ಮಕ್ಕಾ: ಭಾರತದ ಪ್ರಥಮ ಹಜ್ ತಂಡಕ್ಕೆ ಕೆಸಿಎಫ್ ಸ್ವಯಂಸೇವಕರಿಂದ ಸ್ವಾಗತ

Update: 2019-07-13 08:31 GMT

ಮಕ್ಕಾ, ಜು.13: ಪ್ರಸಕ್ತ (2019ನೇ) ಸಾಲಿನ ಪವಿತ್ರ ಹಜ್ ನಿರ್ವಹಿಸಲು ಭಾರತದ ದಿಲ್ಲಿಯಿಂದ ಅಗಮಿಸಿದ ಪ್ರಥಮ ತಂಡವು ಇಂದು ಪವಿತ್ರ ಮದೀನಾ ಮುನವ್ವರದಿಂದ ಮಕ್ಕಾ ನಗರಕ್ಕೆ ತಲುಪಿದೆ. ಈ ಸಂದರ್ಭ ಯಾತ್ರಾರ್ಥಿಗಳನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್)ನ ಹಜ್ಜ್ ಸ್ಟಯಂ ಸೇವಕರು(ಎಚ್.ವಿ.ಸಿ.) ಆತ್ಮೀಯವಾಗಿ ಸ್ವಾಗತಿಸಿದರು.

ಇದೇ ವೇಳೆ ಭಾರತದ ರಾಯಭಾರಿಯಾಗಿ ಆಗಮಿಸಿದ ಡಾ| ಆಸಿಫ್ ಸಯೀದ್ ಹಾಗೂ  ಭಾರತ ದೂತವಾಸ ಕಚೇರಿಯ ಸಲಹೆಗಾರರಾದ ನೂರ್ ರಹ್ಮಾನ್ ಶೇಖ್ ಅವರನ್ನು ಕೆಸಿಎಫ್ ಮಕ್ಕತ್ತುಲ್ ಮುಕರ್ರಮಃ ಸೆಕ್ಟರ್ ಎಚ್.ವಿ.ಸಿ ತಂಡದ ವತಿಯಿಂದ ಹೂ ಗುಚ್ಛಗಳನ್ನು ನೀಡಿ ಸನ್ಮಾನಿಸಲಾಯಿತು.

ಯಾತ್ರಾರ್ಥಿಗಳಿಗೆ ಮಕ್ಕಾದ ವಸತಿ ಕೇಂದ್ರಗಳ ಕೂಠಡಿಗಳಿಗೆ ಲಗೇಜು, ಸಾಮಾಗ್ರಿಗಳನ್ನು ಕೊಂಡೊಯ್ಯಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News