ಮದೀನಾ ತಲುಪಿದ ಮಂಗಳೂರಿನ ಪ್ರಥಮ ಹಜ್ ಯಾತ್ರಿಕರ ತಂಡ

Update: 2019-07-18 09:13 GMT

ಸೌದಿ ಅರೇಬಿಯಾ, ಜು.18: ಕರ್ನಾಟಕ ರಾಜ್ಯ ಹಜ್ ಸಮಿತಿಯ ವತಿಯಿಂದ ಮಂಗಳೂರು ಹಜ್ ಕ್ಯಾಂಪ್ ಮೂಲಕ ಪವಿತ್ರ ಹಜ್ ಯಾತ್ರೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬುಧವಾರ ಸಂಜೆ ತೆರಳಿದ ಪ್ರಥಮ ತಂಡ ಸ್ಥಳೀಯ ಸಮಯ ರಾತ್ರಿ 9:30ರ ಸುಮಾರಿಗೆ ಮದೀನಾ ಮುನವ್ವರ ತಲುಪಿದೆ.

ಮದೀನಾ ಮುನವ್ವರದ ಪ್ರಿನ್ಸ್ ಮುಹಮ್ಮದ್ ಬಿನ್ ಅಬ್ದುಲ್ ಅಝೀಝ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ 75 ಪುರುಷರು ಹಾಗೂ 75 ಮಹಿಳೆಯರನ್ನು ಒಳಗೊಂಡ 150 ಮಂದಿಯ ಪ್ರಥಮ ಹಜ್ ತಂಡವನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆ.ಸಿ.ಎಫ್) ಹಜ್ ಸ್ವಯಂ ಸೇವಕರ ತಂಡ ಆತ್ಮೀಯವಾಗಿ ಸ್ವಾಗತಿಸಿತು. ದೀರ್ಘ ಪ್ರಯಾಣದಿಂದ ದಣಿದ ಯಾತ್ರಾರ್ಥಿಗಳಿಗೆ ನೀರು, ಖರ್ಜೂರ ಸೇರಿದಂತೆ ಫಲಾಹಾರದ ಕಿಟ್ ನೀಡಿ ಪವಿತ್ರ ನಗರ ಮದೀನಕ್ಕೆ ಬರಮಾಡಿಕೊಂಡರು.

ಯಾತ್ರಾರ್ಥಿಗಳ ವಸತಿ ಕೇಂದ್ರಕ್ಕೆ ತೆರಳಿ ಪ್ರವಾದಿ ನಗರ ಮದೀನಾ ಮುನವ್ವರದ ಬಗ್ಗೆ ಅತ್ಯಗತ್ಯ ಮಾಹಿತಿ ನೀಡಲಾಯಿತು ಎಂದು ಕೆಸಿಎಫ್ ಪ್ರಕಟನೆ ತಿಳಿಸಿದೆ.

Full View

Writer - ವರದಿ : ಹಕೀಂ ಬೋಳಾರ್

contributor

Editor - ವರದಿ : ಹಕೀಂ ಬೋಳಾರ್

contributor

Similar News