ಎಲ್‍ ಟಿಟಿಇ ಬಾಂಬ್‍ ದಾಳಿಗೆ ಹಿಂದುತ್ವ ಹೊಣೆಯಲ್ಲ ಎಂದಾದರೆ ಭಯೋತ್ಪಾದನೆಗೆ ಇಸ್ಲಾಂ ಜೊತೆ ಸಂಬಂಧ ಕಲ್ಪಿಸುವುದೇಕೆ

Update: 2019-06-02 08:36 GMT

ಮಕ್ಕಾ, ಜೂ.2: ಇಸ್ಲಾಂ ಹಾಗೂ ಭಯೋತ್ಪಾದನೆಗೆ ಯಾವುದೇ ಸಂಬಂಧ ಇಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

"ತಮಿಳು ಟೈಗರ್ಸ್ ಬಾಂಬ್ ದಾಳಿ ನಡೆಸಿದರೆ ಯಾರೂ ಹಿಂದುತ್ವವನ್ನು ದೂಷಿಸುವುದಿಲ್ಲ. ಅಮೆರಿಕದ ಹಡಗನ್ನು ಜಪಾನೀಯರು ಸ್ಫೋಟಿಸಿದರೆ ಜಪಾನಿ ಧರ್ಮವನ್ನು ದೂಷಿಸುವುದಿಲ್ಲ; ಆದ್ದರಿಂದ ಯಾಕೆ ಇಸ್ಲಾಂಗೆ ಈ ಹಣೆಪಟ್ಟಿ ಕಟ್ಟಬೇಕು?" ಎಂದು ಮಕ್ಕಾದಲ್ಲಿ ನಡೆದ ಇಸ್ಲಾಮಿಕ್ ಸಹಕಾರ ಸಂಸ್ಥೆ (ಒಐಸಿ)ಯಲ್ಲಿ ಮಾತನಾಡಿದ ಅವರು ಪ್ರಶ್ನಿಸಿದರು.

"ಇಸ್ಲಾಂ ಹಾಗೂ ಭಯೋತ್ಪಾದನೆಗೆ ಸಂಬಂಧವಿಲ್ಲ ಎನ್ನುವುದನ್ನು ವಿಶ್ವಕ್ಕೆ ಪ್ರಬಲವಾಗಿ ಮನವರಿಕೆ ಮಾಡುವಲ್ಲಿ ಮುಸ್ಲಿಂ ಜಗತ್ತು ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಐಒಸಿ ಈ ಅಪಪ್ರಚಾರದ ವಿರುದ್ಧ ಸ್ಪಷ್ಟನೆ ನೀಡಬೇಕು" ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News