×
Ad

ಅಬುಧಾಬಿ: ಬಿಡಬ್ಲುಎಫ್‌ ವತಿಯಿಂದ ಇಫ್ತಾರ್ ಕೂಟ

Update: 2019-05-20 22:57 IST

ಅಬುಧಾಬಿ, ಮೇ 20: ಬ್ಯಾರೀಸ್ ವೆಲ್ಫೇರ್ ಫೋರಂ (ಬಿಡಬ್ಲುಎಫ್) ವತಿಯಿಂದ ‘ಇಫ್ತಾರ್’ ಸ್ನೇಹ ಮಿಲನ ಕಾರ್ಯಕ್ರಮವು ಇಲ್ಲಿನ ಇಂಡಿಯಾ ಸೋಶಿಯಲ್ ಆ್ಯಂಡ್ ಕಲ್ಚರಲ್ ಸೆಂಟರ್‌ನಲ್ಲಿ ಇತ್ತೀಚೆಗೆ ನಡೆಯಿತು.

ಅಬುಧಾಬಿ, ದುಬೈ, ಶಾರ್ಜಾ ಹಾಗೂ ಪುಜೈರೊದಲ್ಲಿರುವ ಸುಮಾರು 600ರಷ್ಟು ಅನಿವಾಸಿ ಭಾರತೀಯರು ಈ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು.

ನ್ಯೂ ಮುಸ್ಲಿಮ್ ಸೆಂಟರ್‌ನ ಅಹ್ಮದ್ ವಹಾಬ್, ಆಸಿಫ್, ಅಲ್ತಾಫ್ ಅಹ್ಮದ್, ಯೂನುಸ್, ಸಲೀಂ, ನಈಮ್, ಅಬುಧಾಬಿಯ ಸಾಹೆಬಾನ್‌ನ ಖತೀಬ್ ಫೈಝನ್, ಫಕ್ರುದ್ದೀನ್ ಬಟ್, ಅಲಾವುದ್ದೀನ್, ಅಬ್ದುಲ್ ಖಾದರ್, ಹನೀಫ್ ಅರಿಮೂಲೆ, ಅಹ್ಮದ್ ಕಬೀರ್ ಮೊದಲಾದ ಗಣ್ಯರು ಭಾಗವಹಿಸಿದ್ದರು.

ಬಿಡಬ್ಲುಎಫ್ ಉಪಾಧ್ಯಕ್ಷ ಅಬ್ದುರ್ರವೂಫ್ ಕಾರ್ಯಕ್ರಮ ನಿರೂಪಿಸಿದರು. ಮಾಸ್ಟರ್ ಆಝಿಂ ಅಬ್ದುಲ್ ಹಮೀದ್ ಕಿರಾಅತ್ ಪಠಿಸಿದರು. ಸಹೀರ್ ಹುದವಿ ಚಿಕ್ಕಮಗಳೂರು ಧಾರ್ಮಿಕ ಪ್ರವಚನ ನೀಡಿ ದುಆಗೈದರು. ಜಲೀಲ್ ಗುರುಪುರ ಅವರು ಬಿಡಬ್ಲುಎಫ್‌ನ ಸಾಧನೆ ಮತ್ತು ಮುಂದಿನ ಗುರಿಯ ಬಗ್ಗೆ ವಿವರಿಸಿದರು.

ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಬಿಡಬ್ಲುಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ಆಹ್ವಾನವನ್ನು ಸ್ವೀಕರಿಸಿ ಇಫ್ತಾರ್‌ನಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸೂಚಿಸಿದರು. ಈ ವೇಳೆ ಬಿಡಬ್ಲುಎಫ್ ಮಂಗಳೂರಿನಲ್ಲಿ ಯಶಸ್ವಿಯಾಗಿ ನಡೆಸಿದ ಸಾಮಾಜಿಕ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ಇಂತಹ ಇನ್ನೂ ಹಲವು ಕಾರ್ಯಕ್ರಮಗಳನ್ನು ನಡೆಸಲು ವಿಶಾಲ ಹೃದಯದಿಂದ ನೆರವಾಗುವಂತೆ ಸದಸ್ಯರಿಗೆ ಮನವಿ ಮಾಡಿದರು. ಇದೇ ವೇಳೆ, ಅನೇಕ ಸೌಲಭ್ಯ ವಂಚಿತ ಜನರು ಸಮಾಜದಲ್ಲಿ ಘನತೆಯಿಂದ ಬದುಕಲು ನೆರವಾದ ಹಲವು ಕಾರ್ಯಕ್ರಮ ಗಳನ್ನು ನಡೆಸಲು ಧನಸಹಾಯ ನೀಡಿದ ಗಣ್ಯರಿಗೆ ವಂದಿಸಿದರು.

ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆ ಮಾತನಾಡಿ, ಮಂಗಳೂರಿನಲ್ಲಿ ಸಂಸ್ಥೆ ಆಯೋಜಿಸಿದ್ದ 105 ಬಡ ಹೆಣ್ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ಇತರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜೊತೆಗೆ ಸಂಸ್ಥೆಯ ಭವಿಷ್ಯದ ಕಾರ್ಯಕ್ರಮಗಳಿಗೆ ನೆರವಾಗುವಂತೆ ಸದಸ್ಯರಿಗೆ ಮನವಿ ಮಾಡಿದರು.

ಬಿಡಬ್ಲುಎಫ್ ವತಿಯಿಂದ ವ್ಹೀಲ್‌ಚೇರ್ ಹಂಚಿಕೆ, ಶೌಚಾಲಯ ಎಂಬ ಯೋಜನೆಯಡಿಯಲ್ಲಿ ಅವಳಿ ಜಿಲ್ಲೆಗಳಲ್ಲಿ 200 ಶೌಚಾಲಯಗಳ ನಿರ್ಮಾಣ ಇತ್ಯಾದಿ ಕಾರ್ಯಕ್ರಮಗಳ ಬಗ್ಗೆಯೂ ಅವರು ತಿಳಿಸಿದರು. ಇದರೊಂದಿಗೆ ಅವಳಿ ಜಿಲ್ಲೆಗಳಲ್ಲಿ ಇನ್ನೂ ನೂರು ಶೌಚಾಲಯಗಳನ್ನು ನಿರ್ಮಿಸುವ ಯೋಜನೆ ಹೊಂದಿದ್ದು ಸದಸ್ಯರು ತೆರೆದ ಮನಸ್ಸಿನಿಂದ ದೇಣಿಗೆ ನೀಡಬೇಕು ಎಂದು ಅವರು ಮನವಿ ಮಾಡಿದರು.

ಬಿಡಬ್ಲುಎಫ್ ಉಪಾಧ್ಯಕ್ಷ ಹಂಝ ಅಬ್ದುಲ್ ಖಾದರ್ ವಂದಿಸಿದರು.

ಸಮಾರಂಭದ ಸಂಯೋಜಕರಾಗಿದ್ದ ಬಿಡಬ್ಲುಎಫ್ ಖಜಾಂಚಿ ಮಹಮ್ಮದ್ ಸಿದ್ದೀಕ್ ಕಾಪು, ಬಶೀರ್ ಬಜ್ಪೆ, ಇಮ್ರಾನ್ ಅಹ್ಮದ್ ಮತ್ತು ಮುಹಮ್ಮದ್ ಕಲ್ಲಾಪು ಅವರಿಗೆ ಅಬ್ದುಲ್ ಮಜೀದ್ ಎ.ಜಿ., ಅಬ್ದುರ್ರವೂಫ್, ಹಂಝ ಖಾದರ್, ಹಮೀದ್ ಗುರುಪುರ, ನವಾಝ್ ಉಚ್ಚಿಲ್, ಹನೀಫ್ ಉಳ್ಳಾಲ, ಮುಜೀಬ್ ಉಚ್ಚಿಲ್, ಮಜೀದ್ ಆತೂರು, ಮೊಹಿನುದ್ದೀನ್ ಹಂಡೇಲು, ಇರ್ಫಾನ್ ಅಹ್ಮದ್ ಮತ್ತು ಬಶೀರ್ ಉಚ್ಚಿಲ್, ಸಿದ್ದೀಕ್ ಉಚ್ಚಿಲ್, ರಶೀಜ್ ಬಿಜೈ ಮತ್ತು ರಶೀದ್ ವಿ.ಕೆ. ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News