ಜುಬೈಲ್ : ಎಕ್ಸ್‌ಪರ್ಟೈಸ್ ನಿಂದ ಎರಡನೇ ಯಶಸ್ವೀ ಟೆಕ್ ಎಕ್ಸ್‌ಪೊ ಸಮಾವೇಶ

Update: 2019-05-11 16:52 GMT

ರಿಯಾದ್, ಮೇ 11: ಸೌದಿ ಅರೇಬಿಯಾದ ಕೈಗಾರಿಕಾ ಸೇವೆ ಒದಗಿಸುವ ಪ್ರತಿಷ್ಠಿತ ಸಂಸ್ಥೆ ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪೆನಿ ಆಯೋಜಿಸಿದ ಎರಡನೇ ತಾಂತ್ರಿಕ ಪ್ರದರ್ಶನ ‘ಟೆಕ್‌ ಎಕ್ಸ್‌ಪೊ’ ಕಾರ್ಯಕ್ರಮ ಜುಬೈಲ್‌ನಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.

ಈ ಬೃಹತ್ ಹಾಗು ಅತ್ಯಂತ ಯಶಸ್ವಿ ಎಕ್ಸ್ ಪೋ ಸಮಾವೇಶದಲ್ಲಿ ಪೂರ್ವಪ್ರಾಂತ್ಯದ ಗವರ್ನರ್ ಅಬ್ದುಲ್ಲಾ ಬಿನ್ ನಾಸರ್ ಅಲ್-ಅಕ್ಸರ್ ಮುಖ್ಯ ಅತಿಥಿಯಾಗಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಹಮ್ಮದ್ ಆಸಿಫ್ ಕರ್ನಿರೆ ಕೈಗಾರಿಕಾ ಸೇವಾ ಕ್ಷೇತ್ರವು ಒದಗಿಸುವ ಸೇವೆಗಳ ಬಗ್ಗೆ ವಿವರಿಸಿದರು ಹಾಗೂ ಗ್ರಾಹಕರ ಸಂತೃಪ್ತಿಯ ಗುರಿಯೊಂದಿಗೆ ಎಕ್ಸ್‌ಪರ್ಟೈಸ್ ಸಂಸ್ಥೆಯು ಉತ್ಕೃಷ್ಟ ಹಾಗೂ ಸುಸಂಗತ ಸೇವೆ ಒದಗಿಸಲು ಬದ್ಧವಾಗಿದೆ ಎಂದರು. ಸಂಸ್ಥೆಯ ಮುಂದಿನ ಯೋಜನೆಗಳ ಕುರಿತು ಅವರು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು. 

ಸಂಸ್ಥೆಯ ನಿರ್ದೇಶಕ ಶೇಖ್ ಕರ್ನಿರೆ ಮಾತನಾಡಿ ಪರಿಶ್ರಮ, ಅರ್ಪಣಾ ಮನೋಭಾವ ಹಾಗೂ ಪ್ರಾಮಾಣಿಕತೆ ಇವು ಎಕ್ಸ್‌ಪರ್ಟೈಸ್ ಸಂಸ್ಥೆಯ ಯಶಸ್ಸಿನ ಹಿಂದಿರುವ ಸೂತ್ರಗಳಾಗಿವೆ ಎಂದರು.

ತಾಂತ್ರಿಕ ಪ್ರದರ್ಶನದಲ್ಲಿ ಪೆಟ್ರೊಕೆಮಿಕಲ್, ತೈಲ ಮತ್ತು ಅನಿಲ, ರಸಗೊಬ್ಬರ ಮತ್ತು ವಿದ್ಯುತ್ ಉತ್ಪಾದನೆ ಮುಂತಾದ ಕ್ಷೇತ್ರದ ಉದ್ಯಮ ಸಂಸ್ಥೆಗಳ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. 

‘ಸಾಬಿಕ್, ಸದಾರ, ಸ್ಯಾಮ್ಸಂಗ್, ತಸ್ನೀ’ ಮುಂತಾದ ಖ್ಯಾತ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು . ಈ ಸಂದರ್ಭದಲ್ಲಿ ಕೈಗಾರಿಕೆಯಲ್ಲಿ ಭವಿಷ್ಯದ ದೃಷ್ಟಿಯಿಂದ ಬೇಕಾಗುವ ತಂತ್ರಜ್ಞಾನದ ಕುರಿತು ಸಂವಾದ ಕಾರ್ಯಕ್ರಮವೂ ನಡೆಯಿತು. ಎಕ್ಸ್‌ಪರ್ಟೈಸ್ ನಿಂದ ಗ್ರಾಹಕರಿಗೆ ಸಿಗುವ ಸೇವೆಗಳ ಕುರಿತು ಸಮಗ್ರ ವಿವರ ನೀಡುವ ಬೂತ್ ಗಳು ಇಲ್ಲಿ ಗಮನ ಸೆಳೆದವು. 

ತಂತ್ರಜ್ಞಾನ ಪ್ರದರ್ಶನದಲ್ಲಿ ಕಮಗ್ (ವಿಶೇಷ ಉಪಕರಣ ತಯಾರಕರು), ಖ್ವಾಂಟಾ (ಇಂಜಿನಿಯರಿಂಗ್), ಟೆಕ್ನೊ- ಕ್ಲೀನ್  (ನಿರ್ಮಲೀಕರಣ), ಟೆಕ್ನೋವೇಷನ್ (ಯಾಂತ್ರೀಕೃತ ಸಂಸ್ಕರಣೆ) ಹಾಗೂ ಗೋದ್ರೆಜ್ (ಸ್ಥಿರ ಸಾಧನ ತಯಾರಕರು) ಈ ಐದು ಕಂಪೆನಿಗಳು ಪಾಲ್ಗೊಂಡಿದ್ದವು.

ಸಂಸ್ಥೆಯ ನಿರ್ದೇಶಕರಾದ ರಹೀಂ, ಅಶ್ಫಕ್, ಅಶ್ರಫ್ ಕರ್ನಿರೆ, ಅನ್ಸಿಫ್ ಕರ್ನಿರೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಖುದ್ಸಿಯಾ ಕಾರ್ಯಕ್ರಮವನ್ನುನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News