ಜೂ. 28 : ದುಬೈಯಲ್ಲಿ ಕನ್ನಡ ಡಾಕ್ಟರ್ ಗಳ ಸ್ನೇಹ ಮಿಲನ ಕಾರ್ಯಕ್ರಮ

Update: 2019-06-26 17:44 GMT

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ಅರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರುಗಳ " ಯುಎಇ  ಕನ್ನಡ ಡಾಕ್ಟರ್ಸ್ ಮೀಟ್ ಆ್ಯಂಡ್ ಗ್ರೀಟ್" ಎಂಬ ಕಾರ್ಯಕ್ರಮವು ಜೂ. 28 ನಡೆಯಲಿದೆ.

ಸಂಯುಕ್ತ ಅರಬ್ ಸಂಸ್ಥಾನದ ವಿವಿಧ ಎಮಿರೇಟುಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಅರೋಗ್ಯ ಕ್ಷೇತ್ರದಲ್ಲಿ ಸೇವೆಗಯ್ಯುತ್ತಿರುವ ನೂರಾರು ಕನ್ನಡ ನಾಡಿನ ವೈದ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಜೂ. 28ಕ್ಕೆ ಶೇಕ್ ಜಾಯೆದ್ ರಸ್ತೆಯಲ್ಲಿರುವ ಕೊನ್ರಾಡ್ ಹೋಟೆಲ್ ಸಭಾಂಗಣದಲ್ಲಿ ಮದ್ಯಾಹ್ನ 12ಕ್ಕೆ ಏರ್ಪಡಿಸಲಾಗಿದೆ ಎಂದು ಸಂಘಟಕರಾದ ಡಾ. ಸವಿತಾ ಮೋಹನ್ ಮೈಸೂರು  ಡಾ. ಲೇಖಾ ಅಪ್ಪಯ್ಯ ಕೊಡಗು, ರಫೀಕಲಿ ಕೊಡಗು, ಸುದೀಪ್ ದಾವಣಗೆರೆ, ಸೆಂತಿಲ್ ಬೆಂಗಳೂರು, ಮಧು ಗೌಡರ್, ಮಮತಾ ರಾಘವೇಂದ್ರ, ಮಮತಾ ಶಾರ್ಜಾ, ಪಲ್ಲವಿ ಬಸವರಾಜ್, ಶಶಿಧರ್, ವೆಂಕಟೇಶ್, ಅನಿತಾ ರಾಮ್, ವಿಷ್ಣುಮೂರ್ತಿ ಮೈಸೂರು, ಹಾದಿಯ ಮಂಡ್ಯ, ಸತೀಶ್ ಮಸೂರ್ ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ 0567012123, 0581872686 ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News