ದುಬೈ: ಪೃಷ್ಠ ಬದಲಾವಣೆ ಶಸ್ತ್ರಚಿಕಿತ್ಸೆ ಬಳಿಕ ಭಾರತೀಯ ಮಹಿಳೆ ಸಾವು

Update: 2019-05-13 18:00 GMT

ದುಬೈ, ಮೇ 13: ದುಬೈಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಪೃಷ್ಠ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಭಾರತೀಯ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಇಬ್ಬರು ಮಕ್ಕಳ ತಾಯಿಯಾಗಿರುವ 42 ವರ್ಷದ ಬೆಟ್ಟಿ ರೀಟಾ ಫೆರ್ನಾಂಡಿಸ್‌ರನ್ನು ಎರಡು ಗಂಟೆಗಳ ಎಡ ಪೃಷ್ಠ ಬದಲಾವಣೆ ಶಸ್ತ್ರಚಿಕಿತ್ಸೆಗಾಗಿ ಅಲ್ ಝಹ್ರಾ ಆಸ್ಪತ್ರೆಗೆ ಮೇ 9ರಂದು ದಾಖಲಿಸಲಾಗಿತ್ತು ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.

‘‘ಅಲ್ ಝಹ್ರಾ ಹಾಸ್ಪಿಟಲ್ ದುಬೈಯಲ್ಲಿ ನಡೆದ ಶಸ್ತ್ರಚಿಕಿತ್ಸೆಯ ಬಳಿಕ, ಮೇ 9ರಂದು ನಡೆದ ಬೆಟ್ಟಿ ರೀಟಾ ಫೆರ್ನಾಂಡಿಸ್ ಸಾವಿಗೆ ಸಂಬಂಧಿಸಿ, ಅವರ ಕುಟುಂಬಕ್ಕೆ ಎಲ್ಲ ಬೆಳವಣಿಗೆಗಳ ಬಗ್ಗೆ ಪಾರದರ್ಶಕ ಮಾಹಿತಿಗಳನ್ನು ನೀಡಲಾಗಿದೆ’’ ಎಂದು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಹಯಮ್ ಅಬ್ದುಲ್‌ಘನಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಫೆರ್ನಾಂಡಿಸ್ ಹುಟ್ಟಿನಿಂದಲೇ ಪೃಷ್ಠ ಸಮಸ್ಯೆಯನ್ನು ಹೊಂದಿದ್ದರು. ಅವರು ಹುಟ್ಟುವಾಗ ಅವರ ಪೃಷ್ಠ ಕೊಂಚ ಸ್ಥಾನಪಲ್ಲಟಗೊಂಡಿತ್ತು ಎಂದು ವರದಿ ಹೇಳಿದೆ.

ಮುಂಬೈ ನಿವಾಸಿಯಾಗಿದ್ದ ಅವರು ಬಾಣಸಿಗ ವೃತ್ತಿಯಲ್ಲಿ ತೊಡಗಿದ್ದರು ಹಾಗೂ ‘ಬೆಟ್ಟಿಸ್ ಕೇಕ್ ಟೇಲ್ಸ್’ ಎಂಬ ಜಿನಸಿ ಅಂಗಡಿಯೊಂದನ್ನು ನಡೆಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News