ಟ್ರಂಪ್ ವಿರೋಧಿ ಹೇಳಿಕೆಗಾಗಿ ಅಮೆರಿಕನ್ ಜಡ್ಜ್ ಅಮಾನತು

Update: 2019-05-25 18:17 GMT

ಲಾಸ್‌ಏಂಜಲೀಸ್, ಮೇ 25: ಡೊನಾಲ್ಡ್ ಟ್ರಂಪ್ ಕುರಿತ ಅಪಮಾನಕಾರಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದ ಅಮೆರಿಕದ ನ್ಯಾಯಾಧೀಶರೊಬ್ಬರನ್ನು ಆರು ತಿಂಗಳ ಅವಧಿಗೆ ವೇತನರಹಿತವಾಗಿ ಅಮಾನತುಗೊಳಿಸಲಾಗಿದೆ.

ಉಟಾಹ್ ರಾಜ್ಯದ ನ್ಯಾಯಾಧೀಶ ಮೈಕೆಲ್ ಕ್ವಾನ್ ಅಮಾನತಿಗೊಳಗಾದವರಾಗಿದ್ದಾರೆ. ಮೈಕೆಲ್ ಕ್ವಾನ್ ಅವರ ನಡವಳಿಕೆಯು ನ್ಯಾಯಾಂಗ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಹಾಗೂ ನ್ಯಾಯಾಂಗದ ವರ್ಚಸ್ಸಿಗೆ ಕುಂದುಂಟು ಮಾಡಿದೆಯೆಂದು ಅವರು ಉಟಾಹ್ ಉಚ್ಚನ್ಯಾಯಾಲಯವು ಹೇಳಿದೆ.

ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ 2017ರ ಜನವರಿ 20ರಂದು ನ್ಯಾಯಾಧೀಶ ಮೈಕೆಲ್ ಕ್ವಾನ್ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಲೇಖನವೊಂದರಲ್ಲಿ, ಟ್ರಂಪ್ ಅವರನ್ನುದ್ದೇಶಿಸಿ, ‘‘ ಆಡಳಿತಕ್ಕೆ ಸ್ವಾಗತ. ಮುಂದಿನ ನಾಲ್ಕು ವರ್ಷಗಳ ಕಾಲ, ನೀವು ನಿಮ್ಮ ಹಿಮ್ಮಡಿಗಳನ್ನು ಕೆರೆಯುತ್ತಾ, ಜಗತ್ತಿನಲ್ಲಿ ನಮ್ಮ ದೇಶದ ಘನತೆ ಹಾಗೂ ಗೌರವವನ್ನು ಮೂಲೆಗುಂಪು ಮಾಡುವಿರಾ ?.... ಆಡಳಿತ ಹಾಗೂ ರಾಜಕೀಯ ಅಸಾಮರ್ಥ್ಯವನ್ನು ಪ್ರದರ್ಶಿಸುವುದನ್ನು ನೀವು ಮುಂದುವರಿಸುವಿರಾ...? ’’ ಎಂದು ಕುಟುಕಿದ್ದರು.

 ಅದಾದ ಒಂದು ತಿಂಗಳ ಬಳಿಕ ಕ್ವಾನ್ , ಫೇಸ್‌ಬುಕ್‌ನಲ್ಲಿ ಪೋಸ್ಟ್‌ಮಾಡಿದ ಇನ್ನೊಂದು ಸಂದೇಶದಲ್ಲಿ, ಫ್ಯಾಶಿಸ್ಟ್ ಆಳ್ವಿಕೆಗೆ ಸ್ವಾಗತ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News