7ನೇ ಪದವಿಪೂರ್ವ ಸಂಶೋಧನಾ ಸ್ಪರ್ಧೆಯಲ್ಲಿ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಪ್ರಥಮ

Update: 2019-05-28 17:48 GMT

ಅಬುಧಾಬಿ, ಮೇ 28: ಶಿಕ್ಷಣ ಸಚಿವ ಹುಸೇನ್ ಇಬ್ರಾಹಿಂ ಅಲ್ ಹಮ್ಮದಿ ಅವರ ಪ್ರೋತ್ಸಾಹದೊಂದಿಗೆ ಅಬುಧಾಬಿ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ನಡೆದ 7ನೇ ಅಂಡರ್ ಗ್ರಾಜವೇಟ್ ಸಂಶೋಧನಾ ಸ್ಪರ್ಧೆಯ ಶಿಕ್ಷಣ ಮತ್ತು ಬೋಧನ ತಂತ್ರಜ್ಞಾನಗಳು ವಿಭಾಗದಲ್ಲಿ ಅಜ್ಮನ್‌ನ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯದ ಕಾಲೇಜ್ ಆಫ್ ಮೆಡಿಸಿನ್‌ನ 4ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದಿದ್ದಾರೆ.

ತಮ್ಮ ಯೋಜನೆಯನ್ನು ತೀರ್ಪುಗಾರರ ಮುಂದೆ ಪ್ರದರ್ಶಿಸಿದ ಖುಷ್ಬೂ ಬದಿಉಝ್ ಝಮನ್ ಪ್ರಥಮ ಬಹಮಾನ 5,000 ದಿರ್ಹಮನ್ನು ಸ್ವೀಕರಿಸಿದರು.

ಆರೋಗ್ಯ ವಿಜ್ಞಾನ ವಿದ್ಯಾರ್ಥಿಗಳನ್ನು ಕಲಿಕೆಗೆ ಅಡ್ಡಿಪಡಿಸುವ ಅಂಶಗಳು ಎಂಬ ಹೆಸರಿನ ಸಂಶೋಧನಾ ಯೋಜನೆಯಲ್ಲಿ ಖಾದೀಜ ಹಲ ಇಬ್ರಾಹಿಂ, ಹಸ್ನ ಮುಹಮ್ಮದ್ ಅಲಿ, ಶಮ್ರೀನಾ ಕೊಲಯಕ್ಕರಕತ್ ಮತ್ತು ಫಾತಿಮಾತುಲ್ ನಝಾ ನೆರವಾಗಿದ್ದರು. ಈ ವಿದ್ಯಾರ್ಥಿಗಳು ಸಮುದಾಯ ಔಷಧಿ ವಿಭಾಗದ ಮುಖ್ಯಸ್ಥ ಪ್ರೊ. ಶತ ಅಲ್ ಶರ್ಬತ್ತಿ ಅವರ ಮೇಲ್ವಿಚಾರಣೆಯಲ್ಲಿ ತಮ್ಮ ಯೋಜನೆಯನ್ನು ರೂಪಿಸಿದ್ದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಖುಷ್ಬೂ, 44 ವಿಶ್ವವಿದ್ಯಾನಿಲಯಗಳ 261 ಯೋಜನೆಗಳ ಪೈಕಿ ಒಂದಾಗಿರಲು ಅತ್ಯಂತ ಹೆಮ್ಮೆಯೆನಿಸುತ್ತದೆ. ಅದರಲ್ಲೂ ಪ್ರಥಮ ಸ್ಥಾನ ಪಡೆಯುವುದೆಂದರೆ, ಇದೆಲ್ಲವೂ ಕನಸಿನಂತೆ ಭಾಸವಾಗುತ್ತದೆ. ಈ ಅವಕಾಶವನ್ನು ನೀಡಿದ ನನ್ನ ವಿಶ್ವವಿದ್ಯಾನಿಲಯಕ್ಕೆ ಧನ್ಯವಾದ ಸೂಚಿಸಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News