ದುಬೈಯ ಫೆಲೆಸ್ತೀನ್ ರಾಯಬಾರ ಕಚೇರಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯ

Update: 2019-06-24 17:07 GMT

ದುಬೈ,ಜೂ.24: ಯುಎಇ ಮತ್ತು ಜಿಸಿಸಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಫೆಲೆಸ್ತೀನ್ ವಿದ್ಯಾರ್ಥಿಗಳಿಗೆ ಅರ್ಹತೆ ಆಧಾರಿತ ವಿದ್ಯಾರ್ಥಿವೇತನ ನೀಡುವ ಉದ್ದೇಶದಿಂದ ಅಜ್ಮನ್‌ನ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯ ದುಬೈಯಲ್ಲಿರುವ ಫೆಲೆಸ್ತೀನ್ ರಾಯಬಾರ ಕಚೇರಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಜೂನ್ 20ರಂದು ಜಿಎಂಯುನ ಆವರಣದಲ್ಲಿ ಡೆಪ್ಯೂಟಿ ಕೋನ್ಸೂಲ್ ಜನರಲ್ ಎಚ್.ಇ ಯೂಸುಫ್ ಅಲ್ ನಿಜ್ಜರ್ ಮತ್ತು ಜಿಎಂಯು ಕುಲಪತಿ ಪ್ರೊ.ಹೊಸ್ಸಮ್ ಹಮ್ದಿ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದದ ಪ್ರಕಾರ, ವಿಶ್ವವಿದ್ಯಾನಿಲಯದ ವಿದ್ಯಾರ್ಥಿವೇತನ ಮಾನದಂಡಗಳಿಗೆ ಸರಿಹೊಂದುವ ಫೆಲೆಸ್ತೀನ್ ವಿದ್ಯಾರ್ಥಿಗಳಿಗೆ ಜಿಎಂಯು ವಿದ್ಯಾರ್ಥಿವೇತನ ನೀಡಲಿದೆ.

ಒಪ್ಪಂದದ ಕುರಿತು ಮಾತನಾಡಿದ ಪ್ರೊ. ಹೊಸ್ಸಮ್ ಹಮ್ದಿ, ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬೆಲೆ ನೀಡುತ್ತದೆ ಮತ್ತು ನಮ್ಮ ಯೋಜನೆ ಆರೋಗ್ಯಸೇವೆಯ ಭವಿಷ್ಯವನ್ನು ರೂಪಿಸುವುದಾಗಿದೆ. ಕೊಳ್ಳುವಿಕೆ ಎನ್ನುವುದು ಕಲಿಕೆಗೆ ತಡೆಯಾಗಬಾರದು ಎಂದು ನಾವು ನಂಬುತ್ತೇವೆ. ಸಹಿಷ್ಣತೆಯ ಈ ವರ್ಷದಲ್ಲಿ ಮತ್ತು ಜಿಎಂಯುನ ಅಭಿಯಾನಗಳ ಭಾಗವಾಗಿ ನಾವು ವಿವಿಧ ರಾಷ್ಟ್ರೀಯತೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿದ್ದೇವೆ. ಯುಎಇ ಮತ್ತು ಸುತ್ತಮುತ್ತಲ ಪ್ರದೇಶದ ಸ್ಥಳೀಯ ಪ್ರತಿಭೆಗಳನ್ನು ಪೋಷಿಸುವುದು ಈ ಪ್ರದೇಶದ ಆರೋಗ್ಯಸೇವಾ ಕ್ಷೇತ್ರದ ಪ್ರಗತಿಗೆ ಬಹಳ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News