ಕೆಸಿಎಫ್ ಹೋರ್ಲಂಝ್ ಸೆಕ್ಟರ್ ನೂತನ ಸಮಿತಿ ಅಸ್ತಿತ್ವಕ್ಕೆ

Update: 2019-06-30 15:49 GMT
ಅಬ್ದುಲ್ ರಹಿಮಾನ್- ಹಬೀಬ್ ಸಜೀಪ- ಶಾಫಿ ಉಪ್ಪಳ

ದುಬೈ, ಜೂ.30: ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ದುಬೈ ನೋರ್ತ್ ಝೋನ್ ಅಧೀನದ ಹೋರ್ಲಂಝ್ ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಹೋರ್ಲಂಝ್ ತಂಙಳ್ ಮಸೀದಿಯಲ್ಲಿ ಸೆಕ್ಟರ್ ಅಧ್ಯಕ್ಷ ಹಮೀದ್ ಅಳಿಕೆ ಅಧ್ಯಕ್ಷತೆಯಲ್ಲಿ ನಡೆಯಿತು.

ರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ಜಲೀಲ್ ನಿಝಾಮಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಷ್ಟ್ರೀಯ ಸಮಿತಿ ಸದಸ್ಯ ರಫೀಕ್ ಜೆಪ್ಪು ಅವರು ಉದ್ಘಾಟಿಸಿದರು. ಬಳಿಕ 2018-2019 ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಿದರು. ವರದಿ ಹಾಗೂ ಲೆಕ್ಕಪತ್ರ ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಚುನಾವಣಾ ವೀಕ್ಷಕರಾಗಿ ಆಗಮಿಸಿದ ಪಬ್ಲಿಕೇಶನ್ ಅಧ್ಯಕ್ಷ ಮಜೀದ್ ಮಂಜನಾಡಿ ಹಾಗೂ ಝೋನ್ ಸಮಿತಿಯ ಶಿಕ್ಷಣ ಅಧ್ಯಕ್ಷ ಅಬ್ದುಲ್ ಅಝೀಝ್ ಲತ್ವೀಫಿ ಸರದಿ ಸಮಿತಿಯನ್ನು ವಿಸರ್ಜಿಸಿ ಹೊಸ ಸಮಿತಿಯನ್ನು ರಚಿಸಿದರು.

2019-21 ಸಾಲಿನ ನೂತನ ಸಾರಥಿಗಳು 

ಹೋರ್ಲಂಝ್ ಸೆಕ್ಟರ್ ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಸಂತಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಹಬೀಬ್ ಸಜೀಪ, ಕೋಶಾಧಿಕಾಯಾಗಿ ಶಾಫಿ ಉಪ್ಪಳ ನೇಮಕಗೊಂಡರು.

ಶಿಕ್ಷಣ ವಿಭಾಗ ಅಧ್ಯಕ್ಷರಾಗಿ ಇಬ್ರಾಹಿಂ ಮದನಿ, ಕಾರ್ಯದರ್ಶಿಯಾಗಿ ನೌಫಲ್ ಕೋಳಿಯೂರು, ಸಾಂತ್ವನ ವಿಭಾಗದ ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಬುಸ್ತಾನಿ,  ಕಾರ್ಯದರ್ಶಿಯಾಗಿ ಸಿದ್ದೀಖ್ ಮೂಲಾ,  ಪ್ರಕಾಶನ ಮತ್ತು ಪ್ರಚಾರ ವಿಭಾಗ ಅಧ್ಯಕ್ಷರಾಗಿ ಸಹದ್ ಕೋಳಿಯೂರು, ಕಾರ್ಯದರ್ಶಿಯಾಗಿ ತನ್ವೀರ್ ನಾಪೋಕ್ಲು, ಇಹ್ಸಾನ್ ವಿಭಾಗದ ಅಧ್ಯಕ್ಷರಾಗಿ ಹಮೀದ್ ಕಬಾಯಿಲ್,  ಕಾರ್ಯದರ್ಶಿಯಾಗಿ ಸ್ವಾದೀಖ್ ಬಜಲ್, ಕಾರ್ಯ ನಿರ್ವಹಣಾ ವಿಭಾಗದ ಅಧ್ಯಕ್ಷರಾಗಿ ಇರ್ಫಾನ್ ಕಾಟಿಪಳ್ಳ, ಕಾರ್ಯದರ್ಶಿಯಾಗಿ ಹಾರಿಸ್ ಕೋಳಿಯೂರು ಆಯ್ಕೆಯಾದರು.

ಕೆಸಿಎಫ್ ರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ಜಲೀಲ್ ನಿಝಾಮಿ ಉಸ್ತಾದರು ತರಗತಿ ನಡೆಸಿದರು. ಝೋನ್ ಅಧ್ಯಕ್ಷ ಅಬ್ದುಲ್ಲಾ ಉಸ್ತಾದ್ ಹಾಗೂ ತಂಙಳ್ ಮಸೀದಿಯ ಇಮಾಮ್ ಇಬ್ರಾಹಿಂ ಮದನಿ ಉಸ್ತಾದ್ ನೂತನ ಸಮಿತಿಗೆ ಅಭಿನಂದನೆ ಕೋರಿದರು.

ಸೆಕ್ಟರ್ ಉಸ್ತುವಾರಿ ಅರಫಾತ್ ನಾಪೋಕ್ಲು, ಝೋನ್ ನಾಯಕರಾದ ಇಸ್ಮಾಯಿಲ್ ಮದನಿ ನಗರ, ನಿಯಾಝ್ ಬಸರ, ಲತೀಫ್ ಪಾತೂರ್, ಅಬ್ಬಾಸ್ ಮಂಜನಾಡಿ ಹಾಗೂ ಸೆಕ್ಟರ್ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು. 

ಸೆಕ್ಟರ್ ಶಿಕ್ಷಣ ಕಾರ್ಯದರ್ಶಿ ಹಬೀಬ್ ಸಜೀಪ ಸ್ವಾಗತಿಸಿ, ನೂತನ ಸೆಕ್ಟರ್ ಅಧ್ಯಕ್ಷ ರಹಿಮಾನ್ ಸಂತಡ್ಕ ಧನ್ಯವಾದ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News