ಮೇ 17 : ಕೆ.ಸಿ.ಎಫ್ ರಿಯಾದ್ ವತಿಯಿಂದ ಇಫ್ತಾರ್ ಮುಲಾಖಾತ್

Update: 2019-05-13 17:30 GMT

ರಿಯಾದ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನಲ್ ವತಿಯಿಂದ ನಡೆಯಲಿರುವ "ಬೃಹತ್ ಇಫ್ತಾರ್ ಮುಲಾಖಾತ್ 2019" ರಿಯಾದಿನ ಪ್ರತಿಷ್ಠಿತ ನೂರ್ ಮಾಸ್ ಇಸ್ತಿರಾಹ್ ನಲ್ಲಿ ಮೇ 17 ರಂದು  ನಡೆಯಲಿದೆ.

ಸುಮಾರು ಒಂದು ಸಾವಿರದ ಐನೂರು ಮಂದಿ ಪಾಲ್ಗೊಳ್ಳಲು ಅನುಗುಣವಾಗುವಂತೆ ಏರ್ಪಡಿಸಲಾಗುವ ಈ ಕಾರ್ಯಕ್ರಮ ಮಹಿಳೆಯರು ಮಕ್ಕಳು ಸೇರಿದಂತೆ ಅನಿವಾಸಿ ಕನ್ನಡಿಗರ ಸಂಗಮವಾಗಲಿದೆಯೆಂದು ಆಯೋಜಕರು ಪತ್ರಿಕಾಗೋಷ್ಠಿ ಮೂಲಕ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಮಜ್ಲಿಸ್, ರಮಝಾನ್ ಸಂದೇಶ ಭಾಷಣ, ಕೆಸಿಎಫ್ ಇಹ್ಸಾನ್ ಚಟುವಟಿಕೆಗಳ ಪ್ರದರ್ಶನ, " ಗಲ್ಫ್ ಇಶಾರಾ" ಕೌಂಟರ್ ಇತ್ಯಾದಿಗಳನ್ನು ಹಮ್ಮಿಕ್ಕೊಳ್ಳಲಾಗಿದೆ.

ಪತ್ರಕಾಗೋಷ್ಠಿಯಲ್ಲಿ ಇಫ್ತಾರ್ ಮುಲಾಖಾತ್ ನ ಸ್ವಾಗತ ಸಮಿತಿಯ ಅಧ್ಯಕ್ಷ ಉಮರ್ ಅಳಕೆಮಜಲು, ಕಾರ್ಯದರ್ಶಿ ಅನ್ಸಾರ್ ಉಳ್ಳಾಲ, ಫೈನಾನ್ಶಿಯಲ್ ಚೆಯರ್ಮೆನ್ ಹಂಝ ಮೈಂದಾಳ, ಕಾರ್ಯದರ್ಶಿ ಹನೀಫ್ ಕಣ್ಣೂರು, ಕೆ.ಸಿ.ಎಫ್ ಅಂತಾರಾಷ್ಟ್ರೀಯ ಸಮಿತಿ ಸದಸ್ಯ ನಝೀರ್ ಕಾಶಿಪಟ್ಣ, ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಶಿಕ್ಷಣ ಇಲಾಖೆ ಅಧ್ಯಕ್ಷ ಸಿದ್ದೀಕ್ ಸಖಾಫಿ ಪೆರುವಾಯಿ, ಕೆ.ಸಿ.ಎಫ್ ರಿಯಾದ್ ಝೋನಲ್ ಅಧ್ಯಕ್ಷ ಫಾರೂಕ್ ಸಅದಿ, ಪ್ರ.ಕಾರ್ಯದರ್ಶಿ ನಿಝಾಂ ಸಾಗರ, ಇಲ್ಯಾಸ್ ಲತೀಫಿ, ಮುಸ್ತಫಾ ಸ ಅದಿ ಸೂರಿಕುಮೇರು, ಶಮೀರ್ ಜೆಪ್ಪು, ಝೈನ್ ಸಖಾಫಿ ಭಟ್ಕಳ, ಝೈನುಲ್ ಆಬಿದೀನ್ ಮುಈನಿ ಮುಂತಾದದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News