ತ್ವಾಯಿಫ್: ಮಂಜನಾಡಿ ಅಬ್ಬಾಸ್ ಉಸ್ತಾದ್ ಅನುಸ್ಮರಣೆ, ತಹ್ಲೀಲ್ ಸಮರ್ಪಣೆ

Update: 2019-08-02 12:04 GMT

ತ್ವಾಯಿಫ್,ಅ.2: ಅಲ್ ಮದೀನಾ ಇಸ್ಲಾಮಿಕ್ ಸಂಸ್ಥೆ ಮಂಜನಾಡಿ ತ್ವಾಯಿಫ್ ಕಮಿಟಿ ಹಾಗೂ ಕೆಸಿಎಫ್ ತ್ವಾಯಿಫ್ ಸೆಕ್ಟರ್ ವತಿಯಿಂದ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಹೆಸರಿನಲ್ಲಿ ಖತಮುಲ್ ಖುರ್ಆನ್, ಜನಾಝ ನಮಾಝ್ ಹಾಗೂ ತಹ್ಲೀಲ್ ಸಮರ್ಪಣೆ ಇತ್ತೀಚೆಗೆ ತ್ವಾಯಿಫ್ ಕೆಸಿಎಫ್ ಭವನದಲ್ಲಿ ಇಕ್ಬಾಲ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಸ್ತುತ ಮಜ್ಲಿಸ್ ಗೆ ಹನೀಫ್ ಹಿಮಮಿ ಕುಂಡಡ್ಕ ನೇತ್ರತ್ವ ವಹಿಸಿ ಅನುಸ್ಮರಣಾ ಭಾಷಣ ಮಾಡಿ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಜೀವನ ಶೈಲಿ ಹಾಗೂ ಉಸ್ತಾದರು ಸಮುದಾಯಕ್ಕೆ ನೀಡಿದ ಕೊಡುಗೆಯನ್ನು ಪರಿಚಯಿಸಿದರು. ತ್ವಾಯಿಫ್ ಐಸಿಎಫ್ ದಾಯಿ ಕಮ್ಮು ಮುಸ್ಲಿಯಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಜನಾಝ ನಮಾಝ್ ಗೆ ಇಕ್ಬಾಲ್ ಮದನಿ ನೇತೃತ್ವ ನೀಡಿದರು.

ಮುಖ್ಯ ಅತಿಥಿಗಳಾಗಿ ಮುಹಮ್ಮದ್ ಝುಹ್ರಿ ಉಜಿರೆ, ಖಲೀಲ್ ನಈಮಿ ತಿರುವನಂತಪುರಂ, ನಾಸಿರ್ ಸಖಾಫಿ, ಬಶೀರ್ ಮುಸ್ಲಿಯಾರ್, ಮಲ್ಜಹ್ ಆರ್ಗನೈಸರ್ ಖಾಲಿದ್ ಕಬಕ, ಅಲ್ ಮದೀನಾ ಮಂಜನಾಡಿ ತ್ವಾಯಿಫ್ ಘಟಕದ ಕಾರ್ಯದರ್ಶಿ ಸಿದ್ದೀಕ್ ಕರೋಪಾಡಿ, ಕೋಶಾಧಿಕಾರಿ ಅರಬಿ ಕುಂಞಿ ಬೀರಿ, ಕೆಸಿಎಫ್ ಹವಯ್ಯ ಯುನಿಟ್, ಬಲದ್ ಯುನಿಟ್ ಹಾಗೂ ಶಿಹಾರ್ ಯುನಿಟ್ ಕಾರ್ಯಕರ್ತರು, ದಾರುಲ್ ಇರ್ಶಾದ್ ತ್ವಾಯಿಫ್ ಕಮಿಟಿ, ಡಿಕೆಎಸ್ಸಿ ತ್ವಾಯಿಫ್ ಘಟಕದ ನೇತಾರರು ಹಾಗೂ ಇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News