ಹಜ್ ಪರವಾನಿಗೆ ಇಲ್ಲದ 3.3 ಲಕ್ಷ ಮಂದಿಗೆ ತಡೆ

Update: 2019-08-05 17:12 GMT

ಜಿದ್ದಾ, ಆ. 5: ಹಜ್ ಋತು ಆರಂಭಗೊಂಡಂದಿನಿಂದ ಹಜ್ ಪರವಾನಿಗೆ ಇಲ್ಲದ 3,29,000ಕ್ಕೂ ಅಧಿಕ ಮಂದಿ ಮಕ್ಕಾ ನಗರ ಪ್ರವೇಶಿಸದಂತೆ ತಡೆಯಲಾಗಿದೆ ಎಂದು ಪವಿತ್ರ ನಗರದ ಗವರ್ನರ್ ರಾಜಕುಮಾರ ಖಾಲಿದ್ ಅಲ್-ಫೈಝಲ್ ರವಿವಾರ ತಿಳಿಸಿದರು.

ಪರವಾನಿಗೆ ಹೊಂದಿಲ್ಲದ 1,44,000ಕ್ಕೂ ಅಧಿಕ ವಾಹನಗಳು ನಗರ ಪ್ರವೇಶಿಸುವುದನ್ನು ತಡೆಯಲಾಗಿದೆ ಎಂದರು. ಅಕ್ರಮವಾಗಿ ಯಾತ್ರಿಕರನ್ನು ಸಾಗಿಸಿರುವುದಕ್ಕಾಗಿ 15 ಚಾಲಕರನ್ನು ಬಂಧಿಸಲಾಗಿದೆ ಹಾಗೂ 181 ನಕಲಿ ಹಜ್ ಕಚೇರಿಗಳನ್ನು ಮುಚ್ಚಲಾಗಿದೆ ಎಂದು ಸುಪ್ರೀಮ್ ಹಜ್ ಸಮಿತಿಯ ಅಧ್ಯಕ್ಷರೂ ಆಗಿರುವ ಗವರ್ನರ್ ನುಡಿದರು.

ಹಾಂಕಾಂಗ್‌ನಲ್ಲಿ ಸೋಮವಾರ ನಡೆದ ಗಡಿಪಾರು ಮಸೂದೆ ವಿರೋಧಿ ಪ್ರತಿಭಟನೆಯ ವೇಳೆ ಜನರು ಸಂಸತ್ತು ಕಟ್ಟಡದ ಸಮೀಪ ಬೃಹತ್ ಧರಣಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News