ಯುಎಇಯಲ್ಲಿ ಭಿಕ್ಷೆ ಬೇಡಿದರೆ 5,000 ದಿರ್ಹಮ್ ದಂಡ, ಜೈಲು

Update: 2019-05-12 18:05 GMT

ದುಬೈ,ಮೇ.12: ಭಿಕ್ಷಾಟನೆಯ ವಿರುದ್ಧ ಕಠಿಣ ನಿಲುವು ತಳೆದಿರುವ ಯುಎಇ ಆಡಳಿತ, ಜನರ ಉತ್ತಮ ಗುಣವನ್ನು, ಮುಖ್ಯವಾಗಿ ಪವಿತ್ರ ರಮಝಾನ್ ಮಾಸದಲ್ಲಿ, ತಮ್ಮ ಲಾಭಕ್ಕಾಗಿ, ಬಳಸುವ ಭಿಕ್ಷುಕರ ಬಗ್ಗೆ ಜನರು ಎಚ್ಚರಿಕೆಯಿಂದಿರುವಂತೆ ಸೂಚಿಸಿದೆ. 2018ರ ಫೆಡರಲ್ ಕಾನೂನಿನ ಸಂಖ್ಯೆ 9ರ ಪ್ರಕಾರ, ಭಿಕ್ಷಾಟನೆ ಮಾಡುವವರಿಗೆ 5,000 ದಿರ್ಹಮ್ ದಂಡ ಮತ್ತು ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಇನ್ನು ಮಾಫಿಯ ಗುಂಪಿನಂತೆ ಭಿಕ್ಷುಕರ ಕ್ರಿಮಿನಲ್ ಗುಂಪನ್ನು ಮುನ್ನಡೆಸುತ್ತಿರುವವರ ವಿರುದ್ಧ 1,00,000 ದಿರ್ಹಮ್ ದಂಡ ಮತ್ತು ಕನಿಷ್ಟ ಆರು ತಿಂಗಳು ಶಿಕ್ಷೆ ವಿಧಿಸಬಹುದಾಗಿದೆ. ನೀವು ನಿಮ್ಮ ದಾನವನ್ನು ಎಲ್ಲಿಗೆ ನೀಡುತ್ತಿದ್ದೀರಿ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಿ. ಯಾಕೆಂದರೆ ಅದು ಬಹುತೇಕ ಅನರ್ಹ ಕೈಗಳನ್ನೇ ಸೇರುತ್ತದೆ ಎಂದು ದುಬೈಯ ಪಬ್ಲಿಕ್ ಪ್ರಾಸಿಕ್ಯೂಶನ್ ಟ್ವೀಟ್‌ನಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News