ಬಂದರಿನ ಮೂಲಕ ಹಜ್ ಯಾತ್ರಿಕರನ್ನು ಸ್ವೀಕರಿಸಲು ಸೌದಿ ಸಜ್ಜು

Update: 2019-07-16 14:42 GMT

ಜಿದ್ದಾ (ಸೌದಿ ಅರೇಬಿಯ), ಜು. 16: ಈ ವರ್ಷದ ಹಜ್ ಋತುವಿನಲ್ಲಿ ಸಮುದ್ರ ಯಾನದ ಮೂಲಕ ಬರುವ ಯಾತ್ರಿಕರನ್ನು ಜಿದ್ದಾ ಇಸ್ಲಾಮಿಕ್ ಬಂದರಿನ ಮೂಲಕ ಸ್ವಾಗತಿಸಲು ಸೌದಿ ಬಂದರುಗಳ ಪ್ರಾಧಿಕಾರವು ಸಮಗ್ರ ಯೋಜನೆಯೊಂದನ್ನು ರೂಪಿಸಿದೆ.

ಯಾತ್ರಿಕರು ಸೌದಿ ಅರೇಬಿಯಕ್ಕೆ ಕಾಲಿಟ್ಟಂದಿನಿಂದ ಅವರು ವಾಪಸಾಗುವವರೆಗೆ ಅವರ ಯೋಗಕ್ಷೇಮವನ್ನು ಪ್ರಾಧಿಕಾರವು ನೋಡಿಕೊಳ್ಳುತ್ತದೆ ಹಾಗೂ ಹಜ್ ಯಾತ್ರೆಯನ್ನು ಒದಗಿಸುತ್ತದೆ.

 ಈ ಬಂದರಿನ ಮೂಲಕ ಜುಲೈ 17ರಿಂದ ಆಗಸ್ಟ್ 6ರವರೆಗೆ ಹಜ್ ಯಾತ್ರಿಕರನ್ನು ಸ್ವೀಕರಿಸಲಾಗುತ್ತದೆ. ಬಂದರಿನ ಮೂಲಕ ಈ ಬಾರಿ ಸುಮಾರು 22,000 ಯಾತ್ರಿಕರು ಆಗಮಿಸುವ ನಿರೀಕ್ಷೆ ಇದೆ. ಕಳೆದ ವರ್ಷ ಬಂದರಿನ ಮೂಲಕ 16,000 ಮಂದಿ ಆಗಮಿಸಿದ್ದರು.

ಗಂಟೆಗೆ 800ಕ್ಕೂ ಅಧಿಕ ಮಂದಿಯನ್ನು ಸ್ವೀಕರಿಸಲು ಸಾಧ್ಯವಾಗುವಂತೆ ಬಂದರಿನ ಟರ್ಮಿನಲ್‌ನ್ನು ಸಿದ್ಧಪಡಿಸಲಾಗಿದೆ. ಟರ್ಮಿನಲ್‌ನಲ್ಲಿ ಐದು ಲಾಂಜ್‌ಗಳಿದ್ದು, ಮೂರು ಲಾಂಜ್‌ಗಳು ಆಗಮನಕ್ಕಾಗಿ ಹಾಗೂ ಎರಡು ಲಾಂಜ್‌ಗಳು ನಿರ್ಗಮನಕ್ಕಾಗಿ.

ಈ ಬಾರಿಯ ಹಜ್ ಋತುವಿನಲ್ಲಿ 266ಕ್ಕೂ ಅಧಿಕ ಸಿಬ್ಬಂದಿ ಬಂದರಿನಲ್ಲಿ ಯಾತ್ರಿಕರ ಸೇವೆಗೆ ಲಭ್ಯರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News