಲ್ಲಿ 2019-21ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಸಾದಿಕ್ ಕಾಟಿಪಳ್ಳ, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಹನೀಫ್ ಉಳ್ಳಾಲ, ಕೋಶಾಧಿಕಾರಿಯಾಗಿ ಆರಿಫ್ ಮದಕ ಆಯ್ಕೆಯಾದರು. ಸಂಘಟನಾ ವಿಭಾಗದ ಅಧ್ಯಕ್ಷರಾಗಿ ಅಶ್ರಫ್ ಕುತ್ತಾರ್, ಕನ್ವೀನರ್ ಮಝೀರ್ ಬಜ್ಪೆ, ಶಿಕ್ಷಣ ವಿಭಾಗದ ಅಧ್ಯಕ್ಷರಾಗಿ ಸಿರಾಜುದ್ದೀನ್ ಮುಈನಿ, ಕನ್ವೀನರ್ ಅಲಿ ಹಿಮಮಿ, ಸಾಂತ್ವನ ವಿಭಾಗದ ಅಧ್ಯಕ್ಷರಾಗಿ ಅಝೀಝ್ ಉಪ್ಪಳ, ಕನ್ವೀನರ್ ಆಗಿ ನಾಸಿರ್ ಪಡುಬಿದ್ರೆ, ಪ್ರಕಾಶನ ವಿಭಾಗದ ಅಧ್ಯಕ್ಷರಾಗಿ ಶಫೀಕ್ ಎಲಿಮಲೆ ಸುಳ್ಯ, ಕನ್ವೀನರ್ ಆಗಿ ನಝೀರ್ ಸಾರ್ಯ, ಆಡಳಿತ ವಿಭಾಗದ ಅಧ್ಯಕ್ಷರಾಗಿ ಮುನೀರ್ ಕುತ್ತಾರ್, ಕನ್ವೀನರ್ ರಝಾಕ್ ಬೆಳ್ಳಾರೆ, ಇಹ್ಸಾನ್ ವಿಭಾಗದ ಅಧ್ಯಕ್ಷರಾಗಿ ಇಕ್ಬಾಲ್ ಎರ್ಮಾಳ್, ಕನ್ವೀನರ್ ಅಝೀಝ್ ಬಜ್ಪೆ ಹಾಗೂ ಎಕ್ಸಿಕ್ಯೂಟಿವ್ ಸದಸ್ಯರಾಗಿ ಸಿದ್ದೀಕ್ ಮಾಂಬ್ಲಿ ಸುಳ್ಯ, ನಿಸಾರ್ ಜೆಪ್ಪು, ನಾಸಿರ್ ಕೊಪ್ಪ, ಹೈದರಾಲಿ ಬಂಟ್ವಾಳ, ಫಾರೂಕ್ ಕೃಷಾಪುರ, ರಫೀಕ್ ಕಕ್ಕಿಂಜೆ ಇವರುಗಳನ್ನು ಆಯ್ಕೆ ಮಾಡಲಾಯಿತು.

ಕೆಸಿಎಫ್ ಒಮಾನ್ ಗೌರವಾಧ್ಯಕ್ಷ ಉಮರ್ ಸಖಾಫಿ ಮಿತ್ತೂರು, ಎಜುಕೇಶನ್ ವಿಭಾಗದ ಅಧ್ಯಕ್ಷ ಅಯ್ಯೂಬ್ ಕೋಡಿ, ಪ್ರಕಾಶನ ವಿಭಾಗದ ಅಧ್ಯಕ್ಷ ಆರಿಫ್ ಕೋಡಿ, ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಮಾಂಬ್ಳಿ ಸುಳ್ಯ,ರಾಷ್ಟ್ರೀಯ ಸಮಿತಿಯ ಸದಸ್ಯ ಹಾರಿಸ್ ಕೊಡಗು, ಮಸ್ಕತ್ ಝೋನ್ ನಾಯಕರಾದ ಮಹಮ್ಮದ್ ಸಾಗರ, ರುವಿ ಸೆಕ್ಟರ್ ಅಧ್ಯಕ್ಷರಾದ ಮುಸ್ತಫ ಸಖಾಫಿ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಅಶ್ರಫ್ ಕುತ್ತಾರ್ ವರದಿ ವಾಚಿಸಿ, ಕೋಶಾಧಿಕಾರಿ ಇಕ್ಬಾಲ್ ಎರ್ಮಾಳ್ ಲೆಕ್ಕ ಪತ್ರ ಮಂಡಿಸಿದರು. ಸಿದ್ದೀಕ್ ಮಾಂಬ್ಳಿ ಸ್ವಾಗತಿಸಿ ಸಾದಿಕ್ ಕಾಟಿಪಳ್ಳ ನಿರೂಪಿಸಿ, ಹನೀಫ್ ಉಳ್ಳಾಲ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News