×
Ad

ಸೌದಿ: ಜಿಝಾನ್ ವಿಮಾನ ನಿಲ್ದಾಣದ ಮೇಲೆ ಯೆಮನ್ ಬಂಡುಕೋರರಿಂದ ಡ್ರೋನ್ ದಾಳಿ ?

Update: 2019-05-26 22:49 IST

 ಸೌದಿ, ಮೇ26: ಯೆಮನ್‌ನ ಬಂಡುಕೋರರು ಸೌದಿ ಅರೇಬಿಯದ ಗಡಿಯಲ್ಲಿರುವ ಜಿಝಾನ್ ವಿಮಾನನಿಲ್ದಾಣ ಸಮೀಪದಲ್ಲಿರುವ ಸೇನಾ ನೆಲೆಗಳ ಮೇಲೆ ಡ್ರೋನ್ ದಾಳಿ ನಡೆಸಿದ್ದಾರೆಂದು ಬಂಡುಕೋರ ಗುಂಪಿನ ಮಾಸಿರಾ ಟಿವಿ ವರದಿ ಮಾಡಿದೆ.

 ಆದರೆ ಹುದಿ ಬಂಡುಕೋರರ ಈ ದಾಳಿಯ ಬಗ್ಗೆ ಸೌದಿ ಅಧಿಕಾರಿಗಳಾಗಲಿ ಅಥವಾ ಕಳೆದ ನಾಲ್ಕು ವರ್ಷಗಳಿಂದ ಯೆಮನ್‌ನಲ್ಲಿ ಹುದಿ ಬಂಡುಕೋರರ ಜೊತೆ ಕದನ ನಿರತವಾಗಿರುವ ಸೌದಿ ನೇತೃತ್ವದ ಮಿತ್ರಪಡೆಯಾಗಲಿ ದೃಢಪಡಿಸಿಲ್ಲ.

   2014ರ ಅಂತ್ಯದಲ್ಲಿ ಹುದಿ ಬಂಡುಕೋರರು, ಸೌದಿ ಬೆಂಬಲಿತ ಹಾಗೂ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಯೆಮನ್ ಸರಕಾರವನ್ನು ಪದಚ್ಯುತಗೊಳಿಸಿದ್ದರು. ಆ ಬಳಿಕ ಸೌದಿ ನೇತೃತ್ವದ ಮಿತ್ರಪಡೆ ಹಾಗೂ ಹುದಿ ಬಂಡುಕೋರರ ನಡುವೆ ಸಂಘರ್ಷ ಭುಗಿಲೆದ್ದಿತ್ತು. ಕಳೆದ ಎರಡು ವಾರಗಳಲ್ಲಿ ಹುದಿ ಬಂಡುಕೋರರು ಸೌದಿಯ ನಗರಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News