ಕುವೈತ್ ಕೋಳಿಗಳ ಮೇಲಿನ ನಿಷೇಧ ತೆರವುಗೊಳಿಸಿದ ಯುಎಇ

Update: 2019-05-12 17:58 GMT

ದುಬೈ,ಮೇ.12: ಕಳೆದ ಫೆಬ್ರವರಿಯಲ್ಲಿ ಹಕ್ಕಿಜ್ವರದ ಭೀತಿಯ ಹಿನ್ನೆಲೆಯಲ್ಲಿ ಕುವೈತ್ ನಿಂದ ಆಮದಾಗುವ ಕೋಳಿ ಹಾಗೂ ಇತರ ಹಕ್ಕಿಗಳ ಮೇಲೆ ಹೇರಿದ್ದ ನಿಷೇಧವನ್ನು ಸದ್ಯ ಯುಎಇ ತೆರವುಗೊಳಿಸಿದೆ. ಕುವೈತ್ ನಿಂದ ಆಹಾರ ರೂಪದಲ್ಲಿ ಸೇವಿಸುವ ಹಕ್ಕಿಗಳು, ಆಲಂಕಾರಿಕವಾಗಿ ಬಳಸುವ ಹಕ್ಕಿಗಳು, ಕೋಳಿಗಳು, ಮೊಟ್ಟೆಗಳು ಹಾಗೂ ಅವುಗಳಿಗೆ ಸಂಬಂಧಪಟ್ಟ ಇತರ ವಸ್ತುಗಳನ್ನು ಆಮದು ಮಾಡಿಕೊಳ್ಳುವುದು ಸುರಕ್ಷಿತವಾಗಿದೆ ಎಂದು ಯುಎಇಯ ಹವಾಮಾನ ಬದಲಾವಣೆ ಮತ್ತು ಪರಿಸರ ಸಚಿವಾಲಯ ಹೊರಡಿಸಿದ ಪ್ರಕಟನೆಯಲ್ಲಿ ತಿಳಿಸಿದೆ. ದೇಶೀಯವಾಗಿ ತಯಾರಿಸಲ್ಪಡುವ ಮತ್ತು ಆಮದು ಮಾಡಲ್ಪಟ್ಟ ಆಹಾರಗಳು ಮತ್ತು ಆಹಾರ ಉತ್ಪನ್ನಗಳು ಸುರಕ್ಷಿತವಾಗಿದ್ದು ಸಾರ್ವಜನಿಕ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುತ್ತಿಲ್ಲ ಎನ್ನುವುದನ್ನು ಖಾತರಿಪಡಿಸಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಲೇ ಇರುತ್ತೇವೆ ಎಂದು ಸಚಿವಾಲಯ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News