ಇರಾನ್ ಜೊತೆ ಯುದ್ಧ: ಸೌದಿ ಹೇಳಿದ್ದೇನು ?

Update: 2019-05-19 17:47 GMT

ರಿಯಾದ್, ಮೇ 19: ಕೊಲ್ಲಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ತುರ್ತು ಪ್ರಾದೇಶಿಕ ಮಾತುಕತೆಗಳು ನಡೆಯಬೇಕೆಂದು ಸೌದಿ ಅರೇಬಿಯ ರವಿವಾರ ಕರೆ ನೀಡಿದೆ. ತಾನು ಇರಾನ್ ಜೊತೆ ಯುದ್ಧ ಬಯಸುವುದಿಲ್ಲ, ಆದರೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಿದ್ಧನಿರುವುದಾಗಿ ಅದು ಹೇಳಿದೆ.

ಇತ್ತೀಚಿನ ‘ಆಕ್ರಮಣಶೀಲತೆ ಮತ್ತು ಅವುಗಳ ಪರಿಣಾಮಗಳ’ ಬಗ್ಗೆ ಚರ್ಚಿಸಲು ಮಕ್ಕಾದಲ್ಲಿ ಮೇ 30ರಂದು ಕರೆಯಲಾದ ತುರ್ತು ಸಭೆಗಳಿಗೆ ಸೌದಿ ಅರೇಬಿಯದ ದೊರೆ ಸಲ್ಮಾನ್ ಕೊಲ್ಲಿ ದೇಶಗಳ ನಾಯಕರು ಮತ್ತು ಅರಬ್ ಲೀಗ್ ಸದಸ್ಯ ದೇಶಗಳನ್ನು ಆಹ್ವಾನಿಸಿದ್ದಾರೆ ಎಂದು ಸೌದಿ ಅರೇಬಿಯದ ಅಧಿಕೃತ ಸುದ್ದಿ ಸಂಸ್ಥೆ ಎಸ್‌ಪಿಎ ಶನಿವಾರ ವರದಿ ಮಾಡಿದೆ.

ಸೂಕ್ಷ್ಮ ಕೊಲ್ಲಿ ಪ್ರದೇಶದಲ್ಲಿ ಹಲವಾರು ತೈಲ ಟ್ಯಾಂಕರ್‌ಗಳ ಮೇಲೆ ನಡೆದ ದಾಳಿ ಮತ್ತು ಕಚ್ಚಾತೈಲ ಪೈಪ್‌ಲೈನ್‌ಗಳ ಮೇಲೆ ಯೆಮನ್‌ನ ಹೌದಿ ಬಂಡುಕೋರರು ನಡೆಸಿದ ಡ್ರೋನ್ ದಾಳಿಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News