×
Ad

ಅಮೆರಿಕದೊಂದಿಗೆ ಯುದ್ಧ ಏರ್ಪಡುವ ಸಾಧ್ಯತೆ ಇಲ್ಲ: ಇರಾನ್ ವಿದೇಶ ಸಚಿವ

Update: 2019-05-19 22:31 IST

ದುಬೈ, ಮೇ 19: ಮಧ್ಯಪ್ರಾಚ್ಯದಲ್ಲಿ ಅಮೆರಿಕದೊಂದಿಗಿನ ಉದ್ವಿಗ್ನತೆ ಹೆಚ್ಚುತ್ತಿದೆಯಾದರೂ, ಯುದ್ಧ ಏರ್ಪಡುವ ಸಾಧ್ಯತೆ ಇಲ್ಲ ಎಂದು ಇರಾನ್ ವಿದೇಶ ಸಚಿವ ಮುಹಮ್ಮದ್ ಜಾವೇದ್ ಶರೀಫ್ ಹೇಳಿದ್ದಾರೆ. ಇರಾನ್ ಸಂಘರ್ಷವನ್ನು ಬಯಸುತ್ತಿಲ್ಲ ಹಾಗೂ ತಾನು ಇರಾನನ್ನು ಎದುರಿಸಬಲ್ಲೆ ಎಂಬ ಭ್ರಮೆಯನ್ನು ಯಾವುದೇ ದೇಶ ಹೊಂದಿಲ್ಲ ಎಂದು ಅವರು ನುಡಿದರು.

ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ದಿನೇ ದಿನೇ ಹೆಚ್ಚುತ್ತಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧ ಏರ್ಪಡುವ ಸಾಧ್ಯತೆ ಸೃಷ್ಟಿಯಾಗಿರುವುದನ್ನು ಸ್ಮರಿಸಬಹುದಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧದ ಆರ್ಥಿಕ ದಿಗ್ಬಂಧನಗಳನ್ನು ಬಿಗಿಗೊಳಿಸಿರುವುದನ್ನು ಸ್ಮರಿಸಬಹುದಾಗಿದೆ. ವಲಯದಲ್ಲಿ ಅಮೆರಿಕದ ಸೇನಾ ಉಪಸ್ಥಿತಿಯನ್ನು ಅದು ಈಗಾಗಲೇ ಹೆಚ್ಚಿಸಿದೆ. ಅಮೆರಿಕದ ಸೈನಿಕರು ಮತ್ತು ಅದರ ಹಿತಾಸಕ್ತಿಗಳಿಗೆ ಇರಾನ್ ಬೆದರಿಕೆಯೊಡ್ಡಿದೆ ಎಂಬುದಾಗಿ ಅಮೆರಿಕ ಆರೋಪಿಸಿದೆ.

ಅದೇ ವೇಳೆ, ಅಮೆರಿಕದ ಕ್ರಮಗಳು ‘ಮಾನಸಿಕ ಯುದ್ಧ’ ಹಾಗೂ ‘ರಾಜಕೀಯ ಆಟ’ ಎಂಬುದಾಗಿ ಇರಾನ್ ಬಣ್ಣಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News