ಅಜ್ಮನ್ ವಿಶ್ವವಿದ್ಯಾನಿಲಯದ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯ

Update: 2019-05-28 17:51 GMT

ಅಜ್ಮನ್, ಮೇ 28: ಜಗತ್ತಿನಾದ್ಯಂತ ತನ್ನ ಜೊತೆಗಾರ ವಿಶ್ವವಿದ್ಯಾನಿಲಯಗಳ ಜಾಲವನ್ನು ವಿಸ್ತರಿಸುವ ಉದ್ದೇಶದ ಭಾಗವಾಗಿ ಅಜ್ಮನ್‌ನ ಗಲ್ಫ್  ವೈದ್ಯಕೀಯ ವಿಶ್ವವಿದ್ಯಾನಿಲಯ ಅಜ್ಮನ್ ವಿಶ್ವವಿದ್ಯಾನಿಲಯದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಜಿಎಂಯು ಕುಲಪತಿ ಪ್ರೊ. ಹೊಸ್ಸಮ್ ಹಮ್ದಿ ಮತ್ತು ಎಯು ಕುಲಪತಿ ಅಬ್ದುಲ್ ಕರೀಂ ಸೆಗಿರ್ ಮೇ 27ರಂದು ಜಿಎಂಯು ಕ್ಯಾಂಪಸ್‌ನಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದರು.

ಈ ಒಪ್ಪಂದವು, ಎರಡು ವಿಶ್ವವಿದ್ಯಾನಿಲಯಗಳ ಮಧ್ಯೆ ಪರಸ್ಪರ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗಾವಣೆ, ಜಂಟಿ ವೈಜ್ಞಾನಿಕ ಸಂಶೋಧನೆ, ದ್ವಿಪದವಿ ಕಾರ್ಯಕ್ರಮಗಳು ಮತ್ತು ಶೈಕ್ಷಣಿಕ ಸಾಧನಗಳು ಮತ್ತು ಮುದ್ರಣಗಳ ಬದಲಾವಣೆಯ ಜೊತೆಗೆ ವೃತ್ತಿಪರ ತರಬೇತಿ ಮತ್ತು ತಾಂತ್ರಿಕ ಸಹಕಾರದ ಉದ್ದೇಶ ಹೊಂದಿದೆ.

ಒಪ್ಪಂದಕ್ಕೆ ಸಹಿ ಹಾಕಿ ಮಾತನಾಡಿದ ಹೊಸ್ಸಮ್ ಹಮ್ದಿ, ವಿಶ್ವವಿದ್ಯಾನಿಯಗಳ ಮಧ್ಯೆ ಸಹಯೋಗದಿಂದ ಯುಎಇ ಮತ್ತು ಸುತ್ತಮುತ್ತಲ ಪ್ರದೇಶದ ಮೇಲೆ ಅಗಾಧ ಪರಿಣಾಮ ಬೀರಲಿದೆ. ಪ್ರಮುಖ ಅತರ್‌ ರಾಷ್ಟ್ರೀಯ ಶೈಕ್ಷಣಿಕ ಆರೋಗ್ಯ ಸೇವೆ ಸಂಸ್ಥೆಯಾಗುವ ನಮ್ಮ ಯೋಜನೆಯನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿ ಅಜ್ಮನ್ ವಿಶ್ವವಿದ್ಯಾನಿಲಯ ಜೊತೆ ಮಾಡಿದ ಒಪ್ಪಂದ ಪ್ರಮುಖವಾಗಿದೆ ಎಂದು ತಿಳಿಸಿದ್ದಾರೆ.

ನಂತರ ಮಾತನಾಡಿದ ಡಾ. ಅಬ್ದುಲ್ ಕರೀಂ ಸೆಗಿರ್, ಈ ಜೊತೆಗಾರಿಕೆಯ ಮೂಲಕ ಎರಡೂ ವಿಶ್ವವಿದ್ಯಾನಿಲಯಗಳು ಗಳಿಸಲು ಮತ್ತು ಹಂಚಲು ಬಹಳಷ್ಟಿದೆ. ಜಿಎಂಯು ಮತ್ತು ತುಂಬೆ ಮೆಡಿಸಿಟಿಯಲ್ಲಿರುವ ಸೌಲಭ್ಯಗಳನ್ನು ಕಂಡು ನಾನು ಆಕರ್ಷಿತನಾಗಿದ್ದೇನೆ. ಜಿಎಂಯು ಹಿಂದಿನ ದೃಷ್ಟಿಕೋನ ಮತ್ತು ನಾಯಕತ್ವ ನನ್ನನ್ನು ಬಹುವಾಗಿ ಸೆಳೆಯಿತು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News