​ಮುಈಸುನ್ನಾ ಮೋರಲ್ ಅಕಾಡಮಿಯ ಸೌದಿ ರಾಷ್ಟ್ರೀಯ ಸಮಿತಿ ಅಸ್ತಿತ್ವಕ್ಕೆ

Update: 2019-08-19 16:08 GMT

ಮಕ್ಕಾ: ಹಾವೇರಿಯ ಮುಈಸುನ್ನಾ ಮೋರಲ್ ಅಕಾಡಮಿಯ ಸೌದಿ ರಾಷ್ಟ್ರೀಯ ಸಮಿಟ್ ಕಾರ್ಯಕ್ರಮ ಮಸ್ಜಿದುಲ್ ಹರಮ್ ಸಮೀಪದ ಕ್ಲಾಕ್ ಟವರಿನಲ್ಲಿ ಸಂಸ್ಥೆಯ ಅಧ್ಯಕ್ಷ ಸೈಯದ್‌ಶಯೀರ್ ಅಲ್ ಬುಖಾರಿ ತಂಙಳ್‌ರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿತು.

ಎಸ್ಸೆಸ್ಸೆಫ್ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಡಾ.ಫಾರೂಕ್ ನಈಮಿ ಉದ್ಘಾಟಿಸಿದರು. ಹಜ್ ಕಮಿಟಿಯ ಸದಸ್ಯ ಹಾಗೂ ಸಂಸ್ಥೆಯ ಸಂಚಾಲಕ ಕೆ.ಎಂ. ಅಬೂಬಕರ್ ಸಿದ್ದೀಕ್ ಮೊಂಟುಗೋಳಿ ಸಂಸ್ಥೆಯ 6 ವರ್ಷಗಳ ಯೋಜನೆಗಳ ಕುರಿತು ಮಾತನಾಡಿದರು.

ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾಗಿ ಅಝೀಝ್ ಸಅದಿ ಜುಬೈಲ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ತುರೈಬ್ ಆಯ್ಕೆಯಾದರು. ಕೆ.ಎಮ. ಮುಸ್ತಫಾ ನಈಮಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News