ದುಬೈ :ಕನ್ನಡಿಗರ ಸರ್ವ ಧರ್ಮ ಇಫ್ತಾರ್ ಕೂಟ, ಸರ್ವ ಧರ್ಮ ಸಮ್ಮೇಳನ

Update: 2019-05-26 03:25 GMT

ದುಬೈ: ಯುಎಇ  ಕನ್ನಡಿಗರು, ದುಬೈ ವತಿಯಿಂದ 'ಸರ್ವ ಧರ್ಮ ಇಫ್ತಾರ್ ಕೂಟ' ಹಾಗೂ ಸರ್ವ ಧರ್ಮ ಸಮ್ಮೇಳನವನ್ನು ರಮದಾ ಕಾಂಟಿನೆಂಟಲ್ ಅಬ್ಜಾದ್ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ಸಂಯುಕ್ತ ಅರಬ್ ಸಂಸ್ಥಾನ ದೇಶದ ಆಡಳಿತಾಧಿಕಾರಿಗಳು ಒಂದೊಂದು ವರ್ಷಕ್ಕೆ ಒಂದೊಂದು ಹೆಸರು ನೀಡಿ ಆ ವರ್ಷದ ಇಡೀ ದಿನಗಳನ್ನು ವಿಭಿನ್ನವಾಗಿ ಆಚರಿಸುವ ಒಂದು ವಿಶಿಷ್ಟ ಪದ್ದತಿ ಇದ್ದು, 2019ಸಹಿಷ್ಣುತಾ ವರ್ಷ ಎಂದು ಘೋಷಿಸಿ ಜಗತ್ತಿನ ಹಲವು ಪ್ರಮುಖ ಧರ್ಮದ ಧರ್ಮ ಗುರುಗಳನ್ನು ಕರೆಸಿ ಆತಿಥ್ಯ ನೀಡಲಾಗುತ್ತದೆ. ಇದಕ್ಕಿಂತ ಮುಂಚಿನ ವರ್ಷವನ್ನು ಈ ರಾಷ್ಟ್ರದ ರಾಷ್ಟ್ರಪಿತಾ ಶೇಖ್ ಝಾಯೆದ್ ಅವರ ಹೆಸರಲ್ಲಿ ಆಚರಿಸಿದರೆ 2017ನೇ ವರ್ಷವನ್ನು ದಾನ ನೀಡುವ ವರ್ಷ ಎಂದು ಘೋಷಿಸಿ ವಿಶ್ವದ ಹಲವು ಬಡ ರಾಷ್ಟ್ರದ ಜನರಿಗೆ ಸಹಾಯ ತಲುಪಿಸಿ ಜಗ್ಗತ್ತಿಗೆ ಮಾದರಿ ಆಗಿದ್ದನ್ನು ಇಲ್ಲಿ  ಸ್ಮರಿಸಬಹುದು.

ಯುಎಇ ಕನ್ನಡಿಗರು ದುಬೈ ತಂಡದ ಪ್ರಮುಖ ಸದಸ್ಯರುಗಳಾದ ರಫೀಕಲಿ ಕೊಡಗು, ಸುದೀಪ್ ದಾವಣಗೆರೆ, ಸೆಂತಿಲ್ ಬೆಂಗಳೂರು, ಮಧು ಗೌಡರ್, ಮಮತಾ ರಾಘವೇಂದ್ರ, ಮಮತಾ ಶಾರ್ಜಾ, ಪಲ್ಲವಿ ಬಸವರಾಜ್,ಶಶಿಧರ್, ವೆಂಕಟೇಶ್, ಡಾ.ಸವಿತಾ ಮೋಹನ್, ಅನಿತಾ ರಾಮ್, ವಿಷ್ಣುಮೂರ್ತಿ ಮೈಸೂರು, ಹಾದಿಯ ಮಂಡ್ಯ, ಸತೀಶ್ ಮಸೂರ್ ರಮಝಾನ್  ಶುಭ ಕೋರಿದರು.

ಮೌಲಾನಾ ಝೈನಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಮಿತ್ ಸಮೀರ್ ಕಿರಾಅತ್ ಪಠಿಸಿದರು. ನಂತರ ಮಮತಾ ರಾಘವೇಂದ್ರ ಅವರು ಯುಎಇ ಕನ್ನಡಿಗರ ಬಗ್ಗೆ ಪರಿಚಯಿಸಿದರು. ಮೌಲಾನಾ ಡಾ. ಅಬ್ದುಲ್ ರಶೀದ್ ಝೈನಿ ಸಖಾಫಿ, ಮೌಲಾನಾ ನೌಶಾದ್ ಫೈಝಿ ಶಾರ್ಜಾ ಹಾಗು ಮುಖ್ಯ ಅತಿಥಿಗಳಾದ ಎಂಸ್ಕ್ವೇರ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಮಾಲಕರಾದ ಮೊಹಮ್ಮದ್ ಮುಸ್ತಫಾ ಮತ್ತು ಜೆ ಎಸ್ ಎಸ್ ಶಾಲೆ ದುಬೈ ಇದರ ಸಿಇಒ ಡಾ. ಶಿವಕುಮಾರ್ , ಪೂಜ್ಯ ಫ್ರಾನ್ಸಿಸ್ ಡೆನಿಸ್ ಸಲ್ದಾನ , ರಾಜೇಶ್ ಗುರೂಜಿ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದು, ಕಾರ್ಯಕ್ರಮದಲ್ಲಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News